May 17, 2024

Bhavana Tv

Its Your Channel

ಯಾಣಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ

ಕುಮಟಾ: ಐತಿಹಾಸಿಕ ಕ್ಷೇತ್ರವಾದ ಕುಮಟಾದ ಪ್ರಸಿದ್ಧ ಯಾಣಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬAಧಿಸಿದAತೆ ಸ್ಥಳೀಯರೊಂದಿಗೆ ಚರ್ಚಿಸಿದರು.

ಪೌರಾಣಿಕ ಹಿನ್ನೆಲೆಯಿರುವ ಶ್ರೀ ಭೈರವೇಶ್ವರ ಪುಣ್ಯ ಕ್ಷೇತ್ರವಾದ ಯಾಣ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಮಳೆ ಮತ್ತು ಕೊರೋನಾ ಆರ್ಭಟದಿಂದ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಗಾಳಿ-ಮಳೆಯಿಂದ ಗುಡ್ಡ ಕೆಲ ಭಾಗಗಳು ಕುಸಿದುಬಿದ್ದು, ದುರ್ವ್ಯೆವಸ್ಥೆ ಉಂಟಾಗಿ, ಪ್ರವಾಸಿಗರ ಆಗಮನಕ್ಕೂ ತೊಂದರೆಯಾಗಿದೆ. ಈ ಬಗ್ಗೆ ಶಾಸಕರ ಗಮನ ಸೆಳೆದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗಜಾನನ ಪೈ ಅವರು ಈ ಪುಣ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಮನವಿ ಮಾಡಿದ್ದರು. ಆ ಸಂಬAಧ ಶಾಸಕ ದಿನಕರ ಶೆಟ್ಟಿ ಅವರು ಯಾಣಕ್ಕೆ ಭೇಟಿ ನೀಡಿ, ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕ್ಷೇತ್ರದಲ್ಲಾಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಲ್ಲಿನ ಸ್ಥಳೀಯರೊಂದಿಗೆ ಚರ್ಚಿಸಿದರು. ಭೈರವೇಶ್ವರ ಶಿಖರದ ಕೆಳಗಿನ ಮೆಟ್ಟಿಲುಗಳನ್ನು ಸರಿಪಡಿಸಲು ೧೦ ಲಕ್ಷ ರು. ಅನುದಾನ ಒದಗಿಸಿರುವ ಶಾಸಕರ ಬಗ್ಗೆ ಮಾಜಿ ಜಿ.ಪಂ ಸದಸ್ಯ ಗಜಾನನ ಪೈ ಸಂತಸ ವ್ಯಕ್ತಪಡಿಸಿದರು. ರಸ್ತೆ ನಡುವೆ ಇರುವ ಮರದ ದಿಮ್ಮಿಗಳನ್ನು ತೆರವು ಮಾಡಲು ಅರಣ್ಯ ಇಲಾಖೆಯವರಿಗೆ ಸೂಚಿಸಿದ ದಿನಕರ ಶೆಟ್ಟಿ ಸಂಚಾರ ಸುಗಮವಾಗಲು ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿ ಎಂದು ಸೂಚಿಸಿದರು. ಯಾಣದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಆದರೆ ಪ್ರಸಕ್ತ ವರ್ಷ ತೀವ್ರ ಮಳೆಯಿಂದಾಗಿ ಬಹಳಷ್ಟು ಹಾನಿಯಾಗಿದ್ದು ಈಗ ತುರ್ತು ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ ೨೦೦ ಕೋಟಿ ಅನುದಾನದಲ್ಲಿ ೧೦ ಲಕ್ಷ ರು. ಅನುದಾನವನ್ನು ಇಲ್ಲಿನ ಅಭಿವೃದ್ಧಿಗೆ ನೀಡಿರುವುದು ಸಮಾಧಾನಕರ ವಿಚಾರ. ಗಜಾನನ ಪೈ ಅವರು ಪ್ರವಾಸಿಗರ ಸಮಸ್ಯೆಯನ್ನು ಅರಿತು ಕೆಲಸ ಪ್ರಾರಂಭಿಸಲು ಮುಂದಾಗಿರುವುದು ಎಲ್ಲರೂ ಹೆಮ್ಮೆ ಪಡಬೇಕಾದ ವಿಚಾರ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಜಿಪಂ ಮಾಜಿ ಸದಸ್ಯ ಗಜಾನನ ಪೈ ಮಾತನಾಡಿ, ಹಿಂದಿನ ಬಾರಿ ೫೦ಲಕ್ಷ ರು. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಸದ್ಯದಲ್ಲೇ ರೋಪ್ ವೇ ಕಾಮಗಾರಿಯು ಪ್ರಾರಂಭವಾಗುತ್ತದೆ. ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಸದಾ ಸ್ಪಂದಿಸುತ್ತಿದ್ದೇನೆ ಎಂದು ಸಭೆಯಲ್ಲಿ ತಿಳಿಸಿದರು. ಯಾವುದೇ ಕಾಮಗಾರಿ ಮಾಡುವಾಗಲೂ ಕಲ್ಲು, ಮರಳು ಮುಂತಾದ ವಸ್ತುಗಳನ್ನು ಸಾಗಿಸಲು ಬಹಳ ಕಷ್ಟವಾಗುತ್ತಿದೆ ಆದರೂ ಎಲ್ಲರ ಹಿತದೃಷ್ಟಿಯಿಂದ ಮುತುವರ್ಜಿ ವಹಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ,ಇಲಾಖೆಯವರು ಮತ್ತು ಊರ ನಾಗರಿಕರು ಇದ್ದರು.

error: