May 17, 2024

Bhavana Tv

Its Your Channel

“ಹೆಣ್ಣು ಮಕ್ಕಳ ಪೋಷಣೆಯಲ್ಲಿ ತಾರತಮ್ಯ ಬೇಡ” – ಡಾ|| ಸೋನಿಯಾ

ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ರಾಷ್ಟಿçÃಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಜನಿಸಿದ ಹೆಣ್ಣುಮಕ್ಕಳಿಗೆ ಊಡುಗೊರೆ ನೀಡಿ ಆಚರಣೆ ಮಾಡಲಾಯಿತು.
“ಹೆಣ್ಣು ಮಗು ಜನಿಸಿದಾಗ ಸಾಮನ್ಯವಾಗಿ ಪೋಷಕರಲ್ಲಿ ಅಂತಹ ಖುಷಿ ಕಾಣುವುದಿಲ್ಲ. ಅದರ ಪರಿಣಾಮ ಮುಂದೆ ಹೆಣ್ಣು ಮಗುವಿನ ಬೆಳವಣಿಗೆ ಮೇಲೆ ಆಗುತ್ತದೆ. ಇಂದಿಗೂ ಸಾಕಷ್ಟು ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಬೆಳವಣಿಗೆಯಲ್ಲಿ ಸಾಕಷ್ಟು ತಾರತಮ್ಯ ಎಸಗಲಾಗುತ್ತದೆ. ಇದರಿಂದ ಹೆಣ್ಣು ಮಕ್ಕಳು,ಅಪೌಷ್ಠಿಕತೆ, ಆರೋಗ್ಯಕಾರ ಆಹಾರ ಮತ್ತು ಆರೈಕೆಯ ಮತ್ತು ರಕ್ತ ಹೀನತೆ, ಕೊರತೆಯಿಂದ ಬಳಲುತ್ತಿದ್ದಾರೆ. ಕುಟುಂಬಗಳಲ್ಲಿ ಗಂಡು ಮಗುವಿನ ಬೆಳವಣಿಗೆಗೆ ಕೊಡುವ ಪ್ರಾಮುಖ್ಯತೆಯಷ್ಟೇ ಹೆಣ್ಣು ಮಕ್ಕಳ ಬೆಳವಣಿಗೆಗೆ ಕೊಡಬೇಕು.” ಎಂದು ತಾಲೂಕ ಆಸ್ಪತ್ರೆಯ ಮಕ್ಕಳಾದ ತಜ್ಞರಾದ ಡಾ|| ಸೋನಿಯಾ ಹೇಳಿದರು.
ಹೆಣ್ಣು ಮಗು ಜನಿಸಿದೆ ಎಂದು ಭರವಸೆ ಕಳೆದುಕೊಳ್ಳಬಾರದು. ಇವತ್ತು ಎಲ್ಲ ರಂಗದಲ್ಲೂ ಹೆಣ್ನು ಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಹೆಣ್ಣು ಮಗು ಎಂದು ಲಾಲನೆ ಪೋಷಣೆಯಲ್ಲಿ ನಿರ್ಲಕ್ಷö್ಯ ಬೇಡ.ಹೆಣ್ಣು ಮಕ್ಕಳ ಪೋಷಣೆ, ಕುಟುಂಬ ನಡೆಸುವ ಕಾರ್ಯಕ್ಕೆ ಬೆಲೆ ಕಟ್ಟಲಾಗದು.” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ವೈದ್ಯಾಕಾರಿಗಳಾದ ಡಾ|| ರಾಜೇಶ ಕಿಣಿ ರವರು ಮಾತನಾಡುತ್ತ “ರಾಷ್ಟಿçÃಯ ಹೆಣ್ಣು ಮಕ್ಕಳ ದಿನಾಚರಣೆಯ ಮಹತ್ವವೆಂದರೆ ಭಾರತದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ ಜನರಿಗೆ ಈ ಬಗ್ಗೆ ಅರಿವು ಮೂಡಿಸುವುದಾಗಿದೆ. ಇವತ್ತು ಹೆಣ್ಣು ಮಕ್ಕಳಿಗೆ ಎಲ್ಲ ರಂಗದಲ್ಲಿ ಸಮಾನ ಅವಕಾಶ ಸಿಗುತ್ತದೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಕೆಳಹಂತದಲ್ಲಿ ಸರಿಯಾದ ಅವಕಾಶಗಳು ಸಿಗುತ್ತಿಲ್ಲ. ಪ್ರಸ್ತುತ ಭಾರತದಲ್ಲಿ ಪುರುಷರ ಸಾಕ್ಷರತಾ ಪತ್ರಮಾಣ 82% ರಷ್ಟು ಇದ್ದರೆ ಮಹಿಳೆಯರ ಸಾಕ್ಷರತೆ ಪ್ರಮಾಣ 64% ರಷ್ಟಿದೆ. ಇದರಲ್ಲಿಯೋ ಗೊತ್ತಾಗುತ್ತದೆ ಇನ್ನು ನಾವು ಪುರುಷರಿಗೆ ಸರಿಸಮಾನವಾಗಿ ಮಹಿಳೆಯರಿಗೆ ಶಿಕ್ಷಣ ನೀಡಲು ಸಾದ್ಯವಾಗುತ್ತಿಲ್ಲ ಎಂದು. ಪ್ರತಿಯೊಬ್ಬರು ಹೆಣ್ಣು ಮಕ್ಕಳ ಜನನವನ್ನು ವ್ಯಥೆ ಎಂದು ಪರಿಗಣಿಸದೇ ಮನಗೆ ಬಂದ ಮಹಾಲಕ್ಷಿö್ಮà ಎಂದು ಸಂತೋಷದಿAದ ಸ್ವಾಗತಿಸಬೇಕು. ಉತ್ತಮ ಪೋಷಣೆ ಮಾಡಿ ಆರೋಗ್ಯಯುತ ಹೆಣ್ಣುಮಕ್ಕಳನ್ನು ಸಮಾಜಕ್ಕೆ ನೀಡಬೇಕು”ಎಂದು ಹೇಳಿದರು.ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಊಡುಗೊರೆಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈದ್ಯರುಗಳು, ಸಿಬ್ಬಂಧಿ ವರ್ಗ ನೀಡಿ ಸಂತೋಷಪಟ್ಟರು. ಕಾರ್ಯಕ್ರಮದಲ್ಲಿ ತಜ್ಞ ವೈದ್ಯಾಧಿಕಾರಿಗಳಾದ ಡಾ|| ಜೈಮಿನಿ, ಡಾ|| ಅನುರಾಧ, ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ಶಶಿಕಲಾ ನಾಯ್ಕ, ಶುಶ್ರೂಷಾಧಿಕಾರಿಗಳು, ಆಸ್ಪತ್ರೆ ಸಿಬ್ಬಂಧಿ ವರ್ಗ,ಹಾಜರಿದ್ದರು.

error: