December 22, 2024

Bhavana Tv

Its Your Channel

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮ ದಿನದ ಅಂಗವಾಗಿ ಕುಮಟಾದ ಪೋಲಿಸ್ ಠಾಣೆಯಲ್ಲಿ ವೃಕ್ಷಾರೋಹಣ ಕಾರ್ಯಕ್ರಮ

ಕುಮಟಾ; ಮಂಡಲಾದ್ಯಕ್ಷರಾದ ಹೇಮಂತ ಕುಮಾರ್ ಗಾಂವ್ಕರ,ಮಾತನಾಡಿ ಗಿಡಗಳನ್ನು ನೆಟ್ಟು , ಬದುಕುಳಿಯುವಂತೆ ನಾವೆಲ್ಲ ಕಾಳಜಿ ವಹಿಸಬೇಕು ಡಾ|| ಶ್ಯಾಮ ಪ್ರಸಾದ್ ಮುಖರ್ಜಿ ಶ್ರೇಷ್ಠ ವಿದ್ವಾಂಸರು, ಶ್ರೇಷ್ಠ ರಾಜನೀತಿ ತಜ್ಞ, ಅಸಾಧಾರಣ ಸಂಸದೀಯ ಪಟು, ಭಾರತೀಯ ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ ಶಿಕ್ಷಣ ಕ್ಷೇತ್ರದಲ್ಲಿನ ಶೈಕ್ಷಣಿಕ ಯೋಜನೆ, ಅದರ ವಿಧಿವಿಧಾನ ಚೆನ್ನಾಗಿ ಬಲ್ಲವರಾಗಿದ್ದ ಮುಖರ್ಜಿಯವರು ವಿಶ್ವ ವಿದ್ಯಾಲಯದ ಸೆನೆಟ್ ಹಾಗು ಸಿಂಡೀಕೆಟ್­ಗಳಿಗೆ ೧೯೨೪ ರಲ್ಲಿ ಚುನಾಯಿತರಾದರು ಬಂಗಾಳದ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಲ್ಕತ್ತ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದರು. ಎಂದರು, ಇದೇ ಸಂದರ್ಭದಲ್ಲಿ ಮಹಿಳಾಮೋರ್ಚಾದ ಪ್ರಧಾನ ಕಾರ್ಯದರ್ಶಿ ಜಯಾ ಶೇಟ್ ರವರು ಸ್ವತಃ ತಾವೇ ತಯಾರಿಸಿದ ಮಾಸ್ಕನ್ನು ಪೋಲಿಸ್ ಸಿಬ್ಬಂದಿಗಳಿಗೆ ವಿತರಿಸಿದರು.ಕುಮಟಾ ಪಿಎಸ್‌ಐ ಆನಂದ ಮೂರ್ತಿ,ಅಪರಾಧ ವಿಭಾಗದ ಪಿಎಸ್‌ಐ ಸುಧಾ ಅಘನಾಶಿನಿ,ನಗರಾದ್ಯಕ್ಷರಾದ ಪ್ರಸಾದ ನಾಯಕ್, ಓಬಿಸಿ ಮೋರ್ಚಾದ ಅಧ್ಯಕ್ಷರಾದ ವಿಶ್ವನಾಥ ನಾಯ್ಕ,ಯುವಮೋರ್ಚಾ ಸಾಮಾಜಿಕ ಜಾಲತಾಣದ ಪ್ರಮುಖ ಸುಮಂತ ಆಚಾರ್ಯ, ಹಾಗೂ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮೋಹಿನಿ ಗೌಡ, ಹಾಗೂ ಮೋರ್ಚಾದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.

error: