May 18, 2024

Bhavana Tv

Its Your Channel

ಪದವಿ ಧಿರಿಸಿನಲ್ಲಿ ಮಿಂಚಿದ ಯುಕೆಜಿ ವಿದ್ಯಾರ್ಥಿಗಳು.

ಹೊನ್ನಾವರ : ಹೊಸ ಹೊಸ ಚಟುವಟಿಕೆಯನ್ನು ಮಾಡಿ ಮಕ್ಕಳ ಬೆಳವಣಿಗೆಯ ಬಗೆಗೆ ಪೂರಕವಾಗಿ ಸದಾಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿರುವ , ಮಲ್ನಾಡ್ ಪ್ರೊಗ್ರೇಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸೆಂಟ್ರಲ್ ಸ್ಕೂಲ್‌ಯು.ಕೆ.ಜಿ ಮಕ್ಕಳಿಗೆ ಗ್ರಾö್ಯಜ್ಯುಯೇಶನ್‌ಡೇಅನ್ನುವ ವಿನೂತನಕಾರ್ಯಕ್ರವನ್ನು ಹಮ್ಮಿಕೊಂಡಿತ್ತು.
ಸೆ0ಟ್ರಲ್ ಸ್ಕೂಲ್‌ನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಹೋಲಿ ರೋಸರಿಕಾಲೇಜಿನಉಪನ್ಯಾಸಕಿಶ್ರೀಮತಿ ಸಜಿತಾ ಶಿವಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಇದೇ ಸಂದರ್ಭದಲ್ಲಿ ಮಾತನಾಡಿದಶ್ರೀಮತಿ ಸಜಿತಾ ಶಿವಪ್ರಸಾದ್‌ವಿದ್ಯಾರ್ಥಿಗಳ ಅಂಕವನ್ನು ನೋಡಿಅವರನ್ನು ಅಳೆಯಬೇಡಿ.ಅವರನ್ನುಯಾರಜೊತೆಗೂ ಹೋಲಿಕೆಯನ್ನು ಮಾಡಬೇಡಿ ಎಂಬ ಕಿವಿಮಾತನ್ನು ಹೇಳಿದರು.ಯಾವುದೇ ವಿದ್ಯಾರ್ಥಿಯನ್ನುಧೈರ್ಯಗೆಡುವಂತೆ ಮಾಡಬೇಡಿಎಂದರು.
ಇ0ತಹ ಕಾರ್ಯಕ್ರಮಗಳು ನಿಜಕ್ಕೂ ಪ್ರೇರಣಾದಾಯಕ.ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳು ಅಮೂಲ್ಯ. ಮಕ್ಕಳ ಬೆಳವಣಿಗೆಯನ್ನು ನೋಡಿ ಹುರಿದುಂಬಿಸಬೇಕು. ವಿದ್ಯಾರ್ಥಿಗಳಿಗೆ ಸಮಯದಅರಿವನ್ನು ನೀಡಬೇಕುಎಂದುಮಲ್ನಾಡ್ ಪ್ರೊಗ್ರೇಸ್ಸಿವ್ ಎಜ್ಯುಕೇಶನ್ ಸೊಸೈಟಿಯಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ ಮಾತನಾಡಿದರು.
ಮಕ್ಕಳನ್ನು ಪ್ರೀತಿಯಿಂದತಾಯಿಯ0ತೆ ನೋಡಿ, ಶಿಕ್ಷಣ ನೀಡಿದ ಶಿಕ್ಷಕರಿಗೆ ಶುಭ ಹಾರೈಸಿದರು. ಮಕ್ಕಳು ಮಾಡುವ ಒಳ್ಳೆಯ ಕೆಲಸಕ್ಕೆ ಏಕಭಿಪ್ರಾಯದಿಂದ ಪಾಲಕರು ಪ್ರೋತ್ಸಾಹಿಸಿ ಎಂದುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್‌ಸೊಸೈಟಿಯ ಕಾರ್ಯದರ್ಶಿ ಶ್ರೀ.ಎಸ್.ಎಮ್ ಭಟ್‌ರವರುಸಲಹೆಯನ್ನು ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕಾಂತಿ ಭಟ್‌ಎಲ್ಲರನ್ನು ಸ್ವಾಗತಿಸಿ, ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿಯು.ಕೆ.ಜಿಎಲ್ಲಾ ವಿದ್ಯಾರ್ಥಿಗಳು ಕಥೆ, ನೃತ್ಯ, ಹಾಡುಗಳ ಮೂಲಕ ಎಲ್ಲರನ್ನೂ ಮನರಂಜಿಸಿದರು.ನ0ತರ ಅತಿಥಿಗಳಿಂದ ಯು.ಕೆ.ಜಿಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಕೊಡಲಾಯಿತು. ಶಿಕ್ಷಕಿ ಸಿಲಿಕಾ ಎಲ್ಲರನ್ನು ಸ್ವಾಗತಿಸಿದರು, ಶ್ರೀಮತಿ ರೂಪಾರೊಡ್ರಿಗೀಸ್ ಅನಿಸಿಕೆಯನ್ನು ಹೇಳಿದರು.ಶ್ರೀಮತಿ ತಾರಾಶ್ರೀ ಹೆಗಡೆಎಲ್ಲರನ್ನು ವಂದಿಸಿದರು.ಶಿಕ್ಷಕರಾದ ಶ್ರೀ ನಿತೇಶ ಶೇಟ್‌ಕಾರ್ಯಕ್ರಮ ನಿರೂಪಿಸಿದರು.

error: