April 27, 2024

Bhavana Tv

Its Your Channel

ಶ್ರೀ ಯಕ್ಷಿ ಚೌಡೇಶ್ವರಿ ದೇವಸ್ಥಾನ ನೀಲಗೋಡದಲ್ಲಿ ವಿಜ್ರಂಭಣೆಯಿoದ ನಡೆದ ಕಾರ್ತೀಕ ದೀಪೊತ್ಸವ

ಹೊನ್ನಾವರ ತಾಲೂಕಿನ ದೇವಿ ದೇವಸ್ಥಾನಗಳಲ್ಲಿ ಒಂದಾದ ಶ್ರೀ ಯಕ್ಷಿ ಚೌಡೇಶ್ವರಿ ದೇವಸ್ಥಾನ ನೀಲಗೋಡದಲ್ಲಿ ಕಾರ್ತೀಕ ದೀಪೊತ್ಸವ ವಿಜೃಂಭಣೆಯಿAದ ನಡೆಯಿತು.
ಶ್ರೀ ಯಕ್ಷಿ ಚೌಡೇಶ್ವರಿ ಸನ್ನಿಧಾನದಲ್ಲಿ ಲೋಕಲ್ಯಾಣಾರ್ಥವಾಗಿ ವರ್ಷದುದ್ದಕ್ಕೂ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ ಅಂತೆಯೇ 21-11-2022 ಸೋಮವಾರ ರಾತ್ರಿ ಶ್ರೀ ದೇವಿಯ ಸನ್ನಿಧಿಯಲ್ಲಿ ವೈದಿಕರು ಶಾಸ್ತೋಕ್ತವಾಗಿ ದುರ್ಗಾದೀಪ ನಮಸ್ಕಾರ ದೇವಸ್ಥಾನದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ದಂಪತಿಗಳ ನೇತೃತ್ತವದಲ್ಲಿ ನಡೆಸಿಕೊಟ್ಟರು.ದೇವಸ್ಥಾನಕ್ಕೆ ಬಂದ ಎಲ್ಲಾ ಭಕ್ತಾಧಿಗಳು ದೀಪೊತ್ಸವದಲ್ಲಿ ಭಾಗಿಯಾದರು .ನಂತರ ಮಹಾಪೂಜೆ ನಡೆಯಿತು ನೆರೆದ ಎಲ್ಲಾ ಭಕ್ತರು ಶ್ರೀ ದೇವಿಯ ಮಹಾಪ್ರಸಾದ ವನ್ನು ಪಡೆದು ಧನ್ಯರಾದರು

error: