December 22, 2024

Bhavana Tv

Its Your Channel

ಡಿ.ಜಿ.ಶಾಸ್ತ್ರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಕುಮಟಾ ಪಟ್ಟಣದ ಗಿಬ್ ಬಾಲಕರ ಪ್ರೌಢಶಾಲೆಯ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ೩೭ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಿ.ಜಿ.ಶಾಸ್ತ್ರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡದಿದ್ದಾರೆ

ಮೂಲಕ ಕುಮಟಾ ತಾಲೂಕಿನ ಉಂಚಗಿಯ ದಿ.ಗೋಪಾಲವಿಷ್ಣು ಶಾಸ್ತ್ರಿ ಹಾಗೂ ದಿ.ನಾಗವೇಣಿ ದಂಪತಿಯ ೬ ನೆ ಪುತ್ರನಾಗಿ ಜನಿಸಿದ ಇವರು, ಉಂಚಗಿಯಲ್ಲಿ ಪ್ರಾಥಮಿಕ, ಗಿಬ್ ಶಾಲೆಯಲ್ಲಿ ಪ್ರೌಢ ಹಾಗೂ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಪಡೆದು ಗಿಬ್ ಬಾಲಕರ ಪ್ರೌಢಶಾಲೆಗೆ ಶಿಕ್ಷಕರಾಗಿ ನೇಮಕೊಂಡಿದರು. ನಂತರ ಕಳೆದ ೫ ವರ್ಷಗಳಿಂದ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಶಿಕ್ಷಣ ಚಟುವಟಿಕೆ, ಸಾಧನೆಯನ್ನು ಪರಿಗಣಿಸಿದ ಶಿಕ್ಷಣ ಇಲಾಖೆ ಹಾಗೂ ಆಯ್ಕೆ ಸಮಿತಿಯು ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸೆ.೫ ರಂದು ಕಾರವಾರದ ಹಿಂದೂ ಹೈಸ್ಕೂಲ್‌ನಲ್ಲಿ ಪ್ರಶಸ್ತಿ ಪ್ರಧಾನ ನಡೆಯಿತ್ತು

ಈ ಕುರಿತು ಅನುಭವ ಹಂಚಿಕೊAಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಡಿ.ಜಿ.ಶಾಸ್ತ್ರಿ, ೮-೮-೧೯೮೪ ರಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡು ಸುಧೀರ್ಘ ೩೭ ವರ್ಷದ ಶಿಕ್ಷಕ ವೃತ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ನನ್ನ ಸೇವೆಯನ್ನು ಪರಿಗಣಿಸಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ಸಂತದ ವಿಷಯ ಎಂದ ಅವರು, ಉಪ ನಿರ್ದೇಶಕರು, ಉಪನಿರ್ದೇಶಕರು ಅಭಿವೃದ್ಧಿ, ಉಪನಿರ್ದೇಶಕರು ಆಡಳಿತ ಈ ಎಲ್ಲ ಅಧಿಕಾರಿಗಳಿಗೆ, ಸಂಘದ ಪದಾಧಿಕಾರಿಗಳಿಗೆ ಹಾಗೂ ಆಯ್ಕೆ ಸಮಿತಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಶಸ್ತಿಯಿಂದ ನನ್ನ ಮೇಲಿನ ಜವಾಬ್ದಾರಿ ಹೆಚ್ಚಾಗಿದ್ದು, ನನ್ನ ವೃತ್ತಿಯಲ್ಲಿ ಮತ್ತಷ್ಟು ಸಾಧನೆ ಮಾಡಲು ಶ್ರಮಿಸುತ್ತೇನೆ ಎಂದರು.

ವರದಿ: ನಟರಾಜ ಗದ್ದೆಮನೆ ಕುಮಟಾ

error: