May 4, 2024

Bhavana Tv

Its Your Channel

ಮಾಜಿ ಶಾಸಕ ಮಂಕಾಳ ವೈದ್ಯ ಅಭಿಮಾನಿಗಳು ಶಿಕ್ಷಣ ವಿಷಯವನ್ನು ರಾಜಕೀಯಗೊಳಿಸಿದ್ದಾರೆ ಎಂದು ಹೆರಂಗಡಿ ಪಂಚಾಯತಿ ಅಧ್ಯಕ್ಷರು ಆರೋಪಿಸಿದ್ದಾರೆ

ಹೊನ್ನಾವರ ತಾಲೂಕಿನ ಹೆರಂಗಡಿ ಗ್ರಾ.ಪಂಗೆ ಶಾಸಕ ಸುನೀಲ್ ನಾಯ್ಕ ಅವರು ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚಿನ ಅನುದಾನ ಒದಗಿಸಿದ್ದಾರೆ. ಆದರೆ ಯರ್ಜಿನಮೂಲೆ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು,ಮಾಜಿ ಶಾಸಕ ಮಂಕಾಳ ವೈದ್ಯ ಬೆಂಬಲಿಗರು ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೆರಂಗಡಿ ಗ್ರಾಪಂ ಅಧ್ಯಕ್ಷ ಪ್ರಮೋದ ನಾಯ್ಕ ಹೇಳಿದರು.

ಮಾಜಿ ಶಾಸಕ ಮಂಕಾಳ ವೈದ್ಯ ಅವರು ಶಾಲೆಯ ಮೆಲ್ಛಾವಣಿ ಕಟ್ಟಡ ನಿರ್ಮಾಣ ಮಾಡಿರುವುದು ಸ್ವಾಗತಾರ್ಹ.ಇದಕ್ಕೆ ಗ್ರಾಪನಿಂದ ಯಾವುದೇ ಅಡ್ಡಿಪಡಿಸಿಲ್ಲ. ಆದರೆ ಕಟ್ಟಡ ಉದ್ಘಾಟನೆ ಸಂದರ್ಬದಲ್ಲಿ ಶಾಲೆಯ ವಿಚಾರ ಮುಂದಿಟ್ಟು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಇದು ನಮಗೆಲ್ಲಾ ಬೇಸರ ತರಿಸಿದೆ. ಶಾಲೆಯ ದುರಸ್ತಿ ಕಾರ್ಯಕ್ಕೆ ಶಾಸಕ ನಿಧಿಯಿಂದ ೧ ಲಕ್ಷ ರೂ. ತಾ.ಪಂ ನಿಂದ ಒಂದು ಲಕ್ಷ ಅನುದಾನ ಸೇರಿ ೨.೫ ಲಕ್ಷ ನೀಡಲಾಗಿತ್ತು. ಆದರೆ ಬಂದಿರುವ ಅನುದಾನವನ್ನು ಶಾಲಾ ಎಸ್ ಡಿ ಎಮ್ ಸಿ ಸದಸ್ಯರು ಸದ್ಬಳಕೆ ಮಾಡದೆ ವಾಪಾಸಾಗಲು ಕಾರಣರಾದರು. ತಾಲೂಕು ಪಂಚಾಯತಿ ಮಾಜಿ ಸದಸ್ಯ ಲೋಕೇಶ್ ನಾಯ್ಕ ಅವರು ಶಾಸಕ ಸುನಿಲ್ ನಾಯ್ಕ ಅವರು ಶಿಕ್ಷಣ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಮಾಹಿತಿ ಇಲ್ಲದೆ ಶಾಸಕರ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಾರೆ.
ಹಾಗಾದರೆ ಮಾಜಿ ಶಾಸಕ ಮಂಕಾಳ ವೈದ್ಯ ಅವರ ಕೊಡುಗೆ ಏನು ಎಂಬುದನ್ನು ಅವರು ಹೇಳಲಿ ಎಂದರು. ಅಳ್ಳಂಕಿ ಪದವಿಪೂರ್ವ ಕಾಲೇಜಿನ ರಜತ ಮಹೋತ್ಸವದಲ್ಲಿ ಒಂದು ಕೋಟಿ ಅನುದಾನ ತಾನು ತಂದಿದ್ದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಅವರು ಹೇಳಿಕೊಂಡಿದ್ದು, ತಾಕತ್ ಇದ್ರೆ ಅನುದಾನ ತಂದಿರುವ ದಾಖಲೆ ಸಮೇತ ಬಹಿರಂಗಪಡಿಸಿ ಎಂದು ಸವಾಲೆಸೆದರು.

ಯರ್ಜಿನಮೂಲೆ ಶಾಲೆಯ ಮೇಲ್ಛಾವಣಿ ಕಟ್ಟಡ ಶೇ.೯೫ ರಷ್ಟು ಕಾಮಗಾರಿ ಮುಗಿಯುವ ವೇಳೆಗೆ ಹಾಲಿ ಶಾಸಕ ಸುನೀಲ್ ನಾಯ್ಕ ಗುದ್ದಲಿ ಪೂಜೆ ನಡೆಸಿದ್ದಾರೆ ಎನ್ನುವ ಆರೋಪದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸಿದ ಪ್ರಮೋದ ನಾಯ್ಕ ಅವರು ಗುತ್ತಿಗೆದಾರರ ವಿಳಂಬದಿAದ ಕಾಮಗಾರಿ ಆರಂಭ ತಡವಾಗಿದೆ ಎಂದರು.

ಗ್ರಾ.ಪA. ಸದಸ್ಯ ಗಣೇಶ ಹಳ್ಳೇರ್ ಮಾತನಾಡಿ ಶಾಸಕರು ನಮ್ಮ ಗ್ರಾಮಕ್ಕೆ ಶಿಕ್ಷಣದ ಜೊತೆಗೆ ಮೂಲ ಸೌಕರ್ಯಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ ಇದನ್ನು ಸಹಿಸದ ಮಾಜಿ ಶಾಸಕ ಮಂಕಾಳ ವೈದ್ಯ ಅವರ ಬೆಂಬಲಿಗರು ಶಾಸಕ ಸುನೀಲ್ ನಾಯ್ಕ ಅವರ ತೇಜೋವಧೆ ಮಾಡಲು ಮುಂದಾಗಿದ್ದಾರೆ ಎಂದು ಹರಿಹಾಯ್ದರು.

ಗ್ರಾ.ಪಂ. ಸದಸ್ಯರಾದ ರೇಖಾ ನಾಯ್ಕ, ಮೇರಿ ಡಯಾಸ್, ವಿನಾಯಕ ನಾಯ್ಕ, ಮಂಗಲಾ ಹಳ್ಳೇರ್, ಲೋಕೇಶ್ ನಾಯ್ಕ, ಶಾರದಾ ಹಳ್ಳೇರ್, ರೇಖಾ ನಾಯ್ಕ,ಊರ ಮುಖಂಡರಾದ ಬೆಳ್ಳು ಗೌಡ, ಕೇಶವ ಗೌಡ, ರಮೇಶ್ ನಾಯ್ಕ,ದಿಲೀಪ್ ನಾಯ್ಕ,ಅಣ್ಣಪ್ಪ ಹಳ್ಳೇರ್ ಇತರರು ಹಾಜರಿದ್ದರು.

error: