December 22, 2024

Bhavana Tv

Its Your Channel

ನಾಳೆ ಕುಮಟಾದಲ್ಲಿ ಲಸಿಕಾ ಮಹಾಮೇಳ

ಕುಮಟಾ: ದಿನಾಂಕ17/9/2021ರಂದು ಲಸಿಕಾ ಮಹಾಮೇಳ ನಡೆಯಲಿದೆ ಎಂದು ಕುಮಟಾ ಪುರಸಭೆ ಮತ್ತು ಆರೋಗ್ಯ ಇಲಾಖೆಯ ಜಂಟಿ ಸಾರ್ವಜನಿಕ ಪ್ರಕಟಣೆ ನೀಡಿದೆ

ಘನ ಸರ್ಕಾರವು ದಿನಾಂಕ 17/9/2021 ರಂದು ಲಸಿಕಾ ಮಹಾಮೇಳವನ್ನು ಆಯೋಜಿಸುವಂತೆ ಸೂಚಿಸಿರುತ್ತದೆ. ಆದ್ದರಿಂದ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡುವ ಪ್ರಯತ್ನದಲ್ಲಿರುತ್ತಾರೆ. ಆದ್ದರಿಂದ ಇದುವರೆಗೂ ಲಸಿಕೆ ಪಡೆಯದೇ ಇರುವ ೧೮ ವರ್ಷ ಮೇಲ್ಪಟ್ಟವರು ಹಾಗೂ ಎರಡನೇ ಲಸಿಕೆ ಪಡೆಯಲು ಅವಧಿ ಪೂರೈಸಿರುವ ಎಲ್ಲರೂ ಲಸಿಕೆ ಪಡೆದುಕೊಳ್ಳಲು ಕಡ್ಡಾಯ ಗೊಳಿಸಲಾಗಿದೆ. ಈ ಪ್ರಯುಕ್ತ ಕುಮಟಾ ಪಟ್ಟಣದ ಚಿತ್ರಗಿ ಹಿರಿಯ ಪ್ರಾಥಮಿಕ ಶಾಲೆ., ಪುರಭವನ, ಹೆಗಡೆ ಸರ್ಕಲ್, ತಾಲೂಕು ಹಾಸ್ಪಿಟಲ್, ವಾಳಖೆ ಸಭಾಭವನ, ಹೊನ್ಮಾವ್‌ದಲ್ಲಿ ಬೆಳಿಗ್ಗೆ ೯-೩೦ ಗಂಟೆಯಿoದ ಮದ್ಯಾಹ್ನ ೪ ಗಂಟೆವರೆಗೆ ಲಸಿಕೆ ಪಡೆದು ಕೊಳ್ಳುವಂತೆ ವಿನಂತಿಸಲಾಗಿದೆ ಎಂದು ಸುರೇಶ ಎಮ್ ಕೆ ಮುಖ್ಯಧಿಕಾರಿ ಪುರಸಭೆ ಕುಮಟಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: