ಕುಮಟಾ :ಕೂಜಳ್ಳಿಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಅಭಿವೃದ್ಧಿಗೆ ಗುಂಪೋAದು ಅಡ್ಡಿಪಡಿಸುತ್ತಿದೆ. ಅವರ ಈ ಕ್ರಮವನ್ನು ಶ್ರೀ ವೆಂಕಟೇಶ್ವರ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಖಂಡಿಸುತ್ತದೆ ಎಂದು ಸಂಘದ ಉಪಾಧ್ಯಕ್ಷ ಸುಬ್ಬಯ್ಯ ನಾಯ್ಕ ಹೇಳಿದರು.
ಪಟ್ಟಣದ ಖಾಸಗಿ ಹೊಟೇಲ್ ಒಂದರಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ಥಳೀಯರಾದ ಶೇಖರ ನಾಯ್ಕ ಕಿಳ್ನರೆ, ಮಂಜುನಾಥ ನಾಯ್ಕ ಹಾಗೂ ಬೆಂಬಲಿಗರು ದೇವಾಲಯದ ರಚನಾತ್ಮಕ ಕೆಲಸಗಳಿಗೆ ಅಡ್ಢಿಪಡಿಸುತ್ತಿದ್ದಾರೆ. ದೇವಾಲಯದ ಹಿಂದಿನ ಕಾರ್ಯದರ್ಶಿಗಳಾದ ಶೇಖರ ನಾಯ್ಕ ದೇವಾಲಯದ ಕಾಗದ ಪತ್ರ ಹಾಗೂ ಆಭರಣಗಳನ್ನು ಹಸ್ತಾಂತರಿಸದೇ ರಾಜಿನಾಮೆ ನಾಟಕವಾಡುತ್ತಿದ್ದಾರೆ. ದೇವಾಲಯದ ಆಡಳಿತ ಮಂಡಳಿಯ ಅನುಮತಿ ಇಲ್ಲದೇ ಒಂದು ಬಣದವರು ಯಾಗ ಶಾಲೆ ನಿರ್ಮಾಣ ಮಾಡಿದ್ದಾರೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಎಸ್.ವಿ.ಭಟ್ ಸೇರಿದಂತೆ ಇನ್ನಿತರರು ಶಾಸಕರಿಗೆ ಮನವಿ ಮಾಡಿದ್ದಾರೆಂದು ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದೆ. ಸಾರ್ವಜನಿಕರಲ್ಲಿ ಹಾಗೂ ಭಕ್ತರಲ್ಲಿ ತಪ್ಪು ಅಭಿಪ್ರಾಯವನ್ನು ಉಂಟು ಮಾಡುವ ಈ ಕ್ರಮವನ್ನು ಶ್ರೀ ವೆಂಕಟೇಶ್ವರ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘವು ಖಂಡಿಸುತ್ತದೆ “ಎಂದರು.
ಆಡಳಿತ ಕಮಿಟಿಯ ಕಾರ್ಯದರ್ಶಿಗಳಾದ ಶೇಖರ ನಾಯ್ಕ ಕೀಳ್ನರೆ ಮಾತನಾಡಿ,” ಆಡಳಿತ ಮಂಡಳಿ ಸಮಿತಿಯ ಒಂದು ಬಣದವರು ಯಾವುದೇ ಸಭೆಯಲ್ಲಿ ಪ್ರಸ್ಥಾಪಿಸದೇ ಏಕಾಏಕಿ ಯಾಗ ಶಾಲೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಯಾಗ ಶಾಲೆಯ ನಿರ್ಮಾಣಕ್ಕೆ ದಿನಾಂಕ ೫-೫-೨೦೧೯ ರಂದು ದೇವಸ್ಥಾನದ ಅಧ್ಯಕ್ಷರಾದ ಎಸ್.ವಿ.ಭಟ್ ಅವರು ಠರಾವಿನ ಮೂಲಕ ಅನುಮತಿ ನೀಡಿದ್ದು, ಅದಕ್ಕೆ ಅಧ್ಯಕ್ಷರ ಮತ್ತು ಉಳಿದ ಸದಸ್ಯರ ಸಹಿ ಇದೆ. ಅದರ ಕುರಿತಾದ ಪ್ರತಿಯನ್ನೂ ಪತ್ರಿಕೆಗೆ ಒದಗಿಸಲಾಗಿದೆ. ಅಲ್ಲದೆ ಯಾಗಶಾಲೆಯ ಅಡಿಗಲ್ಲು ಸಮಾರಂಭವು ಶಾಸ್ತ್ರೋಕ್ತವಾಗಿ ೨೨-೨-೨೦೯ ರಂದು ವೇದಮೂರ್ತಿಗಳ ಪೌರೋಹಿತ್ಯದ ಮೂಲಕ ನಡೆದಿದ್ದು ಸಮಾರಂಭದ ವಿಧಿವಿಧಾನಗಳನ್ನು ಎಸ್.ವಿ.ಭಟ್ ರವರು ದಂಪತಿ ಸಮೇತ ನಡೆಸಿಕೊಟ್ಟಿದ್ದಾರೆ.
ಯಾಗಶಾಲೆಯ ನಿರ್ಮಾಣದ ಹಣವನ್ನು ಶ್ರೀ ವೆಂಕಟೇಶ್ವರ ನಾಮಧಾರಿ ಕ್ಷೇಮಾಭಿವೃದ್ಧಿ ಹೆಸರಿನಲ್ಲಿ ಸಂಗ್ರಹಿಸಿ ಕಟ್ಟಲಾಗಿದೆಯೇ ಹೊರತು ಆಡಳಿತ ಮಂಡಳಿಯ ಹಣದಿಂದಲ್ಲ. ಯಾಗಶಾಲೆಯ ನಿರ್ಮಾಣದ ಕೊನೆಯ ಹಂತದಲ್ಲಿ ಆಡಳಿತ ಮಂಡಳಿಯ ಕೆಲ ಸದಸ್ಯರ ಕುತಂತ್ರದಿAದ, ಆಡಳಿತ ಮಂಡಳಿಯ ದ್ವಂದ್ವತೆಯ ಕಾರಣದಿಂದ ಗೊಂದಲ ಉಂಟಾಗಿದೆಯೇ ಹೊರತು ಮೇಲೆ ಹೆಸರಿಸಿದ ವ್ಯಕ್ತಿಗಳಿಂದ ಅಲ್ಲ ಎಂದು ಈ ಮೂಲಕ ಭಕ್ತರಿಗೆ ಸ್ಪಷ್ಟೀಕರಿಸುತ್ತೇವೆ. ಇಂತಹ ಕುತಂತ್ರಕ್ಕೆ ಬೇಸತ್ತು ನಿಯಮಾವಳಿಯ ಪ್ರಕಾರ ನನ್ನ ಸುಪರ್ದಿಯಲ್ಲಿ ಇದ್ದಂತಹ ಲೆಕ್ಕ ಪತ್ರಗಳು ಹಾಗೂ ಒಡವೆಗಳು ಇತ್ಯಾದಿಗಳನ್ನು ಹಸ್ತಾಂತರಿಸಲು ಬದ್ದರಿದ್ದೇನೆ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿದ್ದು ಶ್ರೀ ವೆಂಕಟೇಶ್ವರ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘವು ಪ್ರಾಮಾಣಿಕವಾಗಿ ದೇವರ ಸೇವೆಯಲ್ಲಿ ಪಾಲ್ಗೊಂಡಿದೆ. ಅಲ್ಲದೇ ಈಗಾಗಲೇ ಈ ಎಲ್ಲಾ ವಿಷಯಗಳನ್ನು ಶಾಸಕರ ಗಮನಕ್ಕೂ ತರಲಾಗಿದೆ” ಎಂದು ಸ್ಪಷ್ಟೀಕರಿಸಿದರು.
ಈ ಸಂಧರ್ಭದಲ್ಲಿ ಜನಾರ್ಧನ ಗೋಪಾಲ ನಾಯ್ಕ, ಮಂಜುನಾಥ ನಾಯ್ಕ, ಲಕ್ಮೀಶ ನಾಯ್ಕ, ಕಮಲಾಕರ ನಾಯ್ಕ, ಕರುಣಾಕರ ನಾಯ್ಕ, ಅನಿಲ್ ನಾಯ್ಕ, ರಾಜು ನಾಂಯ್ಕ ಸೇರಿದಂತೆ ಇತರರು ಇದ್ದರು.
ವರದಿ: ನಟರಾಜ ಗದ್ದೆಮನೆ ಕುಮಟಾ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ