May 18, 2024

Bhavana Tv

Its Your Channel

ತಾ.ಪಂ ಸಭಾಭವನದಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಮಳೆಗಾಲದ ಪೂರ್ವಭಾವಿ ಸಭೆ

ಕುಮಟಾ: ಕೆಲವು ದಿನಗಳು ಅಧಿಕ ಮಳೆಯ ಸಾಧ್ಯತೆಯಿರುವುದರಿಂದ ಪೊಲೀಸ್ ಇಲಾಖೆ ಮತ್ತು ಆಯಾ ಪ್ರದೇಶಕ್ಕೆ ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ತಕ್ಷಣಕ್ಕೆ ಸ್ಥಳಕ್ಕೆ ತೆರಳಿ, ಸಮಸ್ಯೆಯ ಕುರಿತು ಚರ್ಚಿಸಿ, ವಸ್ತುಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಶನಿವಾರ ಪಟ್ಟಣದ ತಾ.ಪಂ ಸಭಾಭವನದಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಮಳೆಗಾಲದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವಿವಿಧ ಇಲಾಖೆ ಅಧಿಕಾರಿಗಳಿಗೆ ವಾಹನದ ಕೊರತೆ ಇರುವುದರ ಮಾಹಿತಿ ಪಡೆದು, ವ್ಯವಸ್ಥೆ ಕಲ್ಪಿಸುವ ಬಗ್ಗೆ ಹಾಗೂ ಎಲ್ಲ ಗ್ರಾಮ ಪಂಚಾಯತಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿ ಪ್ರಕೃತಿ ವಿಕೋಪ ಸಮಸ್ಯೆಗಳ ಕುರಿತಾಗಿ ಮುಂಜಾಗ್ರತಾ ಕ್ರಮ ವಹಿಸಲು ಎಚ್ಚರಿಕೆ ನೀಡಿದರು.
ಅನೇಕ ವರ್ಷಗಳಿಂದ ಪ್ರವಾಹ ಸಮಸ್ಯೆಯನ್ನು ಎದುರಿಸುತ್ತ ಬಂದಿದ್ದೇವೆ. ಹಿಂದಿನ ಮೂರು ವರ್ಷಗಳಲ್ಲಿ ಈ ಸಮಸ್ಯೆ ಮಿತಿ ಮೀರಿದೆ. ಶಿರಸಿ, ಸಿದ್ದಾಪುರ ಭಾಗಗಳಲ್ಲಿ ಜಾಸ್ತಿ ಮಳೆ ಬಂದರೆ ಅಘನಾಶಿನಿ ನದಿ ಉಕ್ಕಿ ಹರಿದು ಕೆಲವು ದಿನಗಳಿಂದ ಮಳೆ ಜಾಸ್ತಿ ಇರುವ ಕಾರಣ, ಜುಲೈ ೧೯ ರ ವರೆಗೂ ಅತಿಯಾಗಿ ಬೀಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರಿಂದ, ಪೊಲೀಸ್ ಅಧಿಕಾರಿಗಳ ಜೊತೆ ಇತರೆ ಅಧಿಕಾರಿಗಳು ಕೂಡ ತೀವ್ರ ನಿಗಾ ಇಡಬೇಕು ಎಂದರು.
ನೂತನವಾಗಿ ಆಡಳಿತ ವಹಿಸಿಕೊಂಡ ಉಪವಿಭಾಗಾಧಿಕಾರಿ ರಾಹುಲ ರತ್ಮಮ್ ಪಾಂಡೆ, ತಹಸೀಲ್ದಾರ ಆರ್.ವಿ.ಕಟ್ಟಿ, ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ಜಿ.ಪಂ ಸಹಾಯ ಅಭಿಯಂತರ ಆರ್.ಜಿ.ಗುನಗಿ, ಆಡಳಿತಾಧಿಕಾರಿ ಈಶ್ವರ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ವಲಯಾರಣ್ಯಾಧಿಕಾರಿ ಪ್ರವೀಣಕುಮಾರ ನಾಯಕ, ಕರಾವಳಿ ಕಾವಲು ಪಡೆಯ ಸಿ.ಪಿ.ಐ ಮಾರುತಿ ನಾಯಕ, ಪಿ.ಎಸ್.ಐ ಆನಂದಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.

error: