May 6, 2024

Bhavana Tv

Its Your Channel

ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲದ ಬಿಜೆಪಿಗರಿಗೆ ಮತ ಕೇಳುವ ಅಧಿಕಾರವಿಲ್ಲ: ದೇಶಪಾಂಡೆ ವಾಗ್ದಾಳಿ

ಕಾರವಾರ: ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸವಿಟ್ಟಿದ್ದು ಕೇವಲ ಕಾಂಗ್ರೆಸ್ ಪಕ್ಷ. ಬಿಜೆಪಿಗೆ ಇದರಲ್ಲಿ ನಂಬಿಕೆ ಇಲ್ಲ. ಹೀಗಾಗಿ ಅವರಿಗೆ ಈ ಚುನಾವಣೆಯಲ್ಲಿ ಮತ ಕೇಳುವ ಅಧಿಕಾರವಿಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಕಾರವರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಶಕ್ತಿಯ ಮೇಲೆ ನಂಬಿಕೆ ಇಟ್ಟು ೧೮ ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕು ಕೊಟ್ಟಿದ್ದು ದಿ.ರಾಜೀವ್ ಗಾಂಧಿಯವರು. ಹೀಗಾಗಿ ನನ್ನ ಪ್ರಕಾರ ಬಿಜೆಪಿಯ ಮುಖಂಡರು, ಕಾರ್ಯಕರ್ತರಿಗೆ ಈ ಚುನಾವಣೆಯಲ್ಲಿ ಮತ ಕೇಳುವ ಅಧಿಕಾರವಿಲ್ಲ. ಪಂಚಾಯತಿ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಬಿಜೆಪಿಗರಿಗೆ ವಿಶ್ವಾಸವಿಲ್ಲ ಎಂದರು.

ಬಿಜೆಪಿ ಸರ್ಕಾರ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ ಮಾಡಲು ಕೂಡ ತಯಾರಿಲ್ಲ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಪ್ರತಿನಿಧಿಗಳು ಇದರಿಂದಾಗಿ ಈ ಚುನಾವಣೆಯಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಅನಾವಶ್ಯಕವಾಗಿ ಹೊಸ ಸಮಿತಿ ಮಾಡಬೇಕೆಂದು ಹೇಳುತ್ತಿದ್ದಾರೆ. ಈಗ ಮಾಡಿರುವ ಮೀಸಲಾತಿಯನ್ನು ಕಾಂಗ್ರೆಸ್ ಮಾಡಿರುವುದಲ್ಲ, ಚುನಾವಣಾ ಆಯೋಗ ಮಾಡಿರುವುದು. ಆದರೂ ಅವರಿಗೆ ಈ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲ ಎಂದರು.

ಈ ವ್ಯವಸ್ಥೆಯಲ್ಲಿನ ವಿಶ್ವಾಸದ ಮೇರೆಗೆ ರಾಜ್ಯದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಉತ್ತರ ಕನ್ನಡದಲ್ಲಂತೂ ಖಚಿತವಾಗಿ ಗೆಲುವು ನಮ್ಮದೇ, ಅದರಲ್ಲಿ ಬೇರೆ ಸಂಶಯ ಬೇಡ ಎಂದರು

error: