May 6, 2024

Bhavana Tv

Its Your Channel

ಯಡಿಯೂರಪ್ಪ ತಮ್ಮನ್ನು ಅಧಿಕಾರದಿಂದ ಯಾಕೆ ಇಳಿಸಿದರೆಂಬುದನ್ನು ಮೊದಲು ಹೇಳಲಿ: ಬಿಜೆಪಿಗರ ವಿರುದ್ಧ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಕಾರವಾರ: ಬಿಜೆಪಿಯವರೇ ಮುಳುಗುತ್ತಿರುವ ಕಾರಣ ಅವರು ಬೇರೆಯವರಿಗೆ ಹೇಳುತ್ತಿದ್ದಾರೆ. ಹಿಮಾಚಲಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಸೋಲನನುಭವಿಸಿದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಹಡಗು ಮುಳುಗುತ್ತಿದೆ. ಯಡಿಯೂರಪ್ಪನವರು ತಮ್ಮನ್ನು ಯಾಕೆ ಅಧಿಕಾರದಿಂದ ಇಳಿಸಿದರು ಎನ್ನುವುದನ್ನು ಮೊದಲು ಹೇಳಲಿ. ಅದನ್ನ ಬಿಟ್ಟು ನಮ್ಮ ಮೇಲೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಯಲ್ಲಾಪುರದಲ್ಲಿ ಇತ್ತೀಚೆಗೆ ಬಿಜೆಪಿಯ ಜನಸ್ವರಾಜದ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡದ್ದ ಕಾಂಗ್ರೆಸ್ ಮುಳುಗುತ್ತಿರುವ ಹೇಳಿಕೆಗೆ ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದರು.

ನರೇಂದ್ರ ಮೋದಿಯವರ ೨೦ ವರ್ಷದ ರಾಜಕೀಯದಲ್ಲಿ ಮೊದಲ ಬಾರಿಗೆ ರೈತರ ಮುಂದೆ ಬಂದು ಕ್ಷಮೆ ಯಾಚಿಸಿದ್ದಾರೆ. ಅದರರ್ಥ ಅವರಿಗೆ ರಿವರ್ಸ್ ಗೇರ್ ಬೀಳುತ್ತಿದೆ ಎಂಬುದು. ರೈತ ವಿಚಾರ, ಕೋವಿಡ್, ಕಾರ್ಮಿಕರು, ಯುವಕರು, ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ವಿಫಲರಾಗಿರುವುದರಿಂದಲೇ ಕ್ಷಮೆ ಕೇಳಿದ್ದಾರೆ. ೭೦ ವರ್ಷಗಳಲ್ಲಿ ನಾವೇನು ಮಾಡಿಲ್ಲವೆಂದು ಅವರು ಹೇಳುತ್ತಿದ್ದರೋ, ಈಗ ಬಿಜೆಪಿಯವರು ಅದನ್ನು ಮಾಡುತ್ತಿದ್ದಾರೆ. ಎಲ್ಲವನ್ನೂ ಬಿಜೆಪಿ ಸರ್ಕಾರ ಖಾಸಗೀಕರಣ ಮಾಡುತ್ತಿದೆ. ಸಾಗರ ಮಾಲಾವನ್ನೂ ಖಾಸಗೀಕರಣ ಮಾಡಲಾಗಿದೆ. ಅದರಿಂದ ಮೀನುಗಾರರಿಗೆ ಎಷ್ಟು ಸಮಸ್ಯೆ ಆಗುತ್ತೆಂದು ಅವರಿಗೆ ಗೊತ್ತಿಲ್ಲ. ಬಿಎಸ್ ಎನ್ ಎಲ್ ಅನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಒಟ್ಟಾರೆಯಾಗಿ ದೇಶವನ್ನೇ ಮಾರಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಒಂದೂವರೆ ವರ್ಷದ ರೈತ ಹೋರಾಟದಲ್ಲಿ ಮೃತಪಟ್ಟ ಏಳುನೂರು ರೈತರಲ್ಲಿ ಒಬ್ಬರೇ ಒಬ್ಬ ಮೃತ ರೈತನ ಕುಟುಂಬದವರನ್ನು ಮಾತನಾಡಿಸುವ ಪ್ರಯತ್ನ ಪ್ರಧಾನಿ ಮಾಡಿಲ್ಲ. ಈ ಚುನಾವಣೆಯಲ್ಲಿ ಹಣ, ಹೆಂಡ, ಅಧಿಕಾರದ ಬಲ ಬಳಸುತ್ತಾರೆ. ಆದರೆ ಮತದಾರರು ಕಾಂಗ್ರೆಸ್ ಗೇ ಮತ ಒತ್ತುತ್ತಾರೆ ಎನ್ನುವುದು ನಮಗೆ ಗೊತ್ತಿದೆ ಎಂದ ಅವರು, ಎಲ್ಲಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನಿನ್ನೆ ಬಿಡುಗಡೆಯಾಗಿದೆ. ಉತ್ತರ ಕನ್ನಡದಲ್ಲಿ ದೇಶಪಾಂಡೆ, ಮಾರ್ಗರೇಟ್ ಆಳ್ವಾ ಒಡಗೂಡಿ ಎಲ್ಲಾ ಮಾಜಿ ಶಾಸಕರುಗಳು, ಪ್ರಮುಖರು ಸೇರಿ ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ. ಅದೇ ಅಭ್ಯರ್ಥಿಯನ್ನೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಒಪ್ಪಿ, ಎಐಸಿಸಿ ಕೂಡ ಅವರನ್ನೇ ಆಯ್ಕೆ ಮಾಡಿ ಘೋಷಿಸಿದೆ ಎಂದರು.

ಮಹಾತ್ಮಗಾAಧಿಯವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಲ್ಲೂ ಎಐಸಿಸಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿಯವರು, ಪ್ರಧಾನಿಗಾಗಿ ಮನಮೋಹನ್ ಸಿಂಗ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ೨೦೦೪ರಲ್ಲಿ ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯೊಂದನ್ನು ರೂಪಿಸಿ ಜಾರಿಗೆ ತಂದರು. ಆದರೆ ಅದನ್ನು ಈಗಿನ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೊದಲ ಭಾಷಣದಲ್ಲಿ ಗೇಲಿ ಮಾಡಿದರು. ಆದರೆ ಅದೊಂದೇ ಯೋಜನೆ ಈಗಲೂ ಸಹ ಬಡಜನರಿಗೆ ಉದ್ಯೋಗ ಒದಗಿಸುತ್ತಿದೆ. ಮನ್ರೇಗಾ ಅನ್ನೋದು ಕಾನೂನು. ಗ್ರಾಮೀಣ ಭಾಗದ ಎಲ್ಲರಿಗೂ ಉದ್ಯೋಗ ಸಿಗಬೇಕೆಂದು ಈ ಕಾರ್ಯಕ್ರಮ ಮಾಡಲಾಯಿತು. ಈಗ ಬಡಜನರಿಗೆ ಎರಡೊತ್ತು ಊಟ ಸಿಗುತ್ತಿದೆಯೆಂದರೆ ಅದು ಈ ಯೋಜನೆಯಿಂದ ಎಂದರು.

ಯಾರೋ ಒಬ್ರು ಫಿಲ್ಮ್ ಆ್ಯಕ್ಟರ್ ಹೇಳಿದ್ರಂತೆ, ನಮಗೆ ಸ್ವಾತಂತ್ರ‍್ಯ ಸಿಕ್ಕಿದ್ದು ೨೦೧೪ರಲ್ಲಿ ಎಂದು. ಹೀಗಾಗಿ ಜನ ಬಿಜೆಪಿ ಕಚೇರಿಯೆದುರು ಸಾಲು ನಿಂತಿದ್ದಾರoತೆ. ತಮಗೆ ಸ್ವಾತಂತ್ರ‍್ಯ ಹೋರಾಟಗಾರರ ಪಿಂಚಣಿ ಕೊಡಿ ಎಂದು. ಈ ಬಗ್ಗೆ ಅವರು ಮಾತನಾಡಲಿ ಎಂದು ಪಂಚಾಯತಿ ಪ್ರತಿನಿಧಿಗಳ ಗೌರವಧನ ಹೆಚ್ಚಳ ಮಾಡುವ ಕುರಿತು ಮಾತನಾಡಿದ್ದ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಅವರು ತಿರುಗೇಟು ನೀಡಿದರು.

error: