April 29, 2024

Bhavana Tv

Its Your Channel

ಕಾಸರಕೋಡ ಟೊಂಕದ ಕಡಲತೀರದಲ್ಲಿ ಕಡಲಾಮೆಗಳು ನೂರಾರು ಸಂಖ್ಯೆಯಲ್ಲಿ ಮೊಟ್ಟೆ ಇಡುತ್ತಿದೆ

ಹೊನ್ನಾವರ : ಉದ್ದೇಶಿತ ವಾಣಿಜ್ಯ ಬಂದರು ಯೋಜನಾ ಪ್ರದೇಶವೂ ಸೇರಿದಂತೆ ಇಲ್ಲಿನ ಕಡಲತೀರದಲ್ಲಿ ಕಳೆದ ಎರಡು ದಿನಗಳಿಂದ ರಿಡ್ಲೆ ಜಾತಿಯ ಕಡಲಾಮೆಗಳು ನೂರಾರು ಸಂಖ್ಯೆಯಲ್ಲಿ ಮೊಟ್ಟೆ ಇಡುತ್ತಿದೆ.

ಕಳೆದ 45 ದಿವಸಗಳ ಮುಂಚೆ ಇಲ್ಲಿನ ಕಡಲ ತೀರದಲ್ಲಿ ಕಡಲಾಮೆಗಳು ಇಟ್ಟಿರುವ ಮೊಟ್ಟೆಗಳು ಒಡೆದು ಮರಿಗಳು ಜನಿಸುವ ಪ್ರಕ್ರರ್ತಿದತ್ತ ನೈಸರ್ಗಿಕ ಪ್ರಕ್ರಿಯೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬದ ಅನುಭವ ನೀಡುತ್ತಿದೆ. ಇಲ್ಲಿನ ಕಡಲತೀರಕ್ಕೆ ಪ್ರಾಣಿ ಪ್ರಿಯರು ಹಾಗೂ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡಿ ಸಂಭ್ರಮ ಪಡುತ್ತಿರುವದು ಒಂದೆಡೆಯಾದರೆ ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಆಮೆಗಳ ಮೊಟ್ಟೆಗಳಿಗೆ ಅರಣ್ಯ ಇಲಾಖೆ ಮತ್ತು ಸ್ಥಳೀಯ ನಾಗರಿಕರು ಜತನದಿಂದ ಸಂರಕ್ಷಣೆ ಮಾಡುತ್ತಿರುವ ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರ ಕಾಳಜಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬ್ರಹತ್ ಗಾತ್ರದ ಕಡಲಾಮೆಯೊಂದು ಮೊಟ್ಟೆ ಇಡುವುದನ್ನು ಪ್ರತ್ಯಕ್ಷವಾಗಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ ಅಪರೂಪದ ಘಟನೆ ಮತ್ತು ಮರಳು ಗೂಡುಗಳಿಂದ ಕಡಲಾಮೆಮೊಟ್ಟೆಗಳು ಒಂದೊAದಾಗಿ ಹೊರಬರುತ್ತಿರುವ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊAಡು ಜನರು ಸಂತಸ ಪಟ್ಟರು . ಇಲ್ಲಿನ ಜೈನಜಟಗೇಶ್ವರ ಯುವ ಸಮಿತಿಯ ಭಾಸ್ಕರ ತಾಂಡೇಲ್, ರಮೇಶ್ ತಾಂಡೇಲ್, ರಾಜೇಶ ತಾಂಡೇಲ, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಹಲವು ಸಾರ್ವಜನಿಕರು ಮೊಟ್ಟೆಗಳ ಸಂರಕ್ಷಣೆಗೆ ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಮತ್ತು ಮೊಟ್ಟೆ ಮರಿಆಗುವವರೆಗೆ ಜತನದಿಂದ ಸಂರಕ್ಷಣೆ ಮಾಡುತ್ತಿರುವದು ಇಲ್ಲಿ ಹಲವು ವರ್ಷಗಳಿಂದ ನಡೆದುಬಂದಿದೆ. ಕಾಸರಕೋಡ ಟೊಂಕದ ಕಡಲತೀರವನ್ನು ಹಲವು ವರ್ಷಗಳಿಂದ ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಆಮೆಗಳು ಇಲ್ಲಿ ಮೊಟ್ಟೆ ಇಟ್ಟು ತನ್ನ ಸಂತಾನೋತ್ಪತ್ತಿಗೆ ಆಧ್ಯತೆ ನೀಡುತ್ತಿರುವದು ವಿಶೇಷವಾಗಿದೆ.ಮುಂದಿನ ಒಂದು ತಿಂಗಳ ಕಾಲ ಈ ಅಪರೂಪದ ದ್ರಶ್ಯವನ್ನು ಆಗಾಗ್ಗೆ ಪ್ರತ್ಯಕ್ಷ ಕಣ್ತುಂಬಿಕೊಳ್ಳಲು ಇಲ್ಲಿನ ಕಡಲತೀರದಲ್ಲಿ ಲಭ್ಯವಿದ್ದು ಸ್ಥಳೀಯ ಶಾಲಾಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಭೇಟಿ ನೀಡಿ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಸೇರಿಸಿ ಸಂಭ್ರಮಿಸ ಬಹುದಾಗಿದೆ.

error: