May 20, 2024

Bhavana Tv

Its Your Channel

ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯು ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ

ಹೊನ್ನಾವರ : ದೀಕ್ಷಾ ಶಿವರಾಮ ಹೆಗಡೆ ಪ್ರಥಮ(96.64) ಜೋಸ್ಲಿನ್ ಕ್ರೀಜೊಸ್ಟ ಲೋಪಿಸ್ ದ್ವಿತೀಯ(91.04) ನಿಧಿ ಗೋಯ್ದ ಗೌಡ ತ್ರತೀಯ (90.08), ಸಿಂಚನ ಸುಬ್ರಾಯ ಗೌಡ ಚತುರ್ಥ(88.96).ಹಫಿಲ ಹೈಫಾ ಎಂ ಬ್ಯಾರಿ ಪಂಚಮ( 85.92) ಸ್ಥಾನವನ್ನು ಪಡೆಯುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

ದೀಕ್ಷಾ ಹೆಗಡೆ ಕನ್ನಡ ಮತ್ತು ಹಿಂದಿ ವಿಷಯದಲ್ಲಿ ನೂರಕ್ಕೆ ನೂರು ಅಂಕವನ್ನು ಗಳಿಸಿದ್ದಾಳೆ. ಆಡಳಿತ ಮಂಡಳಿಯ ಅಧ್ಯಕ್ಷರಾದ ಉಮೇಶ್ ಹೆಗಡೆ, ಗೌರವಾಧ್ಯಕ್ಷರಾದ ವಿ ಜಿ ಹೆಗಡೆ ಗುಡ್ಡೆ, ಆಡಳಿತಾಧಿಕಾರಿ ಎಂ ಎಸ್ ಹೆಗಡೆ ಗುಣವಂತೆ, ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್, ಶಾಲಾ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.ಕಳೆದ ಐದು ವರ್ಷಗಳಿಂದ ಈ ಶಾಲೆ ನೂರಕ್ಕೆ ನೂರು ಫಲಿತಾಂಶವನ್ನು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

error: