May 12, 2024

Bhavana Tv

Its Your Channel

ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡುವ ಅಭಿಯಾನದಲ್ಲಿ ಸಾಮಾಜಿಕ ಅಂತರ ಮರೆತ ವಿದ್ಯಾರ್ಥಿಗಳು

ಕುಮಟಾ: ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡುವ ಅಭಿಯಾನ ತಾಲ್ಲೂಕಿನಲ್ಲಿ ಶುರುವಾಗಿದ್ದು, ಬುಧವಾರ ವಿದ್ಯಾರ್ಥಿಗಳು ಅನುಸರಿಸಿದ ಸಾಮಾಜಿಕ ಅಂತರದ ಪಾಲನೆ ಮಾತ್ರ ಆತಂಕ ಮೂಡಿಸುವಂತಿತ್ತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂಕು ನುಗ್ಗಲು ಏರ್ಪಟ್ಟು ಸರದಿಸಾಲಿನಲ್ಲಿ ನಿಂತ ವಿದ್ಯಾರ್ಥಿಗಳು ಪರಸ್ಪರ ತಳ್ಳಿಕೊಳ್ಳುತ್ತಾ ಹೋಗಿ ಲಸಿಕೆ ಪಡೆದುಕೊಂಡರು. ಇಲ್ಲಿಯ ದೃಶ್ಯ ಗಮನಿಸಿದರೆ ಕೊರೊನಾ ಸಂಭ್ರಮದಿoದ ನಾಟ್ಯವಾಡಿದಂತೆ ಭಾಸವಾಗುತ್ತಿತ್ತು. ಅಲ್ಲಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗಳಾಗಲಿ, ಕಾಲೇಜಿನ ಪ್ರಾಚಾರ್ಯರಾಗಲೀ ಯಾರೂ ಸಹ ಮಕ್ಕಳಿಗೆ ಕೋವಿಡ್ ನಿಯಮ ಪಾಲನೆ ಮಾಡುವಂತೆ ಎಚ್ಚರಿಕೆ ಸೂಚನೆ ನೀಡಿದ್ದು ಕಂಡುಬರಲಿಲ್ಲ.

ಶಾಲಾ ಕಾಲೇಜುಗಳ ಪ್ರಾರಂಭದ ವಿಚಾರದಲ್ಲಿ ಸರ್ಕಾರ ಸಾಕಷ್ಟು ಯೋಚನೆ ನಡೆಸಿ, ತಜ್ಞರ ಜೊತೆ ಮಾತುಕತೆ ನಡೆಸಿ ನಿರ್ಣಯಕ್ಕೆ ಬಂದಿದೆಯಾದರೂ ಕೋವಿಡ್ ಭಯವೇ ಇಲ್ಲದಂತೆ ಬೇಕಾಬಿಟ್ಟಿ ವರ್ತಿಸುವ ವಿದ್ಯಾರ್ಥಿಗಳನ್ನು ಗಮನಿಸಿದರೆ ಸೋಂಕಿನ ನಿಯಂತ್ರಣ ಸಾಧ್ಯವೇ ಎಂಬ ಪ್ರಶ್ನೆ ಹುಟ್ಟುವುದಲ್ಲದೇ ಕಾಲೇಜು ಪ್ರಾರಂಭದ ನಂತರದ ಬೆಳವಣಿಗೆಗಳು ಕಳವಳಕಾರಿ ಎಂತಲೇ ಹೇಳಬಹುದು.

error: