May 17, 2024

Bhavana Tv

Its Your Channel

“ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ” ಅಂಗವಾಗಿ “ಪ್ರೇರಣಾ” ಕಾರ್ಯಕ್ರಮ

ಕುಮಟಾ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಉತ್ತರ ಕನ್ನಡ ಜಿಲ್ಲೆ ಹಾಗೂ “ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಉತ್ತರಕನ್ನಡ. ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಮಾದಕ ದ್ರವ್ಯವಿರೋಧಿ ದಿನಾಚರಣೆ” ಅಂಗವಾಗಿ “ಪ್ರೇರಣಾ ಕಾರ್ಯಕ್ರಮ! ಹಮ್ಮಿಕೊಳ್ಳಲಾಯಿತು.

  ಉಡುಪಿ ಕರಾವಳಿ ಪ್ರಾದೇಶಿಕ ಕಚೇರಿಯ 'ಪ್ರಾದೇಶಿಕ ನಿರ್ದೇಶಕ'ರಾದ "ಶ್ರೀ ವಸಂತ ಸಾಲ್ಯಾನ್" ರವರು ಕಾರ್ಯಕ್ರಮ ಉದ್ಘಾಟಿಸಿ, ಮಾದಕ ವಸ್ತುಗಳ ಬಳಕೆಯಿಂದಾಗಿ ಸಮಾಜದಲ್ಲಿ ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದನ್ನು ಮನಗಂಡ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ೧೯೯೧ರಲ್ಲಿ ಜನಜಾಗೃತಿ ಮೂಲಕ "ದುಶ್ಚಟ ಸಮಾಜ ನಿರ್ಮಾಣ"ದ ಜನಪರ ಹೋರಾಟಕ್ಕೆ ಚಾಲನೆ ನೀಡಿ,೧೯೯೪ರಲ್ಲಿ ಜನಜಾಗೃತಿ ವೇದಿಕೆ  ಸಂಘಟಿಸಿ ತನ್ಮೂಲಕ ಸಮುದಾಯ ಮದ್ಯವರ್ಜನ ಶಿಬಿರ, ವಿಶೇಷ ಶಿಬಿರ, ಮಹಿಳಾ ಶಿಬಿರ, ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮ ಗಳ ಮೂಲಕ"ನಡೆಯುವವರು ಜಾರದಂತೆ","ಜಾರುವವರು ಬೀಳದಂತೆ","ಬಿದ್ದವರನ್ನು ಮೇಲೆತ್ತುವ ಕಾಯಕ"ವನ್ನು  ಜನಜಾಗೃತಿ ವೇದಿಕೆಯ ಮೂಲಕ  ಮಾಡುತ್ತಿದ್ದು, ಪ್ರಸ್ತುತ ವೇದಿಕೆಯು ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಸಂಘಟನೆಗಳ ಮೂಲಕ  ದುಶ್ಚಟ ದುರಭ್ಯಾಸದ ಕುರಿತು ಜಾಗೃತಿ ಮೂಡಿಸಿ "ಸ್ವಾಸ್ಥ್ಯ ಸಮಾಜ ನಿರ್ಮಾಣ"ದ ಕಾರ್ಯ ಮಾಡುತ್ತಿದೆ ಎಂದರು.
  ಕಾರ್ಯಕ್ರಮದ ಆರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕರಾದ " ಶಂಕರ್ ಶೆಟ್ಟಿ "ಇವರು ಯೋಜನೆ ಹಾಗೂ ವೇದಿಕೆಯ ಕಾರ್ಯಕ್ರಮಗಳಾದ ಮದ್ಯವರ್ಜನ ಶಿಬಿರ,ಜನಜಾಗೃತಿ ಜಾಥಾ,ಶಾಲಾ ಕಾಲೇಜುಗಳಲ್ಲಿ ಆಯೋಜಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ,ನವಜೀವನ ಸಮಿತಿ ಸಂಘಟನೆ  ಕುರಿತು ಪ್ರಸ್ತಾವಿಕವಾಗಿ ಮಾಹಿತಿ ನೀಡಿದರು

ನಂತರ ವೇದಿಕೆಯ “ವಿಶೇಷ ಕಾಳಜಿ”ಯೊಂದಿಗೆ ಸಮಾಜದಲ್ಲಿ ದುಶ್ಚಟ ದುರಭ್ಯಾಸಗಳ ಕುರಿತು ಜಾಗೃತಿ ಮೂಡಿಸಿ, “ಜಾಗ್ರತ ಸಮಾಜಕ್ಕೊಂದು, ಜಾಗೃತಿ ಸಂದೇಶ.” ನೀಡುವ ನಿಟ್ಟಿನಲ್ಲಿ ಹೊರತಂದ “ಕರಪತ್ರ”ವನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರುಗಳಾದ ಶ್ರೀ ಯೋಗಾನಂದ ಗಾಂಧಿ- ಮಾಜಿ ಪುರಸಭಾ ಸದಸ್ಯರು ಕುಮಟಾ, ವಾಸುದೇವ್ ನಾಯಕ್, ನಿವೃತ್ತ ಶಿಕ್ಷಕರು ಹೀರೇಗುತ್ತಿ. ದಯಾನಂದ ದೇಶಭಂಡಾರಿ- ಮುಖ್ಯೋಪಾಧ್ಯಾಯರು ಹಾಗೂ “ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರು”, ಶ್ರೀಮತಿ ಮಮತಾ ನಾಯ್ಕ- ವಕೀಲರು, ಬಾಡ ಇವರುಗಳು ಪಾಲ್ಗೊಂಡು ಯೋಜನೆಯ ಮೂಲಕ ಕಳೆದ ಹದಿನೈದು ವರ್ಷಗಳಲ್ಲಿ ಸಾಧಿಸಿದ ಜನಜಾಗೃತಿ ಕಾರ್ಯಕ್ರಮಗಳು ಹಾಗೂ ಸಾಧಿಸಿದ ಸಾಧನೆಯನ್ನು ವ್ಯಕ್ತಪಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸತೀಶ್ ಶೇಟ್, ಮುರ್ಡೇಶ್ವರ ಇವರು ವಹಿಸಿ ಪ್ರಸ್ತುತ ಯುವ ಜನಾಂಗ ಹೆಚ್ಚಾಗಿ ಮಾದಕ ವ್ಯಸನಿಗಳಾಗುತ್ತಿದ್ದು ನಾವೆಲ್ಲರೂ ಸಂಘಟಿತ ಪ್ರಯತ್ನದೊಂದಿಗೆ “ದುಶ್ಚಟ ಮುಕ್ತ ಸಮಾಜ ನಿರ್ಮಾಣ, ನಮ್ಮೆಲ್ಲರ ಹೊಣೆ” ಎಂಬ ಧ್ಯೇಯದೊಂದಿಗೆ ನಿಸ್ವಾರ್ಥ ಸೇವೆಗೆ ಮುಂದಾಗಬೇಕೆAದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರವಾರ, ಕುಮಟಾ ಹೊನ್ನಾವರ, ಭಟ್ಕಳ ಯೋಜನಾಧಿಕಾರಿಗಳು ಹಾಗೂ ಎಮ್.ಐ.ಎಸ್ ಯೋಜನಾಧಿಕಾರಿಗಳು, ಜಿಲ್ಲೆಯ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು ಹಾಜರಿದ್ದರು.
ಕುಮಟಾ ಯೋಜನಾಧಿಕಾರಿಗಳಾದ ನಾಗರಾಜ್ ನಾಯ್ಕ್ ವಂದಿಸಿದರು ಹೊನ್ನಾವರ ವಲಯ ಮೇಲ್ವಿಚಾರಕ ನಾಗರಾಜ್.ಕೆ.ಕಾರ್ಯಕ್ರಮ ನಿರೂಪಿಸಿದರು.

error: