May 17, 2024

Bhavana Tv

Its Your Channel

ಹೊನ್ನಾವರ ಪಿ ಎಲ್ ಡಿ ಬ್ಯಾಂಕನಿoದ ತಾಲೂಕಾ ಆಸ್ಪತ್ರೆಗೆ ಡಯಾಲಿಸಿಸ್ ಮಷಿನ್ ಕೊಡುಗೆ

ಹೊನ್ನಾವರ :- “ಪಿ ಎಲ್ ಡಿ ಬ್ಯಾಂಕ ಪ್ರತಿ ವರ್ಷ ಬರುವ ಲಾಭಾಂಶದಲ್ಲಿ ಒಂದಿಷ್ಟು ಭಾಗವನ್ನು ಜನೋಪಯೋಗಿ ಕಾರ್ಯಕ್ಕೆ ಬಳಸಲಾಗುತ್ತಿದೆ. ಅದರಂತೆ ಈ ಸಲ ಹೊನ್ನಾವರ ತಾಲೂಕಾಸ್ಪತ್ರೆಗೆ ತೀರ ಅಗತ್ಯವಾದ ಡಯಾಲಿಸಿಸ್ ಮಷಿನ್‌ನ್ನು ನೀಡಿದ್ದೆವೆ. ಇದರಿಂದ ಕಿಡ್ನಿ ತೊಂದರೆಯಿAದ ಬಳಲುತ್ತಿರುವವರಿಗೆ ತುಂಬಾ ಅನೂಕೂಲವಾಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಅಗತ್ಯವಿರುವ ಸಹಾಯವನ್ನು ನಮ್ಮ ಬ್ಯಾಂಕ ವತಿಯಿಂದ ಮಾಡಲಿದ್ದೆವೆ” ಎಂದು ಹೊನ್ನಾವರ ಪಿ.ಎಲ್ ಡಿ ಬ್ಯಾಂಕ ಅಧ್ಯಕ್ಷರಾದ ವಿ.ಎನ್.ಭಟ್ ಅಳ್ಳಂಕಿ ಹೇಳಿದರು.
ಅವರು ತಾಲೂಕ ಆಸ್ಪತೆ ಹೊನ್ನಾವರದಲ್ಲಿ ಪಿ.ಎಲ್.ಡಿ ಬ್ಯಾಂಕ ನೀಡಿದ ಹೊಸ ಡಯಾಲಿಸಿಸ್ ಮಷಿನ್‌ನ್ನು ಉಧ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಹಾಜರಿದ ಬ್ಯಾಂಕ ನಿರ್ದೇಶಕರಾದ ಯೋಗೇಶ ರಾಯ್ಕರ ಮಾತನಾಡಿ “ಬ್ಯಾಂಕ ತನ್ನ ಇತಿಮಿತಿಯಲ್ಲಿ ತಾಲೂಕಾ ಆಸ್ಪತ್ರೆಗೆ ಸಹಾಯಹಸ್ತವನ್ನು ಚಾಚಿದೆ. ಇದರ ಪ್ರಯೋಜನ ಬಡ ರೋಗಿಗಳಿಗೆ ಸಿಗಲಿದೆ” ಎಂದು ಹೇಳಿದರು. ಆಸ್ಪತ್ರೆಯ ಸ್ತಿçà ರೋಗ ತಜ್ಞರಾದ ಡಾ|| ಕೃಷ್ಣಾ ಜಿ ರವರು ಮಾತನಾಡುತ್ತ “ಡಯಾಲಿಸಿಸ್ ಪ್ರಕ್ರಿಯೇ ಕಿಡ್ನಿ ತೊಂದರೆಯಿAದ ಬಳಲುತ್ತಿರುವವರಿಗೆ ಜೀವಿತ ಅವಧಿಯನ್ನು ಹೆಚ್ಚಿಸುವ ಒಂದು ತಾತ್ಕಲಿಕ ವ್ಯವಸ್ಥೆಯಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆ ಸಿಗುವದರಿಂದ ಬಡ ರೋಗಿಗಳಿಗೆ ತುಂಬಾನೆ ಪ್ರಯೋಜನವಾಗಿದೆ. ಪಿ.ಎಲ್.ಡಿ ಬ್ಯಾಂಕನವರ ಈ ಕೊಡುಗೆ ನಿಜಕ್ಕೂ ಶ್ಲಾಘನೀಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ನುಡಿಗಳನ್ನಾಡಿದ ಆಸ್ಪತೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿ ರವರು “ಪಿ.ಎಲ್.ಡಿ ಬ್ಯಾಂಕ ಕಳೆದೆರಡು ವರ್ಷಗಳಿಂದ ನಮ್ಮ ಆಸ್ಪತ್ರೆಗೆ ಸಹಾಯ ಹಸ್ತಚಾಚುತ ಬಂದಿರುವುದು ಅವರ ಸಮಾಜಮುಖಿ ಕಾರ್ಯಕ್ಕೆ ಕೈಗನ್ನಡಿಯಾಗಿದೆ. ಡಯಾಲಿಸಿಸ್ ಮಷಿನಿನ ತೊಂದರೆ ಉಂಟಾದಾಗ ಅದನ್ನು ಅರಿತು ಹೊಸ ಡಯಾಲಿಸಿಸ್ ಮಷಿನ್ ಕೊಡುಗೆಯಾಗಿ ನೀಡಿದ್ದಾರೆ. ಬ್ಯಾಂಕನವರ ಮಾನವೀಯ ಕಾರ್ಯಕ್ಕೆ ಅಭಿನಂದನೆಗಳು” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬ್ಯಾಂಕ ನಿರ್ದೇಶಕರುಗಳಾದ ವಿ.ಕೆ ವಿಶಾಲ್,ರಾಜೇಂದ್ರ ನಾಯ್ಕ,ಬ್ಯಾಂಕ ಪ್ರಧಾನ ವ್ಯವಸ್ಥಾಪಕರಾದ ಪಿ.ಎನ್ ಭಟ್, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ಶಶಿಕಲಾ ನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯ ಮತ್ತು ಬ್ಯಾಂಕ ಸಿಬ್ಬಂಧಿ ವರ್ಗ ಕಾರ್ಯಕ್ರಮದಲ್ಲಿ ಹಾಜರಿದ್ದರು.

error: