June 8, 2023

Bhavana Tv

Its Your Channel

ಹೊನ್ನಾವರ ತಾಲೂಕಿನ ಕೆಂಚಗಾರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಯಕ್ಷಗಾನ ಹಾಗೂ ಭರತನಾಟ್ಯ ಪ್ರದರ್ಶನ.

ಹೊನ್ನಾವರ; ತಾಲೂಕಿನ ಕೆಂಚಗಾರನಲ್ಲಿ, ಸೋದೆ ವಾದಿರಾಜ ಮಠ ಉಡುಪಿ ಶಾಖೆಯ ಶ್ರೀ ಸೀತಾರಾಮಚಂದ್ರ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಶಿವರಾತ್ರಿ, ರಾಮನವಮಿ ಸೇರಿದಂತೆ ವಿಶೇಷ ದಿನಗಳಲ್ಲಿ ಯಕ್ಷಗಾನ, ಭರತನಾಟ್ಯ, ಭಜನಾ ಸಂಕೀರ್ತನೆ ಮೊದಲಾದ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ.

ಅದರಂತೆಯೇ ಶ್ರೀ ರಾಮನವಮಿಯ ಪ್ರಯುಕ್ತ ದೇವಾಲಯದಲ್ಲಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಪ್ರಭಾಕರ ಹೆಗಡೆ ಚಿಟ್ಟಾಣಿ ಬಳಗದವರಿಂದ “ವಾಲಿಮೋಕ್ಷ” ಎಂಬ ಸುಂದರ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು. ನಂತರ “ಕೆಂಚಗಾರ್ ನಾಟ್ಯಕಲಾ ಕೇಂದ್ರ” ದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಶ್ರೀ ರಾಮನವಮಿ ಸೇವಾ ಸಮಿತಿ ಕೆಂಚಗಾರ್ ಇವರು, ಭರತನಾಟ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆಲ್ಲ, ನೆನಪಿನ ಕಾಣಿಕೆಯನ್ನು ನೀಡುವ ಮೂಲಕ ಕಲೆ ಹಾಗೂ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು.
ವರದಿ : ನರಸಿಂಹ ನಾಯ್ಕ. ಹರಡಸೆ

About Post Author

error: