May 19, 2024

Bhavana Tv

Its Your Channel

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ- ಮಾ.೨೭ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ-೨೦೨೧ ಪ್ರದಾನ ಸಮಾರಂಭ

ಕುಮಟಾ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕುಮಟಾ ಪಟ್ಟಣದ ಮೂರೂಕಟ್ಟೆಯ ಮಹಾಲಸಾ ಕಲಾಕ್ಷೇತ್ರದಲ್ಲಿ ಮಾ.೨೭ರ ಮಧ್ಯಾಹ್ನ ೪ ಘಂಟೆಗೆ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ-೨೦೨೧ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಚಿದಾನಂದ ಭಂಡಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಘನ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ ಕುಮಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗೌರವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪುಸ್ತಕ ಬಹುಮಾನ ಪ್ರದಾನ ಮಾಡಲಿದ್ದಾರೆ. ಅಕಾಡೆಮಿ ಪ್ರಕಟಣೆಗಳನ್ನು ಶಾಸಕ ದಿನಕರ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಕೆ.ಜಗದೀಶ ಪೈ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕೊoಕಣಿ ಪರಿಷತ್ ತಾಲೂಕಾಧ್ಯಕ್ಷ ಅರುಣ ಉಭಕರ ಮಾತನಾಡಿ, ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯವರಾದ ನಾಗೇಶ ಅಣ್ವೇಕರ, ಕಲೆಯಲ್ಲಿ ದಿನೇಶ ಪ್ರಭು ಕಲ್ಲೊಟ್ಟೆ, ಜಾನಪದದಲ್ಲಿ ಮಾಧವ ಖಾರ್ವಿ ಅವರಿಗೆ ಗೌರವ ಪ್ರಶಸ್ತಿ-೨೦೨೧ ಪ್ರದಾನ ಮಾಡಲಾಗುವುದು. ಕೊಂಕಣಿ ಕವನದಲ್ಲಿ ಫಾ.ಜೋವಿನ್ ವಿಶ್ವಾಸ, ಸಣ್ಣ ಕಥೆ ರಚನಾಕಾರ ಗೋಪಾಲಕೃಷ್ಣ ಪೈ, ಕೊಂಕಣಿ ಲೇಖನದಲ್ಲಿ ಎಚ್.ಎಂ.ಪೆರ್ನಾಲ್ ಇವರಿಗೆ ಪುಸ್ತಕ ಬಹುಮಾನ-೨೦೨೧ ಪ್ರದಾನ ಮಾಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ವಸಂತ ಬಾಂದೇಕರ, ಗುಡಿಗಾರ ಸಮಾಜದ ಮುಖಂಡ ಅರುಣ ಶೇಟ್ ಇದ್ದರು.

error: