
ಹೊನ್ನಾವರ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಹೊಂದಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್. ಎಂ. ಹೆಗಡೆ ಹೇಳಿದರು. ಅವರು ಹೊನ್ನಾವರ ತಾಲೂಇನ ಹೆರಂಗಡಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷ ಪ್ರಮೋದ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಕಲಿಸಿರಿ
ಎಂದರು.
ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಉದಯ ನಾಯ್ಕ, ಜಿಪಿ ದಾವುದ್, ಖಾಜಾ ಅಸ್ಕಾರ, ಜಮಾಯತ್ ಅಧ್ಯಕ್ಷರು ಉಪಸ್ಥಿತರಿದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ಹುಸೇನ್ ಮುಕೇಸರ್, ಶಾಲೆಗೆ ಧನಸಹಾಯ ಮಾಡಿದ ಜಾಫರ್ ಸಾದಿಕ್ ಮುಕ್ತಸರ್ ಉಪಸ್ಥಿತರಿದ್ದರು.
ಮುಖ್ಯಾಧ್ಯಾಪಕಿ ಮುಕ್ತಾ ನಾಯ್ಕ ಸ್ವಾಗತಿಸಿದರು. – ಶಿಕ್ಷಕಿ ಸುವಿಧಾ ನಾಯ್ಕ ವರದಿ ವಾಚಿಸಿದರು. ಸುಹಾನಾ ವಂದನಾರ್ಪಣೆ ಮಾಡಿದರು. ಅಲಿ ಅಕ್ಟರ್ ಹಾಗೂ ರೇಷ್ಮಾ ಕೌಸರ್, ಸುಹಾನಾ, ಉಮೇರಾ ನಿರ್ವಹಿಸಿದರು. ನಂತರ ಮನರಂಜನಾ ಕಾರ್ಯಕ್ರಮ ನಡೆಯಿತು.
ಸಾರ್ವಜನಿಕರ ಸಲುವಾಗಿ ನೀರು ಬಾಟಲ್, ಮತ್ತು ಲಕ್ಕಿ ಕೋಪನ್ ಇಟ್ಟು , ಪ್ರಥಮ ಬಹುಮಾನ 10 ಸಾವಿರ, 2 ನೇ ಬಹುಮಾನ 5 ಸಾವಿರ ಮತ್ತು ತೃತೀಯ 3 ಸಾವಿರ ಹಾಘೂ , 4 ನೇ ಬಹುಮಾನ 1000 ನೀಡಲಾಯಿತು, ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಸ್ಯಾಂಡ್‌ವಿಚ್ ನೀಡಲಾಯಿತು.
ಎಲ್ಲ ಅಥಿತಿಗಳಿಗೆ ಸನ್ಮಾನಿಸಲಾಯಿತು, ಕಾರ್ಯಕ್ರಮದ ವೆಚ್ಚ ಸುಮಾರು 2 ಲಕ್ಷ ನಲವತೈದು ಸಾವಿರ ರೂಪಾಯಿಗಳನ್ನು ಕುವೈತ್ ನಿವಾಸಿ ಜಾಫರ್ ಹುಸೇನ್ ಮುಕ್ತೇಸರ್ ನೀಡಿದರು.

More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ