December 22, 2024

Bhavana Tv

Its Your Channel

ಕುಮಟಾ ಪಟ್ಟಣದ ಪುರಸಭವನದಲ್ಲಿ ಗಣೇಶೋತ್ಸವ ಆಚರಣಾ ಸಭೆ

ವರದಿ: ನಟರಾಜ ಗದ್ದೆಮನೆ ಕುಮಟಾ

ಕುಮಟಾ ಪಟ್ಟಣದ ಪುರಸಭವನದಲ್ಲಿ ಗಣೇಶೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆಯು ಸಹಾಯಕ ಆಯುಕ್ತ ರಾಹುಲ ಪಾಂಡೆ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಿ.ಪಿ.ಐ ಶಿವಪ್ರಕಾಶ ನಾಯ್ಕ ಈ ವರೆಗೆ ಸರ್ಕಾರ ನೀಡಿದ ಮಾರ್ಗಸೂಚನೆಯಲ್ಲಿ ಎಷ್ಟು ದಿನ ಎನ್ನುವ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲಾ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈ ವರೆಗೆ ಬಂದ ಗೈಡ್ ಲೈನ್ ಗಳ ಪ್ರಕಾರ ವಿಧಿಸದ ನಿಬಂಧನೆಗಳನ್ನು ಪಾಲಿಸಿ ಎಂದರು. ತಾಲೂಕಾಡಳಿತದ ಮಾರ್ಗದರ್ಶನದಲ್ಲಿ ಪೋಲಿಸ್ ಇಲಾಖೆಯ ವತಿಯಿಂದ ತಾಲೂಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪೆಂಡಲ/ಶ್ಯಾಮಿಯಾನ ಹಾಕಿ ರಸ್ತೆ ಪಕ್ಕದಲ್ಲಿ ಆಚರಣೆ ಮಾಡಿಕೊಂಡು ಬಂದಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿಯನ್ನು ಸಹಾಯಕ ಆಯುಕ್ತರಿಗೆ ನೀಡಲಿದ್ದೇವೆ. ಇದಕ್ಕೆ ಸಮಿತಿ ಅವರು ಸಹಕರಿಸಬೇಕೆಂದು ಸೂಚಿಸಿದರು.

ತಹಸೀಲ್ದಾರ ವಿವೇಕ ಶೇಣ್ವಿ ಮಾತನಾಡಿ, ಕಳೆದ ೨ ವರ್ಷಗಳಿಂದ ಕೊವಿಡ್ ನಿಯಮಾವಳಿಗಳಲ್ಲಿ ಪ್ರತಿಯೊಂದು ಹಬ್ಬ ಹರಿದಿನಗಳನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಕಳೆದ ವರ್ಷ ೨ ದಿನ ಮಾತ್ರ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅವಕಾಶ ನೀಡಿತ್ತು. ಆದರೆ ಈ ವರ್ಷ ಅವಕಾಶ ನೀಡಿಲ್ಲ. ಸದ್ಯದ ಮಟ್ಟಿಗೆ ಇದೇ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಗಣೇಶೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಶೈಲೇಶ ನಾಯ್ಕ ಮಾತನಾಡಿ ಮಾರ್ಕೆಟ್ ಗಳಲ್ಲಿ ಜನ ಮಾಸ್ಕ್, ಸ್ಯಾನಿಟೈಜರ್ ಇಲ್ಲದೇ ಗುಂಪು ಗುಂಪಾಗಿ ಓಡಾಡುತ್ತಿದ್ದಾರೆ ಗಣೇಶೋತ್ಸವಕ್ಕೆ ಸೇರುವ ೧೦೦ ಜನರಿಂದ ಮಾತ್ರ ಕೋವಿಡ್ ಹರಡುತ್ತದೆಯೇ ಎಂದು ಪ್ರಶ್ನಿಸಿದರು ಹಬ್ಬಕ್ಕೆ ಬೇಕಾದ ತಯಾರಿಗಳಾದ ಗಣೇಶ ಮೂರ್ತಿ ತಯಾರಿಕೆ, ಉತ್ಸವದ ಆಮಂತ್ರಣ ಪತ್ರಿಕೆ ಮುದ್ರಣ, ಶ್ಯಾಮಿಯಾನ ನಿರ್ಮಾಣಕ್ಕೆ ವ್ಯವಸ್ಥೆಗೆ ಸಕಲ ಸಿದ್ದತೆಯಲ್ಲಿರುವ ವೇಳೆ ಸಭೆ ಕರೆದು ಸರಕಾರದ ಮಾರ್ಗಸೂಚಿಯನ್ನು ಈಗ ವಿವರಿಸಿದರೆ ಈಗಾಗಲೇ ಮಾಡಿದ ತಯಾರಿಗೆ ಸಮಿತಿ ಅವರು ಏನು ಮಾಡಬೇಕು. ಸರಕಾರಕ್ಕೆ ಸಮಿತಿ ಅವರು ಸಹಕರಿಸಲಿದ್ದೇವೆ ಅದರಂತೆ ಸಮಿತಿಗೆ ಸರಕಾರ ಸಹಕರಿಸಿ ಹಬ್ಬದ ಆಚರಣೆಗೆ ಅವಕಾಶ ನೀಡಬೇಕೆಂದು ಬೇಡಿಕೆಯಿಟ್ಟರು.

ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ, ಅಳಕೋಡ ಗ್ರಾ.ಪಂ ಉಪಾಧ್ಯಕ್ಷ ಮಹೇಶ ದೇಶಭಂಡಾರಿ ಸೇರಿದಂತೆ ಮತ್ತಿತರರು ಇದ್ದರು.

error: