May 5, 2024

Bhavana Tv

Its Your Channel

ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ 183 ಮತಗಳ ಅಂತರದಿಂದ ಭರ್ಜರಿ ಗೆಲವು

ಕಾರವಾರ: ಅಂತೂ ಇಂತೂ ಉತ್ತರ ಕನ್ನಡದಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಮೊದಲ ಬಾರಿಗೆ ವಿಧಾನ ಪರಿಷತ್ ಗೆ ಪ್ರವೇಶ ಪಡೆದಿದ್ದಾರೆ. ಅಭ್ಯರ್ಥಿ ಗಣಪತಿ ಉಳ್ವೇಕರ್ ಸುಮಾರು ೧೮೩ ಮತಗಳ ಅಂತರದಿoದ ಗೆಲುವು ಸಾಧಿಸಿದ್ದಾರೆ.

ಒಟ್ಟು ೨೯೧೫ ಮತಗಳಲ್ಲಿ ೨೯೦೭ ಮತಗಳ ಚಲಾವಣೆಯಾಗಿತ್ತು. ಬಿಜೆಪಿಯ ಅಭ್ಯರ್ಥಿ ಗಣಪತಿ ಉಳ್ವೇಕರ್ ೧೫೧೪ ಮತ ಪಡೆದಿದ್ದು, ಕಾಂಗ್ರೆಸ್ ನ ಭೀಮಣ್ಣ ನಾಯ್ಕ ೧೩೩೧ ಮತಗಳನ್ನು ಪಡೆದು ೧೮೩ ಮತಗಳ ಅಂತರದಿoದ ರಾಜಕೀಯದಲ್ಲಿ ನಾಲ್ಕನೇ ಸೋಲನನ್ನುಭವಿಸಿದ್ದಾರೆ.
೧೪ ಟೇಬಲ್ ಗಳಲ್ಲಿ ೧೭ ಸುತ್ತಿಗೆ ಮತಗಳ ಎಣಿಕೆ ಕಾರ್ಯ ನಡೆಸಲಾಗಿದೆ. ಪಕ್ಷೇತರ ಅಭ್ಯರ್ಥಿಗಳಾದ ಸೋಮಶೇಖರ ೧, ಈಶ್ವರ ಗೌಡ ೪, ದತ್ತಾತ್ರಯ ನಾಯ್ಕ ೩ ಮತಗಳನ್ನು ಪಡೆದಿದ್ದಾರೆ. ೫೪ ಮತಗಳು ತಿರಸ್ಕೃತವಾಗಿದೆ.

ಸ್ಥಳೀಯ ಸಂಸ್ಥೆಗಳಿoದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಈ ಬಾರಿ ಮೀನುಗಾರ ಮುಖಂಡ ಗಣಪತಿ ಉಳ್ವೇಕರರನ್ನು ನಿಲ್ಲಿಸಿತ್ತು. ೨೦೧೬ರಲ್ಲಿ ಗಣಪತಿ ಅವರನ್ನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಾಡಿತ್ತು. ಆಗ ಅವರು ಅತ್ಯಲ್ಪ (೨೨೮) ಮತಗಳ ಅಂತರದಿoದ ಚುನಾವಣೆಯಲ್ಲಿ ಸೋತಿದ್ದರು.
ಗಣಪತಿ ಉಳ್ವೇಕರ್ ಹಿನ್ನೆಲೆ :– ೧೯೬೩ರ ಡಿ.೧೭ರಂದು ಕಾರವಾರದಲ್ಲಿ ಜನಿಸಿದ ಗಣಪತಿ ಉಳ್ವೇಕರ್, ಬಡ, ಉದಾತ್ತ ಮೀನುಗಾರರ ಕುಟುಂಬದವರಾಗಿದ್ದಾರೆ. ಮೀನುಗಾರಿಕೆ ವ್ಯವಹಾರದಲ್ಲಿ ತಮ್ಮನ್ನು ತಾವು ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿರುವ ಉಳ್ವೇಕರ್, ರಫ್ತು ವ್ಯವಹಾರ ಕ್ಷೇತ್ರಕ್ಕೆ ಕಾಲಿಟ್ಟು, ರಫ್ತು ಆಮದು ಮಧ್ಯಸ್ಥಿಕೆ ಕಂಪನಿಯನ್ನೂ ಸ್ಥಾಪಿಸಿದ್ದಾರೆ. ಕಳೆದ ೨೫ ವರ್ಷಗಳಿಂದ ರಾಜಕೀಯದಲ್ಲಿದ್ದು, ಸತತ ಎರಡು ಅವಧಿಗೆ ಕಾರವಾರ ನಗರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲ ಬಾರಿಗೆ ೧೯೯೬ರಲ್ಲಿ ಕಾರವಾರ ನಗರಸಭೆಯ ಸದಸ್ಯರಾಗಿ ಆಯ್ಕೆಯಾದ ಬಳಿಕ, ಅಲ್ಲಿಂದ ಸತತವಾಗಿ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ೨೦೦೨ರಲ್ಲಿ ಕಾರವಾರ ನಗರಸಭೆಯ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು. ೨೦೦೭ರಲ್ಲಿ ಅವರು ತಮ್ಮ ವಾರ್ಡ್ ನಿಂದ ಕಾರವಾರ ನಗರಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ೨೦೦೮ರಲ್ಲಿ ಅವರು ಕಾರವಾರ ನಗರಸಭೆಯ ಅಧ್ಯಕ್ಷರಾಗಿದ್ದರು. ೨೦೧೦ರಲ್ಲಿ ಅವರು ಮತ್ತೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು.

ವಿಧಾನಸಭೆಗೆ ೨೦೦೮ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗಣಪತಿಯವರು ಸ್ಪರ್ಧಿಸಿ ಎರಡನೇ ಸ್ಥಾನದಲ್ಲಿದ್ದರು. ಆ ಸಮಯದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಿತ್ತು. ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕೆಳಗಿಳಿದಿದ್ದರು. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದರು. ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಜಿಲ್ಲಾಧ್ಯಕ್ಷರಾಗಿದ್ದು, ಕಾರವಾರದಲ್ಲಿರುವ ಡಾಕ್ ಮತ್ತು ಪೋರ್ಟ್ ಲೇಬರ್ ಕಾಂಟ್ರಾಕ್ಟ್ ಕೋ- ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾಗಿದ್ದಾರೆ.
೨೦೧೮ರ ಚುನಾವಣೆಯ ಸಂದರ್ಭದಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಗಣಪತಿ ಉಳ್ವೇಕರ್ ಅವರ ಹೆಸರು ಇತ್ತು. ಆದರೆ, ಬಿಜೆಪಿ ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ನೀಡಿದ್ದು, ಅವರೀಗ ಶಾಸಕರಾಗಿ ಅಧಿಕಾರದಲ್ಲಿದ್ದಾರೆ. ಶಿಸ್ತುಬದ್ಧ ಕಾರ್ಯಕರ್ತನಾಗಿ ಗಣಪತಿ ಉಳ್ವೇಕರ್ ಅವರು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿ, ಚುನಾವಣೆಯಲ್ಲಿ ಭಾರಿ ಅಂತರದಿoದ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಅವರ ಪರ ಸಕ್ರಿಯವಾಗಿ ಪ್ರಚಾರ ಮಾಡಿದ್ದರು. ನಂತರ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗಣಪತಿ ಉಳ್ವೇಕರ್ ಅವರು ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರು
ಸ್ಥಳೀಯ ಸಂಸ್ಥೆಗಳಿoದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆಯಲ್ಲಿ ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಸಾಧಿಸುವ ಮೂಲಕ ಇತಿಹಾಸ ಸಾಧಿಸಿದ್ದಾರೆ. ಇದೇ ಸಂಭ್ರಮದಲ್ಲಿ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಡ್ಯಾನ್ಸ್ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ.
ನಗರಸಭೆಯ ಮಹಿಳಾ ಸದಸ್ಯರೊಂದಿಗೆ ಸೇರಿಕೊಂಡು ಶಾಸಕಿ ರೂಪಾಲಿ ನಾಯ್ಕ ಕಾರವಾರದ ಮಾಲಾದೇವಿ ಮೈದಾನದಲ್ಲಿ ಡೊಳ್ಳು, ಡಿಜೆ ಕುಣಿತಕ್ಕೆ ನೃತ್ಯ ಮಾಡಿದ್ದಾರೆ.

error: