May 17, 2024

Bhavana Tv

Its Your Channel

ಫೆಬ್ರವರಿ 2 ರಂದು ಗೋಲ್ ಇಂಟರ್ ನ್ಯಾಷನಲ್ ಶಾಲಾ ವಾರ್ಷಿಕೋತ್ಸವದಲ್ಲಿ ‘ಭೂತಾಯಿ ಉಳಿಸಿ’ ಸಂದೇಶದ ನೃತ್ಯರೂಪಕ

ಹೊನ್ನಾವರ:- ‘ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ’ ಮಂಕಿಯ ‘ಶಾಲಾ ವಾರ್ಷಿಕೋತ್ಸವ’ ವನ್ನು ಫೆಬ್ರವರಿ 1 ಮತ್ತು 2ನೇ ತಾರೀಖಿನಂದು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ನಿರ್ದೇಶಕರಾದ ಶ್ರೀಮತಿ ದೀಪಾ ರಾವ್ ತಿಳಿಸಿದರು .
ಅವರು ಹೊನ್ನಾವರದ ಖಾಸಗಿ ಹೊಟೇಲ್‌ನಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು, 1 ನೇ ತಾರೀಖು ಬೆಳಿಗ್ಗೆ 9:30 ಕ್ಕೆ ವಿಜ್ಞಾನ ಪ್ರದರ್ಶನ, ಪೋಷಕರ ಕ್ರೀಡಾಕೂಟ ಹಾಗೂ ಮಕ್ಕಳ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿರುವವರಿಗೆ ಬಹುಮಾನ ವಿತರಣೆ ಮತ್ತು ಪೋಷಕರಿಗೆ ‘ಮಕ್ಕಳ ಶೈಕ್ಷಣಿಕ ಹಾಗೂ ವ್ಯಕ್ತಿತ್ವ ವಿಕಸನ’ದ ಬಗ್ಗೆ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿದೆ.
2 ನೇ ತಾರೀಖಿನಂದು ಸಂಜೆ 6:00 ಗಂಟೆಗೆ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ sಶ್ರೀ ಪಿ.ಎಸ್.ವಸ್ತçದ್ss SVEEP ನೋಡಲ್ ಆಫೀಸರ್, ಇಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಇವರು ಆಗಮಿಸುತ್ತಿದ್ದಾರೆ. ಅತಿಥಿಗಳಾಗಿ ಶೀಮತಿ ಮಮತಾದೇವಿ ಜಿ.ಎಸ್, ಅಸಿಸ್ಟಂಟ್ ಕಮಿಷನರ್, ಭಟ್ಕಳ, ಶ್ರೀ ಈಶ್ವರ ನಾಯ್ಕ, ಡಿಡಿಪಿಐ, ಕಾರವಾರ ಮತ್ತು ಶ್ರೀ ಜಿ.ಎಸ್ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹೊನ್ನಾವರ ಇವರುಗಳು ಆಗಮಿಸಲಿದ್ದಾರೆ. ಶಾಲಾ ಅಧ್ಯಕ್ಷರಾದ ಶ್ರೀಯುತ ಎ.ಆರ್. ನಾಯಕ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶಾಲೆಯ ನಿರ್ದೇಶಕರಾದ ಶ್ರೀಮತಿ ದೀಪಾ ರಾವ್ ಹಾಗೂ ಪ್ರಾಂಶುಪಾಲರಾದ ರಮೇಶ್ ಯರಗಟ್ಟಿಯವರು ಉಪಸ್ಥಿತರಿರಲಿದ್ದಾರೆ ಎಂದರು
. ಪ್ರತೀ ಬಾರಿ ಗೋಲ್ ಶಾಲೆಯ ವಾರ್ಷಿಕೋತ್ಸವದಲ್ಲಿ ಸಮಾಜಕ್ಕೆ ಒಂದು ಸಂದೇಶವನ್ನು ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೇ ಪ್ರಸ್ತುತ ಪಡಿಸಲಾಗುತ್ತಿದೆ. ಈ ಬಾರಿಯೂ “ಭೂ ತಾಯಿ ಉಳಿಸಿ” ಎಂಬ ಸಂದೇಶವನ್ನು ವಿವಿಧ ನೃತ್ಯಗಳ ಮುಖಾಂತರ ಚಿಣ್ಣರು ನೀಡಲಿದ್ದಾರೆ. ಭೂಮಿ ತಾಯಿ ನಮಗೆ ನೀಡಿರುವ ಕೊಡುಗೆಗಳು, ನಮಗೆ ಮಾಡಿಕೊಟ್ಟಿರುವ ಅನುಕೂಲಗಳ ಬಗ್ಗೆ ತಿಳಿಸುವ ನೃತ್ಯಗಳಲ್ಲಿ ಪುಟ್ಟ ಪುಟ್ಟ ಮಕ್ಕಳು ಹಕ್ಕಿಗಳಾಗಿ, ಹೂವುಗಳಾಗಿ, ದುಂಬಿಗಳಾಗಿ, ಮರಗಳಾಗಿ, ಸೂರ್ಯ, ಚಂದ್ರ, ತಾರೆಯರಾಗಿ, ಚಿಟ್ಟೆಗಳಾಗಿ ವೇದಿಕೆಯಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಬಿಚ್ಚಿಡಲಿದ್ದಾರೆ. ನಂತರ ಹೇಗೆ ನಾವು ಪರಿಸರವನ್ನು ಹಾಳು ಮಾಡುತ್ತಿದ್ದೇವೆ? ಎಂಬುದರ ಅರಿವನ್ನು 5, 6 ಮತ್ತು 7 ನೇ ತರಗತಿಯ ಮಕ್ಕಳು ವಿವಿಧ ನೃತ್ಯಗಳ ಮುಖಾಂತರ ಕಣ್ಣೆದುರು ಹೆಣೆಯಲಿದ್ದಾರೆ. ಜಲ, ಶಬ್ದ, ವಾಯುಮಾಲಿನ್ಯ, ಪ್ಲಾಸ್ಟಿಕ್‌ನ ಅತಿಯಾದ ಬಳಕೆಯ ದುಷ್ಪರಿಣಾಮಗಳು, ಮರಗಳನ್ನು ನಾಶ ಮಾಡುವುದರಿಂದ ಆಗುವ ಅಸಮತೋಲನ, ನೀರನ್ನು ಉಳಿಸುವ ಮಹತ್ವ ಇದೆಲ್ಲವನ್ನೂ ಭರತನಾಟ್ಯ, ಜಾನಪದ, ಕಾಂಟೆAಪರರಿ, ಲಘು ನೃತ್ಯ ಪ್ರಕಾರಗಳಲ್ಲಿ ಅಳವಡಿಸಲಾಗಿದೆ. ಹಾಗೆಯೇ ‘ಸ್ವಚ್ಛ ಭಾರತ್’ ಅಭಿಯಾನದ ಬಗ್ಗೆಯೂ ತಿಳುವಳಿಕೆ ಮಾಡಿಸಲಾಗುತ್ತಿದೆ. ಸಮಾಜದ ಪಿಡುಗಾದ ಬಾಲಕಾರ್ಮಿಕ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ವಿಶೇಷ ನೃತ್ಯವೂ ಇದ್ದು ದೈವ ರಕ್ಷಣೆಯ ಸಂದೇಶವನ್ನು ಸಾರುವ ಪ್ರಸಿದ್ಧ ‘ಕಾಂತಾರ’ ನೃತ್ಯವನ್ನು ವಿಭಿನ್ನವಾಗಿ ಪ್ರದರ್ಶಿಸಲಾಗುತ್ತಿದೆ. ನುರಿತ ಕಲಾವಿದರಿಂದ ನೃತ್ಯ ಸಂಯೋಜನೆಯನ್ನು ಮಾಡಿಸಲಾಗಿದೆ. ಸುಮಾರು 615 ಕ್ಕೂ ಹೆಚ್ಚು ಮಕ್ಕಳು ವಿಶೇಷವಾಗಿ ಪ್ರದರ್ಶಿಸಲಿರುವ ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ತುಂಬು ಹೃದಯದಿಂದ ಆಹ್ವಾನಿಸಲಾಗಿದೆ ಎಂದು ಶಾಲೆಯ ಕಲಿಕೆಯ ಬಗ್ಗೆಯು ಮಾಹಿತಿ ನೀಡಿದರು.
ಸುದ್ದಿ ಗೋಷ್ಟಿಯಲ್ಲಿ ಶಾಲೆಯ ಪ್ರಾಂಶುಪಾಲರಾದ ರಮೇಶ್ ಯರಗಟ್ಟಿ ಹಾಗೂ ಆಡಳಿತ ಕಮೀಟಿಯ ಮಲ್ಲಯರವರು ಉಪಸ್ಥಿತರಿದ್ದರು.

error: