December 22, 2024

Bhavana Tv

Its Your Channel

ಲಸಿಕೆಗಾಗಿ ಬೆಳಿಗ್ಗೆ ೫ ಗಂಟೆಯಿOದ ಸರತಿಸಾಲು, ಟೋಕನ್ ನೀಡಿಕೆಯಲ್ಲಿ ತಾರತಮ್ಯ ಆರೋಪ.

ಕುಮಟಾ ತಾಲೂಕಾಸ್ಪತ್ರೆಯಲ್ಲಿ ಕೋವಿಶೀಲ್ಡ್ ಎರಡನೇ ಡೋಸ್ ಪಡೆಯಲು ೧೫೦ ಮಂದಿಗೆ ಅವಕಾಶ ಮಾಡಿಕೊಡಲಾಗಿತ್ತು . ಬೆಳಗಿನ ಜಾವ ೫ ಗಂಟೆಯಿoದಲೇ ತಾಲೂಕಾಸ್ಪತ್ರೆಯ ಆವರಣದಲ್ಲಿ ಜಮಾಯಿಸತೊಡಗಿದ ಜನರ ಸಂಖ್ಯೆ ಕೆಲವೇ ಸಮಯದಲ್ಲಿ ನೂರೈವತ್ತನ್ನು ದಾಟಿ ಹೋಗಿದೆ. ಟೋಕನ್ ಹಂಚುವಾಗ ತಾರತಮ್ಯ ಮಾಡುತ್ತಿದ್ದಾರೆ , ಆಸ್ಪತ್ರೆಯ ಒಳಗಿದ್ದವರು ಅವರಿಗೆ ಬೇಕಾದವರಿಗೆ ಮೊದಲು ಟೋಕನ್ ಕೊಟ್ಟು ನಂತರ ಹೆಚ್ಚಿದ್ದರೆ ಮಾತ್ರ ಹೊರಗೆ ಕಾಯುತ್ತಾ ಕುಳಿತವರಿಗೆ ಟೋಕನ್ ಹಂಚುತ್ತಾರೆ ಎನ್ನುವ ಆರೋಪ ಸಾರ್ವಜನಿಕ ಗುಂಪಿನಿAದ ಕೇಳಿಬಂದಿದೆ . ತಾಲೂಕಾಸ್ಪತ್ರೆಯ ಆವರಣದಲ್ಲಿ ಸಾಮಾಜಿಕ ಅಂತರ ಮರೆಯಾಗಿದ್ದು ಕೋವಿಶೀಲ್ದ ಪಡೆಯಲು ಬಂದು ಕೊರೊನಾ ಸೋಂಕನ್ನು ಅಂಟಿಸಿಕೊAಡು ಹೋಗುತ್ತಾರೇನೋ ಎನ್ನುವ ಸ್ಥಿತಿ ನಿರ್ಮಾಣವಾಗಿದೆ .

error: