May 2, 2024

Bhavana Tv

Its Your Channel

ತಾಲೂಕಾ ಆಸ್ಪತ್ರೆ ಸಿಬ್ಬಂಧಿಗಳಿAದ “ ಆರೋಗ್ಯಕ್ಕಾಗಿ ನಡಿಗೆ”

(ಕ್ಯಾನ್ಸರ್ ವಿರುದ್ಧ ಮತ್ತು ಆರೋಗ್ಯದ ಕುರಿತು ಜನಜಾಗೃತಿ ಮೂಡಿಸಲು ೧೦ ಕಿಮಿ ನಡಿಗೆ)

“ ಆರೋಗ್ಯಕ್ಕಾಗಿ ನಡಿಗೆ” ಪರಿಕಲ್ಪನೆಯೊಂದಿಗೆ ತಾಲೂಕ ಆಸ್ಪತ್ರೆ ಸಿಬ್ಬಂಧಿಗಳಿAದ ೧೦ ಕಿಮಿ ನಡಿಗೆ ಜರುಗಿತು. ಹಿರಿಯ ವರದಿಗಾರರಾದ ಜಿ.ಯು ಭಟ್ಟರವರು ಬೆಳಿಗ್ಗೆ ೬.೩೦ ಕ್ಕೆ ಸರಿಯಾಗಿ “ಆರೋಗ್ಯಕ್ಕಾಗಿ ನಡಿಗೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ತಾಲೂಕ ಆಸ್ಪತ್ರೆ ಆವರಣದಿಂದ ಪ್ರಾರಂಭವಾದ “ಆರೋಗ್ಯಕ್ಕಾ ನಡಿಗೆ”ಯು ಹೊನ್ನಾವರ ಮಾರ್ಕೆಟ್ ಮಧ್ಯಭಾಗದಿಂದ ಸಾಗಿ ಕರ್ಕಿ ರೈಲೆ ಸ್ಟೇಷನ್ ಕ್ರಾಸ್‌ರವರೆಗೆ ಸಾಗಿ ನಂತರ ಪುನ: ಹಿಂತಿರುಗಿ ದುರ್ಗಾಕೇರಿ ಮುಖಾಂತರ ತಾಲೂಕ ಆಸ್ಪತ್ರೆ ಹೊನ್ನಾವರಕ್ಕೆ ಬಂದು ಸಮಾಪ್ತಿಗೊಳಿಸಲಾಯಿತು. ಕಾರ್ಯಕ್ರಮದ ಮುಖ್ಯ ಸಂಘಟಕರಾದ ತಜ್ಞ ವೈದ್ಯರಾದ ಡಾ|| ಪ್ರಕಾಶ ನಾಯ್ಕ ಮಾತನಾಡುತ್ತ “ ಆರೋಗ್ಯಕ್ಕಾಗಿ ನಡಿಗೆಯ ಮುಖ್ಯ ಉದ್ದೇಶ ಜನಸಾಮನ್ಯರಲ್ಲಿ ನಡಿಗೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದಾಗಿದೆ. ಬಿಪಿ ಸುಗರ್ ಸೇರಿದಂತೆ ಅನೇಕ ಸಾಮನ್ಯ ಖಾಯಿಲೆಗಳಿಂದ ದೂರವಿರಲ್ಲೂ ನಿಯಮಿತ ನಡಿಗೆ ಪ್ರಮುಖ ಪಾತ್ರವಹಿಸುತ್ತದೆ.ಇವತ್ತಿನ ದಿನಗಳಲ್ಲಿ ಚಿಕ್ಕ ದೂರ ಕ್ರಮಿಸಲು ಸಹ ಯಾಂತ್ರಿಕ ಗಾಡಿಗಳ ಅವಲಂಬನೆ ಹೆಚ್ಚಾಗಿದೆ. ಇಂದರಿAದ ದೈಹಿಕ ವ್ಯಾಯಾಮ ಕಡಿಮೆಯಾಗಿ ನಾನಾ ರೀತಿಯ ಖಾಯಿಲೆಗಳಿಗೆ ಒಳಗಾಗುತ್ತಿದ್ದೆವೆ.ನಿಯಮಿತ ನಡಿಗೆ ಆರೋಗ್ಯ ಪೂರ್ಣ ಜೀವನಕ್ಕೆ ಸೋಪಾನ.ಇದರ ಜೊತೆಗೆ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಜನಸಾಮನ್ಯರಲ್ಲಿ ಕ್ಯಾನ್ಸರ ಬಗ್ಗೆ ಜಾಗೃತಿ ಉಂಟುಮಾಡಲು ಪ್ರಯುಕ್ತ ಇಂತಹ ಚಟುವಟಿಕೆಗಳ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ನಡಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ರಾಜೇಶ ಕಿಣಿ ರವರು ಮಾತನಾಡುತ್ತ “ನಮ್ಮ ಆಸ್ಪತ್ರೆಯ ಸಿಬ್ಬಂಧಿಗಳಿ0ದ ಇಂತಹ ಅರ್ಥಪೂರ್ಣ ಚಟುವಟಿಕೆಗಳು ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಉತ್ಸಾಹದಿಂದ ಪಾಲ್ಗೊಂಡ ವೈದ್ಯ ಸಹದ್ಯೋಗಿಗಳು ಮತ್ತು ಸಿಬ್ಬಂಧಿ ವರ್ಗಕ್ಕೆ ಅಭಿನಂದನೆಗಳು. ಮುಂದಿನ ಇಂತಹ ಅರ್ಥಪೂರ್ಣ ಚಟುವಟಿಕೆಗಳು ನಿಯಮಿತವಾಗಿ ನಡೆಯುತ್ತಿರಲ್ಲಿ” ಎಂದು ಹೇಳಿದರು. ನಡಿಗೆಯಲ್ಲಿ ಆಸ್ಪತ್ರೆಯ ತಜ್ಞವೈದ್ಯಾಧಿಕಾರಿಗಳಾದ ಡಾ|| ಕೃಷ್ಣಾ ಜಿ, ಡಾ|| ಪ್ರಕಾಶ ನಾಯ್ಕ ಡಾ|| ರಮೇಶ ಗೌಡ, ಡಾ|| ಶಿವಾನಂದ ಹೆಗಡೆ, ಡಾ|| ಅನುರಾಧ, ಸೇರಿದಂತೆ ವೈದ್ಯರುಗಳು,ಮತ್ತು ಸಿಬ್ಬಂಧಿ ಸೇರಿ ೫೦ ಮಂದಿ ಪಾಲ್ಗೊಂಡಿದ್ದರು. ಆಯುಷ್ಯ ವೈದ್ಯಾಧಿಕಾರಿ ಡಾ|| ಗುರುದತ್ತ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.

error: