May 19, 2024

Bhavana Tv

Its Your Channel

ದೀಪಾವಳಿ ಪಟಾಕಿಯಂತೆ ಸಿಡಿತಿದ್ದ ಬಾಂಬ್‌ಗಳಿಗೆ ಮೋದಿಯಿಂದಾಗಿ ಬ್ರೇಕ್ ಬಿದ್ದಿದೆ- ಗೃಹ ಸಚಿವ ಅರಗಾ ಜ್ಞಾನೇಂದ್ರ

ಕಾರವಾರ: ಮೊದಲೆಲ್ಲ ದೀಪಾವಳಿ ಪಟಾಕಿ ಸಿಡಿಯುವಂತೆ ಬಾಂಬ್‌ಗಳು ಸಿಡಿಯುತ್ತಿದ್ದವು. ಮೋದಿ ಸರಕಾರ ಬಂದ ನಂತರ ಇವುಗಳ ಮೇಲೆ ಬ್ರೇಕ್ ಬಿದ್ದಿದೆ. ಕೇವಲ ಕಾಶ್ಮೀರ ಭಾಗದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಅದನ್ನೂ ಮಟ್ಟ ಹಾಕುತ್ತೇವೆ ಎಂದು ಗೃಹ ಸಚಿವ ಅರಗಾ ಜ್ಞಾನೇಂದ್ರ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮಾತನಾಡಿದ ಅವರು, ಮುರ್ಡೇಶ್ವರದ ಶಿವನ ಮೂರ್ತಿ ವಿರೂಪಗೊಳಿಸಿದ ಫೋಟೊ ಹರಿಬಿಟ್ಟಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಈಗಾಗಲೇ ಪೊಲೀಸರೊಂದಿಗೆ ಮಾತುಕತೆ ನಡೆಸಲಾಗಿದೆ. ದೇಗುಲದ ಸುತ್ತಮುತ್ತ ಸೂಕ್ತ ಬಂದೋಬಸ್ತ್ ನೀಡಲಾಗಿದೆ. ಯಾರು ಅದನ್ನು ಬಳಸಿದ್ದಾರೆ, ಎಲ್ಲಿಂದ ಬಂದಿದೆ ಎನ್ನುವುದನ್ನು ಪತ್ತೆ ಹಚ್ಚಿ, ಅಂಥವರಿಗೆ ಶಿಕ್ಷೆ ನೀಡಬೇಕಿದೆ. ಕಾನೂನು ಸುವ್ಯವಸ್ಥೆ ಕೆಡಿಸುವ ದೃಷ್ಟಿಯಿಂದ ಇದು ಪ್ರಮುಖ ಪ್ರಕರಣವಾಗಿದೆ ಎಂದರು.

ಮಾನಸಿಕವಾಗಿ ಕೆಲ ಯುವಕರು ದೇಶದ್ರೋಹಿ ಚಟುವಟಿಕೆಗಳಿಗೆ ತಯಾರಾಗುತ್ತಿದ್ದಾರೆ. ಭಟ್ಕಳ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಇಂಥವಾಗುತ್ತಿದೆ. ಆದರೆ ಪೊಲೀಸರು ಈ ಬಗ್ಗೆ ನಿಗಾ ಇಟ್ಟಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಬಿಗಿ ಜಾಸ್ತಿಯಾಗಿದೆ. ಇದನ್ನು ಮಟ್ಟ ಹಾಕುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಈ ದೇಶವನ್ನು ಗಟ್ಟಿ ಮಾಡುವಂಥ ಎಲ್ಲಾ ಮಾನಸಿಕ ಸ್ಥಿತಿಯಲ್ಲಿ ಸಾರ್ವಜನಿಕರೂ ಭಾಗಿಯಾಗಬೇಕು, ಸಹಕರಿಸಬೇಕು. ಕೇವಲ ಪೊಲೀಸ್, ಸೇನಾ ವ್ಯವಸ್ಥೆಯಿಂದ ಆಗುತ್ತದೆ ಎಂದಲ್ಲ. ಸಾರ್ವಜನಿಕರು ಸರ್ಕಾರದೊಂದಿಗೆ, ರಕ್ಷಣಾ ಪಡೆಗಳೊಂದಿಗೆ ಸಹಕಾರ ನೀಡಬೇಕಿದೆ ಎಂದರು.

ಪೊಲೀಸರು ವಿಶೇಷ ಆದ್ಯತೆಯ ಮೇರೆಗೆ ಕರಾವಳಿಯಲ್ಲಿ ಕಣ್ಗಾವಲು ಇಟ್ಟಿದ್ದಾರೆ. ಕರಾವಳಿ ಕಾವಲು ಪಡೆಯನ್ನೂ ಮತ್ತಷ್ಟು ಬಿಗಿ ಮಾಡುತ್ತೇವೆ. ೩೦ ಬೋಟ್‌ಗಳು ನಮಗೆ ಬೇಕಿವೆ, ಈ ಬಗ್ಗೆ ಬೇಡಿಕೆ ಇಡಲಾಗಿದೆ ಎಂದರು.

ಯಡಿಯೂರಪ್ಪ ಜೆಡಿಎಸ್ ಬೆಂಬಲ ಕೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಳ ಒಪ್ಪಂದ ಮೊದಲು ಕಾಂಗ್ರೆಸ್‌ನವರು ಮಾಡಿಕೊಳ್ಳುತ್ತಿದ್ದರು. ಈಗ ನಮ್ಮ ಬಗ್ಗೆ ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಇದು ಸಹಜ. ನಮಗೆ ಜೆಡಿಎಸ್‌ನವರು ಕಾಂಗ್ರೆಸ್‌ಗಿpತ ಹತ್ತಿರದವರು; ನಾವು ಕಾಂಗ್ರೆಸ್‌ಗೆ ವಿರೋಧಿಗಳು. ಅವರ ಅಭ್ಯರ್ಥಿ ಇಲ್ಲದಿದ್ದಲ್ಲಿ ಕಾಂಗ್ರೆಸ್‌ಗೆ ಮಾಡಬೇಡಿ, ನಮಗೆ ಬೆಂಬಲಿಸಿ ಎಂಬುದರಲ್ಲಿ ತಪ್ಪೇನಿದೆ? ಬಿಜೆಪಿ, ಜೆಡಿಎಸ್ ಎಂದಲ್ಲ. ಒಂದಷ್ಟು ಹೆಚ್ಚು ಲೀಡ್‌ನಲ್ಲಿ ಗೆಲ್ಲಬೇಕು ಎಂದಿದ್ದೇವೆ ಎಂದರು.

error: