December 22, 2024

Bhavana Tv

Its Your Channel

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸುತ್ತಿರುವ ಪರೀಕ್ಷೆಯಿಂದಾಗುವ ಸಮಸ್ಯೆಯ ಕುರಿತು ಶಾಸಕರಿಗೆ ಮತ್ತು ತಹಸೀಲ್ದಾರರಿಗೆ ಮನವಿ

ಕುಮಟಾ :ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸುತ್ತಿರುವ ಪರೀಕ್ಷೆಯಿಂದಾಗುವ ಸಮಸ್ಯೆಯ ಕುರಿತು ಮಾನ್ಯ ಶಾಸಕರಿಗೆ ಮತ್ತು ತಹಶೀಲ್ದಾರ್ ಅವರಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಮಟಾ ವಿದ್ಯಾರ್ಥಿಗಳಿಂದ ಮನವಿ ಸಲ್ಲಿಸಲಾಯಿತು

ಕೆಲವು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿತ್ತು . ಇದರಿಂದ ಎಚ್ಚೆತ್ತ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಬಹುಆಯ್ಕೆ ಪರೀಕ್ಷೆಗೆ ಬೇಕಾಗುವಂತೆ ತಯಾರಿಯನ್ನು ನಡೆಸಿದರು . ಆದರೆ ಈಗ ಏಕಾಏಕಿ ೨೧ ಜುಲೈ ನಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ ಎಲ್ಲಾ ಪರೀಕ್ಷೆಗಳನ್ನು ಬಹುಆಯ್ಕೆ ಪರೀಕ್ಷೆಯ ಬದಲಾಗಿ ಲಿಖಿತ ವಿವರಣಾತ್ಮಕ ಪರೀಕ್ಷೆ ನಡೆಸುವುದಾಗಿ ಸೂಚಿಸಿದೆ ಮತ್ತು ೨೬ ಜುಲೈನಿಂದ ೭ ಆಗಸ್ಟ್ ಒಳಗೆ ಕೇವಲ ೨ ವಾರದೊಳಗಾಗಿ ಎಲ್ಲಾ ಆಂತರಿಕ ಪರೀಕ್ಷೆಗಳು , ಪ್ರಾಯೋಗಿಕ ಪರೀಕ್ಷೆಗಳನ್ನು ಮಹಾ ವಿದ್ಯಾಲಯದ ಮಟ್ಟದಲ್ಲಿ ಮಾಡಲು ಸೂಚಿಸಿತು . ೧೬ ಅಗಸ್ಟ್ ನಿಂದ ೩೧ ಅಗಸ್ಟ್ ರ ವರೆಗೆ ಬೆಸ ೧,೩,೫ ಸೆಮಿಸ್ಟರ್ ಪರೀಕ್ಷೆಗಳು , ಸಮ ೨,೪,೬ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದಾಗಿ ಸೂಚಿಸಿದೆ . ಈ ರೀತಿಯಾಗಿ ಪ್ರತಿಬಾರಿಯೂ ಬೇರೆ ಬೇರೆ ರೀತಿಯಲ್ಲಿ ಅಧಿಸೂಚನೆಯನ್ನು ಹೊರಡಿಸುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಗೊಂದಲ ಸೃಷ್ಟಿಯಾಗುತ್ತಿದ್ದು , ಏಕಾಏಕಿ ಪರೀಕ್ಷೆಗಳ ಮಾದರಿಯನ್ನು ಬದಲಾಯಿಸಿ ಪರೀಕ್ಷೆಗಳನ್ನು ನಡೆಸುತ್ತಿರು ವುದು ವಿದ್ಯಾರ್ಥಿಗಳಿಗೆ ತಯಾರಿ ನಡೆಸುವುದು ಕಷ್ಟಕರವಾಗಿದೆ . ಈಗಾಗಲೇ ಯುಜಿಸಿ ಸೂಚಿಸಿದಂತೆ ಬೆಸ ಸೆಮಿಸ್ಟರ್ ಅನ್ನು ಆಂತರಿಕ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಬಡ್ತಿಗೊಳಿಸಿ , ೬ ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಬಹುಆಯ್ಕೆ ಮಾದರಿಯಲ್ಲಿ ಮಾಡುವುದು ವಿದ್ಯಾರ್ಥಿಗಳ ಒತ್ತಾಯವಾಗಿದೆ

ಈ ಸಂದರ್ಭದಲ್ಲಿ ಗಣೇಶ್ ನಾಯ್ಕಸಚಿನ್ ಮಡಿವಾಳ,ಸಂಕೇತ್ ನಾಯ್ಕ್,ವಿನಾಯಕ ಅವದಾನಿ,ಆದಿತ್ಯ ನಾಯ್ಕಗಜೇಂದ್ರ ಗುನಗಾ,ದಿನೇಶ್ ಅಂಬಿಗ,ಲAಬೋದರ ನಾಯ್ಕ್,ವಿನಾಯಕ ಗಿರಿಯನ್,ರಿತೇಶ್ ನಾಯ್ಕ

ವರದಿ: ನಟರಾಜ ಗದ್ದೆಮನೆ ಕುಮಟಾ

error: