December 22, 2024

Bhavana Tv

Its Your Channel

ಡಾ|| ಪದ್ಮನಾಭ ಕಾಮತ ಸಿ.ಎ.ಡಿ ಸಂಸ್ಥೆಯಿoದ ಪ್ರಾಥಮಿಕ ಆರೋಗ್ಯ ಮಿರ್ಜಾನ ಉಪ ಕೇಂದ್ರಕ್ಕೆ ಈ.ಸಿ.ಜಿ ಯಂತ್ರ ಹಸ್ತಾಂತರ

ಕುಮಟಾ : ಮಿರ್ಜಾನ ಗ್ರಾಮ ಪಂಚಾಯತದಲ್ಲಿ ಡಾ|| ಪದ್ಮನಾಭ ಕಾಮತ ಸಿ.ಎ.ಡಿ ಸಂಸ್ಥೆ ಮುಖ್ಯಸ್ಥರು ಹೃದಯರೋಗ ತಜ್ಞರು ಕೆಎಂಸಿ ಮಂಗಳೂರು ಇವರು ನೀಡಿದ ಈ.ಸಿ.ಜಿ ಯಂತ್ರವನ್ನು ಕುಮಟಾ ತಾಲ್ಲೂಕು ದಂಡಾಧಿಕಾರಿಗಳು ಇವರ ಮೂಲಕ ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.

ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಿದ ತಹಸೀಲ್ದಾರರು ಆರ್.ವಿ.ಕಟ್ಟಿಮನಿ ದೀಪ ಬೆಳಗಿಸುವದರ ಮೂಲಕ ಇಸಿಜಿ ಯಂತ್ರ ವನ್ನು ಪ್ರಾಥಮಿಕ ಆರೋಗ್ಯ ಮಿರ್ಜಾನ ಉಪ ಕೇಂದ್ರಕ್ಕೆ ಹಸ್ತಾಂತರಿಸಿದರು ನಂತರ ಮಾತನಾಡಿದ ಅವರು ಮಿರ್ಜಾನ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಆರೋಗ್ಯ ತಪಾಸಣೆಗೆ ತುರ್ತು ಸಂದರ್ಭದಲ್ಲಿ ದೂರದ ಆಸ್ಪತ್ರೆಗೆ ಹೋಗುವುದು ಕಷ್ಟವಾಗುತ್ತಿದೆ ಅದರಿಂದ ಈ. ಸಿ. ಜಿ ಯಂತ್ರ ಆರೋಗ್ಯ ಉಪಕೇಂದ್ರದಲ್ಲಿ ಇರಿಸಿರುವುದರಿಂದ ಜನರಿಗೆ ಸಹಾಯವಾಗುವುದು ಡಾII ಪದ್ಮನಾಭ ಕಾಮತ ಸಿ. ಎ. ಡಿ ಸಂಸ್ಥೆಯಿAದ ಇನ್ನು ಹೆಚ್ಚಿನ ಕೊಡುಗೆ ಈ ಸಂಸ್ಥೆಯಿAದ ಆಗಲಿ ಎಂದು ಹಾರೈಸಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಪರಮೇಶ್ವರ್ ಪಟಗಾರ, ಉಪಾಧ್ಯಕ್ಷರು ಸೀತಾ ಭಟ್,
ಗ್ರಾ ಪಂ. ಸದಸ್ಯ ಗಣೇಶ್ ಅಂಬಿಗ ಪಿ. ಡಿ. ಓ ನಾಗಶ್ರೀ ಮುಕ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ್ ನಾಯ್ಕ್, ( ಸಿ ಎ ಡಿ ) ಸಂಸ್ಥೆಯ ಗುರುರಾಜ್ ನಾಯಕ್, ಡಾ. ಪದ್ಮನಾಭ ರವರ ಆತ್ಮೀಯರು ದರ್ಶನ್ ನಾಯಕ್. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

error: