ವರದಿ ; ನಟರಾಜ ಗದ್ದೆಮನೆ, ಕುಮಟಾ
ಕುಮಟಾ: ಗೌರಿ-ಗಣೇಶ ಹಬ್ಬದಲ್ಲಿ ಎಲ್ಲಿಲ್ಲದ ಸಡಗರ ಮನೆ ಮಾಡುತ್ತದೆ. ಒಂದು ವಾರದ ಮೊದಲೇ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಗಣೇಶ ಮೂರ್ತಿಯ ಜೊತೆಗೆ ಗೌರಿ, ಶಿವ, ಕಾರ್ತಿಕೇಯನ ಜೊತೆಗೆ ಮೂಷಿಕನ ಮೂರ್ತಿಯನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ.
ಅದೇ ರೀತಿ ಕುಮಟಾ ತಾಲೂಕಿನ ಬಾಡದ ಕಳಸದ ಮನೆಯ ಕೃಷ್ಣ ಮಂಜುನಾಥ ಆಚಾರಿ ಅವರ ಮನೆಯಲ್ಲಿ ಪೂಜಿಸಲಾಗುವ ಗಣಪನ ಅಕ್ಕಪಕ್ಕದಲ್ಲಿ ಶ್ರೀ ವಿಷ್ಣುವಿನ ದ್ವಾರಪಾಲಕರಾದ ಜಯ, ವಿಜಯರ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಈ ಎರಡು ಮೂರ್ತಿಗಳು ಕಟ್ಟಿಗೆಯಿಂದ ಮಾಡಿದ ಕೆತ್ತನೆಯ ಕಲಾಕೃತಿಯಾಗಿದೆ. ಈ ಕಟ್ಟಿಗೆಯ ಕಲಾಕೃತಿಯು ಸುಮಾರು ನೂರಿನ್ನೂರು ವರ್ಷಗಳ ಹಳೇಯದಾಗಿದೆ. ಕೃಷ್ಣ ಆಚಾರಿಯವರ ಮುತ್ತಾತನ ಕಾಲದಿಂದಲೂ ಗಣೇಶ ಹಬ್ಬದಲ್ಲಿ ಗಣೇಶ ಮೂರ್ತಿಯ ಎಡ, ಬಲದಲ್ಲಿ ಜಯ-ವಿಜಯನ ಮೂರ್ತಿ ಸ್ಥಾಪಿಸಿ ಪೂಜಿಸಿಕೊಂಡು ಬರಲಾಗುತ್ತಿದೆ. ಗಣೇಶನ ವಿಸರ್ಜನೆಯ ಬಳಿಕ ಈ ಕಟ್ಟಿಗೆಯ ಮೂರ್ತಿಯನ್ನು ಸುರಕ್ಷಿತವಾಗಿ ಫ್ಯಾಕ್ ಮಾಡಿ ಇಡಲಾಗುತ್ತದೆ. ಮತ್ತೆ ಮುಂದಿನ ವರ್ಷದ ಗಣೇಶ ಹಬ್ಬದ ಸಂದರ್ಭದಲ್ಲಿಯೇ ಈ ಮೂತಿಗಳಿಗೆ ಪೇಂಟ್ ಮಾಡಿ, ಮತ್ತೆ ಪೂಜೆಗೆ ಇಡಲಾಗುತ್ತದೆ. ಆದರೆ ಈ ಜಯ, ವಿಜಯನ ಮೂರ್ತಿಗಳನ್ನು ಗಣೇಶ ಹಬ್ಬದಲ್ಲಿ ಸ್ಥಾಪಿಸಿ, ಪೂಜಿಸುವುದರ ಹಿಂದೆ ಏನಾದರೂ ಸಾಂಪ್ರದಾಯಿಕ ಕಾರಣವಿದೆಯೇ ಎಂದು ಕೃಷ್ಣ ಆಚಾರಿಯವರನ್ನು ಕೇಳಿದಾಗ, ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೂ ಗಣಪತಿ ಹಬ್ಬದಂದು ಪೂಜಿಸಲಾಗುತ್ತಿದೆ. ಆ ಸಂಪ್ರದಾಯವನ್ನು ಇಂದಿಗೂ ನಾವು ಪಾಲಿಸಿಕೊಂಡು ಬಂದಿದ್ದೇವೆ. ಈ ಸಂಪ್ರದಾಯಕ್ಕೆ ವಿಶೇಷ ಕಾರಣ ನನಗೆ ತಿಳಿದಿಲ್ಲ. ನಮ್ಮ ಹಿರಿಯರ ಸಂಪ್ರದಾಯಕ್ಕೆ ಗೌರವ ನೀಡುವ ಸದುದ್ದೇಶದಿಂದ ಮತ್ತು ನಮ್ಮ ಹಿರಿಯರ ನಂಬಿಕೆಯೇ ನಮಗೆ ಶ್ರೀರಕ್ಷೆಯಾಗಿದೆ ಎಂದು ತಮ್ಮ ತಂದೆ, ಅಜ್ಜನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.
ಸAಪ್ರದಾಯವನ್ನು ಮುಂದುವರಿಸಿಕೊAಡು ಹೋಗುತ್ತಿರುವ ಹಾಗೂ ಹಿರಿಯರಿಗೆ ಗೌರವ ನೀಡುತ್ತಿರುವ ಈ ಕುಟುಂಬ ಇನ್ನೊಬ್ಬರಿಗೆ ಮಾದರಿಯಾಗಲಿ ಎಂದು ನಮ್ಮ ವಾಹಿನಿಯ ಆಶಿಸುತ್ತದೆ.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ