May 5, 2024

Bhavana Tv

Its Your Channel

ಸ್ವಾಮಿ ವಿವೇಕಾನಂದರು ನಮ್ಮ ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ ವ್ಯಕ್ತಿ-ಐಶ್ವರ್ಯ ಮಸೂರ್ಕರ್

ಕಾರವಾರ: ಮಕ್ಕಳು ಗಣ್ಯವ್ಯಕ್ತಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಾಲ್ಯದಿಂದಲೇ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಸಹ ತಮ್ಮ ಒಳ್ಳೆಯ ವ್ಯಕ್ತಿತ್ವದಿಂದ ಪ್ರಪಂಚವನ್ನೇ ಗೆದ್ದಿದ್ದರು. ಅವರು ನಮ್ಮ ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ ವ್ಯಕ್ತಿಯಾಗಿದ್ದಾರೆ ಎಂದು ಕಾರವಾರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ.ಐಶ್ವರ್ಯ ಮಸೂರ್ಕರ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ಅವರು ಆಝಾದ ಯುಥ್ ಕ್ಲಬ್ ಕಾರವಾರ, ಲಯನ್ಸ್ ಕ್ಲಬ್ ಕಾರವಾರ ಹಾಗೂ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ ಕೋಡಿಬಾಗ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ನಿಮಿತ್ತ ಹಮ್ಮಿಕೊಂಡ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಪಿ.ಎ.ಮಯೇಕರ್ ಮಾತನಾಡಿ ಸ್ವಾಮಿ ವಿವೇಕಾನಂದರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ಧ್ಯಾನದಿಂದ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿದ್ದಾರೆ. ಅವರ ಆದರ್ಶತತ್ವಗಳೇ ಭಾರತ ದೇಶದಲ್ಲಿ ಸಂಪತ್ತಿನAತೆ ಶಾಶ್ವತವಾಗಿ ಉಳಿದಿವೆ. ಇದನ್ನು ಭವಿಷ್ಯದಲ್ಲಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವೇದಿಕೆಯ ಮೇಲೆ ರಾಷ್ಟ್ರ ಮತ್ತು ರಾಜ್ಯೋತ್ವವ ಪ್ರಶಸ್ತಿ ವಿಜೇತ ನಜೀರ್ ಅಹಮದ್ ಯು.ಶೇಖ, ಲ.ಶಶಿ ಮಸೂರ್ಕರ, ಆಝಾದ ಯುಥ ಕ್ಲಬ್‌ನ ಮಾಜಿ ಅಧ್ಯಕ್ಷರಾದ ರಾಷ್ಟ್ರ ಯುವ ಪ್ರಶಸ್ತಿ ವಿಜೇತ ಮೊಹಮ್ಮದ್ ಹಸನ್ ಶೇಖ, ಕ್ಲಬ್‌ನ ಅಧ್ಯಕ್ಷ ರೋಹನ ಭುಜಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ಪ್ರಬಂಧ ಸ್ಪರ್ದೆಯನ್ನು ಏರ್ಪಡಿಸಿದ್ದು ಸ್ವಾಮಿ ವಿವೇಕಾನಂದ ಇಂಗ್ಲಿಷ ಮಾಧ್ಯಮ ಶಾಲೆಯ ರಕ್ಷಿತ ಎ.ಮಿರಾಶಿ ಪ್ರಥಮ, ಛಾಯಾ ಹೆಚ್. ಪೆಡ್ನೇಕರ ದ್ವಿತೀಯ ಮತ್ತು ಪವಿತ್ರಾ ಪಿ. ನಾಯ್ಕ ತೃತೀಯ ಬಹುಮಾನಗಳನ್ನು ಪಡೆದುಕೊಂಡರು. ಭಾಷಣ ಸ್ಪರ್ದೆಯಲ್ಲಿ ಪ್ರೀತಿ ದುರ್ಗೆಕರ್ ಪ್ರಥಮ, ಶಿವಾನಿ ನಾಯ್ಕ ದ್ವಿತೀಯ, ಶರನ ಬೆಲ್ಲಾರಿ ತೃತೀಯ ಬಹುಮಾನ ಪಡೆದುಕೊಂಡರು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಪ್ರಾರಂಭದಲ್ಲಿ ಶಿಕ್ಷಕ ಆರ್.ಗಾಯತ್ರಿ ಸ್ವಾಗತಿಸಿದರು. ಕೊನೆಯಲ್ಲಿಇಂಗ್ಲಿಷ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕಿ ರಿಝ್ವಾನ ಅಮೀನ ಶೇಖ ವಂದಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

error: