June 17, 2024

Bhavana Tv

Its Your Channel

ಕಲಿತ ಶಾಲೆಗೆ ಜನ್ಮದಿನದಂದು ಮಕ್ಕಳಿಗೆ ಸ್ಕೂಲ್ ಬ್ಯಾಗ್ ಕೊಡುಗೆ ನೀಡಿದ ಡಿ ಡಿ ಮಡಿವಾಳ

ಹೊನ್ನಾವರ :- ಕನ್ನಡ ಶಾಲೆಯಲ್ಲಿ ಕಲಿತ ಮಕ್ಕಳೂ ಕೂಡ ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಪಾಲಕರ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಕಲಿಸಲು ಶಿಕ್ಷಣ ತಜ್ಞರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಡಿ ಡಿ ಮಡಿವಾಳ ತಾವು ಕಲಿತ ಶಾಲೆಯ ಮಕ್ಕಳ ಸಂಗಡ ತಮ್ಮ ಜನ್ಮದಿನ ಆಚರಿಸಿ ಎಲ್ಲ ಮಕ್ಕಳಿಗೆ ಸ್ಕೂಲ್ ಬ್ಯಾಗ್ ನೀಡಿ ಮಾತನಾಡಿದರು.
ಹೊನ್ನಾವರ ಪಟ್ಟಣದ ಗುಣಗುಣಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹೊನ್ನಾವರ ಲಯನ್ಸ್ ಕ್ಲಬ್ ನಿಂದ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಕೆ ಸಿ ವರ್ಗಿಸ್ ಮಾತನಾಡಿ ಇದೊಂದು ಉತ್ತಮವಾದ ಕಾರ್ಯ ತಾನು ಕಲಿತ ಶಾಲೆಗೆ ಪ್ರತಿ ವರ್ಷ ದೇಣಿಗೆ ನೀಡಿ ತಮ್ಮ ಜನ್ಮದಿನ ಆಚರಿಸಿಕೊಳ್ಳುವದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು. ರೋಟರಿ ಕ್ಲಬ್ ಅಧ್ಯಕ್ಷರಾದ ಮಹೇಶ್ ಕಲ್ಯಾಣಪುರ್ ಮಕ್ಕಳಿಗೆ ತಮ್ಮ ಶಕ್ತಿಯ ಪೂರಕವಾದ ಕಥೆ ಹೇಳಿ ಮನರಂಜಿಸಿದರು.
ಶಾಲಾ ಮಕ್ಕಳು, ಪಾಲಕರು, ಸಮಿತಿ ಸದಸ್ಯರು ಶಿಕ್ಷಕರು ಶಾಲೆಗೆ ಕೊಟ್ಟ ದಾನವನ್ನು ನೆನಪಿಸಿ ಡಿ ಡಿ ಮಡಿವಾಳರನ್ನು ಸನ್ಮಾನಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಾಜೇಶ್ ಸಾಳೆಹಿತ್ತಲ, ಏನ್ ಜಿ ಭಟ್, ಶಿಕ್ಷಣಾಧಿಕಾರಿ ಕೃಷ್ಣನಂದ್ ಮಾತನಾಡಿದರು. . ಮುಖ್ಯಾಧ್ಯಾಪಕರಾದ ಆರ್. ಎಸ್ ನಾಯ್ಕ್, ಸಿ ಆರ್ ಪಿ. ಪ್ರಕಾಶ್ ಶೇಟ್, ಪಿ ಎಂ ಮಾಸ್ತಿಕಟ್ಟೆ, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಪಾಲಕರು ಹಾಜರಿದ್ದರು.

error: