April 12, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಕಡತೋಕಾ ರಸ್ತೆ ಮತ್ತು ಚಿಪ್ಪಿಹಕ್ಕಲ್ ಮಾಡಗೇರಿ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.

ಹೊನ್ನಾವರ ; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 50 ಲಕ್ಷ ವೆಚ್ಚದಲ್ಲಿ ಮಂಜೂರಾದ ಕಾಮಗಾರಿ ಇದಾಗಿದ್ದು, ಕಡತೋಕಾ ರಸ್ತೆ ಹಾಗೂ ಚಿಪ್ಪಿಹಕ್ಕಲ್ ಮಾಡಗೇರಿ ರಸ್ತೆ 1ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಭಾಗದ ರಸ್ತೆಗೆ ಮರುಡಾಂಬರಿಕರಣ ಇದಾಗಿದ್ದು, ಈ ರಸ್ತೆಯಿಂದ ಗ್ರಾಮಸ್ಥರಿಗೆ ಅನೂಕೂಲವಾಗಲಿದೆ ಎಂದು ಶಾಸಕರು ಹೇಳಿದರು.
ರಾಜ್ಯಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಧಮೇಂದ್ರ ಗೌಡ ಇವರನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕರಾದ ಶಿವಾನಂದ ಹೆಗಡೆ ಕಡತೋಕ, ಗ್ರಾ.ಪಂ. ಅಧ್ಯಕ್ಷರಾದ ಸಾವಿತ್ರಿ ಭಟ್, ಗ್ರಾ.ಪಂ.ಸದಸ್ಯರು, ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರು ಇದ್ದರು.
ವರದಿ ; ವಿಶ್ವನಾಥ ಸಾಲ್ಕೋಡ್ ಹೊನ್ನಾವರ

error: