May 2, 2024

Bhavana Tv

Its Your Channel

ಮನೋಜ್ಞ ವಾದ ಸಂವಾದದಿoದ ಯಶಸ್ವಿಯಾದ ‘ವಾಲಿವಧೆ’

ಹೊನ್ನಾವರ :- ಯಕ್ಷಲೋಕ (ರಿ.) ಹಳದೀಪುರ, ಸ್ಫೂರ್ತಿರಂಗ ಹೊನ್ನಾವರ ಮತ್ತು ಶ್ರೀ ಮುರ್ಡೇಶ್ವರ ಪ್ರಸಾದಿತಯಕ್ಷಗಾನ ಮಂಡಳಿ ಮುರ್ಡೇಶ್ವರ ಇವುಗಳ ಸಂಯುಕ್ತಆಶ್ರಯದಲ್ಲಿ ಪಾರ್ತಿ ಸುಬ್ಬ ವಿರಚಿತ ವಾಲಿವಧೆ ತಾಳಮದ್ದಳೆ ಯಶಸ್ವಿಯಾಗಿ ನಡೆಯಿತು.
ಹಿಮ್ಮೇಳದಲ್ಲಿ ಗಣೇಶಯಾಜಿ ಇಡಗುಂಜಿ ಪ್ರಾರಂಭದಿAದ ಅಂತ್ಯದ ವರೆಗೂತಮ್ಮ ಮಾಧುರ್ಯ ಕಂಠದಿAದ ಜನಮನ ಮೆಚ್ಚಿಸಿದರು. ಮದ್ದಳೆಯಲ್ಲಿ ಪಿ.ಕೆ.ಹೆಗಡೆ ಹರಿಕೇರಿ, ಶ್ರೀಪಾದ ಭಟ್ಟ ಕಡತೋಕಾ ಮತ್ತು ಚಂಡೆಯಲ್ಲಿ ಕುಮಾರ ಮಯೂರ ಶುದ್ಧ ಬಿಡ್ತಿಗೆಗಳ ನಾದ ಲಯಗಳಿಂದ ಶೃತಿಬದ್ಧವಾಗಿ ನುಡಿಸಿ ಮನ ಸೂರೆಗೊಂಡರು. ಸುಗ್ರೀವನ ಪಾತ್ರಧಾರಿ ಗುರುಪ್ರಸಾದ ಭಟ್ಟ ಮತ್ತು ರಾಮನ ಅರ್ಥಧಾರಿ ರಾಘವೇಂದ್ರ ಗಾಯತೊಂಡೆ ಇವರ ನಡುವಿನ ಸಂವಾದ, ವಾಲಿಯ ಪಾತ್ರಧಾರಿ ಕೆ.ಬಿ.ಹೆಗಡೆ ತಾರೆಯ ಪಾತ್ರಧಾರಿ ಗಣಪತಿ ಕಾಯ್ಕಿಣಿ ಸಂವಾದ, ವಾಲಿ ಮತ್ತು ರಾಮರ ನಡುವಿನ ವಾದ ಸಂವಾದ ಪ್ರಸಂಗದ ಆಶಯ ಮತ್ತು ಉದ್ದೇಶಗಳಿಗನುಸಾರವಾದ ಅರ್ಥಗಾರಿಕೆಯಿಂದ ಸೇರಿದ ಸಭಿಕರೆಲ್ಲರ ಮನಮೆಚ್ಚಿಸಿದರು. ಎಸ್.ಆರ್.ಹೆಗಡೆ ಕೊಂಡದಕುಳಿ, ಡಾ. ಜಿ.ಕೆ.ಹೆಗಡೆ ಹರಿಕೇರಿ, ಎನ್.ಎಸ್.ಹೆಗಡೆ, ರಮೇಶ ನಾಯ್ಕ, ಜನಾರ್ದನ ಶೆಟ್ಟಿ, ಎಮ್.ಡಿ.ಹರಿಕಾಂತ ಮುಂತಾದವರು ಸೇರಿದ್ದರು. ಎಲ್ಲರನ್ನೂ ಜಿ.ಎನ್.ಹೆಗಡೆ ಸ್ವಾಗತಿಸಿದರು. ರೋಹಿದಾಸ ನಾಯ್ಕ ಫಾರೆಸ್ಟ್ ಕಾಲೊನಿ ಇವರು ಒಳ್ಳೆಯ ಅರ್ಥಧಾರಿಗೆ ಕಿರುಗಾಣಿಕೆ ನೀಡಿದರು. ಕಲಾವಿದರೆಲ್ಲರಿಗೆ ಪುಸ್ತಕ ನೀಡಿ ಗೌರವಿಸಿ ಎಲ್ಲರನ್ನೂ ಡಾ.ಎಸ್.ಡಿ.ಹೆಗಡೆ ವಂದಿಸಿದರು.

error: