ಕುಮಟಾ ತಾಲೂಕಿನ ಮೂರೂರು ವಲಯದ ದಿವಗಿ ಗ್ರಾಮದ ಸ್ವ-ಸಹಾಯ ಸಂಘದ ಸದಸ್ಯೆ ಸಾವಿತ್ರಿ ಅಂಬಿಗ ಎಂಬಾಕೆ ಅನಾರೋಗ್ಯದಿಂದ ಬಳಲುತ್ತಿರುವದನ್ನು ಗಮನಿಸಿದ ಸ್ಥಳೀಯರು ಹಾಗೂ ವಿವಿಧ ಸಂಘಟನೆಯ ಸದಸ್ಯರುಗಳು ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
ಈಕೆಯ ಗಂಭೀರ ಅನಾರೋಗ್ಯ ಸ್ಥಿತಿಯನ್ನು ಕಂಡ ಸ್ಥಳೀಯರು ಇಲ್ಲಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಪುರುಷ ಸ್ವ ಸಹಾಯ ಸಂಘದ ಸದಸ್ಯರುಗಳ ಹಾಗೂ ಬಿಜೆಪಿ ತಾಲೂಕು ಆಧ್ಯಕ್ಷರಾದ ಹೇಮಂತ್ ಕುಮಾರ ಗಾಂವಕರ್‌ರವರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದ ಹೇಂಮತ ಗಾಂವಕರ ಕೂಡಲೇ ಆಂಬ್ಯುಲೆನ್ಸ್ ವ್ಯವಸ್ತೆ ಮಾಡಿಸಿದ್ದಾರೆ. ನಂತರ ದಿವಗಿಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ನಾಗರಾಜ ಅಂಬಿಗ , ಪ್ರವೀಣ ಅಂಬಿಗ , ನವೀನ್ ಅಂಬಿಗ ಇವರು ಮತ್ತು ಸೇವಾ ಪ್ರತಿನಿಧಿಗಳಾದ ಮಂಗಲ , ಸುನಿತಾ ಸೇರಿ ಅನಾರೋಗ್ಯ ಪೀಡಿತ ಸಾವಿತ್ರಿಯವರನ್ನು ಮನೆಯಿಂದ ಕರೆತಂದು ಆಂಬ್ಯುಲೆನ್ಸ್ ನಲ್ಲಿ ಕೂಳ್ಳರಿಸಿ ಕಾರವಾರದ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದಲ್ಲದೆ ಸಾವಿತ್ರಿ ಯವರಿಗೆ ದಿವಗಿ ಶೌರ್ಯಾ ವಿಪತ್ತು ಘಟಕದ ಸದಸ್ಯರುಗಳು , ದಿವಗಿ ಮತ್ತು ಅಂತ್ರವಳ್ಳಿ ಸೇವಾಪ್ರತಿನಿಧಿಗಳು , ದಿವಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗವೇಣಿ ಅಂಬಿಗ, ದಿವಗಿ ಗ್ರಾಮ ಪಂಚಾಯತ್ ಸದಸ್ಯರಾದ ಮಂಗಲಾ ಭಟ್ಟ ಮತ್ತು ಸಮಾಜ ಬಾಂಧವರು ಈ ವೇಳೆ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ