May 5, 2024

Bhavana Tv

Its Your Channel

ಸಾಧಕ ವಿದ್ಯಾರ್ಥಿಗಳಿಗೆ ಸಾಹಿತ್ಯ ಪರಿಷತ್ತಿನಿಂದ ಅಭಿನಂದನಾ ಕಾರ್ಯಕ್ರಮ

ಕುಮಟಾ: ಪ್ರತಿಭೆ ಎಂಬುದು ಸಾಧಕರ ಸ್ವತ್ತೆ ಹೊರತು ಸೋಮಾರಿಗಳ ಸ್ವತ್ತಲ್ಲ. ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರತಿಭೆಗಳೆಲ್ಲಾ ಕುಮಟಾದಲ್ಲಿ ಇರುವುದು ಹೆಮ್ಮೆಯ ಸಂಗತಿಯೆAದು ಉಪನಿರ್ದೇಶಕರಾದ ಈಶ್ವರ ಎಚ್. ನಾಯ್ಕ ಹೇಳಿದರು.

ಇತ್ತೀಚಿನ ಕುಮಟಾದ ಗಿಬ್ ಹೈಸ್ಕೂಲ್ ಸಭಾಭವನದಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡಕ್ಕೆ ನೂರಕ್ಕೆ ನೂರರಷ್ಟು ಅಂಕಪಡೆದ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಭೆಗಳನ್ನು ಗುರುತಿಸಿ ಗೌರವಿಸಬೇಕಾದ ಕಾರ್ಯ ಶಿಕ್ಷಣ ಇಲಾಖೆ ಮಾಡಬೇಕಾಗಿತ್ತು. ಆದರೆ ಇಲಾಖೆ ಮಾಡಬೇಕಾದ ಕಾರ್ಯವನ್ನು ಸಾಹಿತ್ಯ ಪರಿಷತ್ತು ಮಾಡಿರುವುದು ಶ್ಲಾಘನೀಯ ಕಾರ್ಯ. ಇಲಾಖೆ ಪರವಾಗಿ ಪರಿಷತ್ತನ್ನು ಅಭಿನಂದಿಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿರುವುದು ಸಾಹಿತ್ಯ ಪರಿಷತ್ತಿನ ಒಂದು ಭಾಗವಾಗಿದೆ. ಎಲ್ಲಿ ಸಾಧಕರು ಇರುತ್ತಾರೊ,ಅಲ್ಲಿ ಸಾಹಿತ್ಯ ಪರಿಷತ್ತು ಇರುತ್ತದೆ. ಪ್ರತಿಭೆಗಳಲ್ಲಿ ತೊಂಬತ್ತೊAಬತ್ತು ಪಾಲು ಬೆವರು. ಒಂದು ಪಾಲು ಮಾತ್ರ ಸ್ಪೂರ್ತಿ. ಇಂದಿನ ಅಭಿನಂದನಾ ಕಾರ್ಯಕ್ರಮ ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಸ್ಫೂರ್ತಿ ನೀಡಲಿ ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆಯವರು ಆಶಯ ಮಾತುಗಳನ್ನಾಡಿ,ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಯೇ ಮಾನದಂಡವಲ್ಲ. ಮಾನವತೆಯ ವಿಕಾಸದ ಕಡೆಗೆ ನಿಮ್ಮ ಬದುಕನ್ನು ರೂಪಿಸಿಕೊಂಡು ಕನ್ನಡದ ಕಟ್ಟಾಳುಗಳಾಗಿ ಎಂದು ಶುಭ ಹಾರೈಸಿದರು.

ಅಭಿನಂದನಾ ಪತ್ರ ಪ್ರಧಾನ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅಭಿನಂದಿಸುವ ಕಾರ್ಯ ಅವರಲ್ಲಿ ಆತ್ಮ ಪ್ರೇರಣೆಗೆ ಸಾಕ್ಷಿಯಾಗಬಲ್ಲದು. ವಿದ್ಯಾರ್ಥಿ ಜೀವನದ ಮೊದಲ ಘಟ್ಟದಲ್ಲಿ ಯಶಸ್ವಿಯಾದ ನಿಮ್ಮ ಸಾಧನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ಮಾದರಿಯಾಗಿರಿ ಎಂದರು.

ವೇದಿಕೆಯಲ್ಲಿ ಬಿ.ಡಿ.ನಾಯ್ಕ, ಪಿ.ಎನ್.ನಾಯ್ಕ, ಅನಿಲ ರೊಡ್ರಿಗಸ್, ಪಿ.ಎಂ. ಮುಕ್ರಿ, ದಯಾನಂದ ದೇಶ ಭಂಡಾರಿ, ಸುಬ್ಬಯ್ಯ ನಾಯ್ಕ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಸಂಜನಾ ಭಟ್,ಮೇಘನಾ ಭಟ್, ದೀಕ್ಷಾ ಪಿ.ನಾಯ್ಕ, ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಅದ್ವೈತ್ ರವಿರಾಜ್ ಕಡ್ಲೆ ಉಪಸ್ಥಿತರಿದ್ದರು.

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಅದ್ವೈತ ರವಿರಾಜ್ ಕಡ್ಲೆ, ಕೊಂಕಣ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಸುಮಾ ಪ್ರಭು ರವರನ್ನು ಉಪನಿರ್ದೇಶಕರಾದ ಈಶ್ವರ ನಾಯ್ಕರವರು ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ರಾದ ಡಾಕ್ಟರ್ ಶ್ರೀಧರ ಗೌಡ ಉಪ್ಪಿನ ಗಣಪತಿ, ಸಾಹಿತಿ ಬೀರಣ್ಣ ನಾಯಕ, ಉದಯ ನಾಯಕ, ಪ್ರಮೋದ ನಾಯ್ಕ, ಪ್ರದೀಪ ನಾಯ್ಕ, ವಸಂತ ಶೇಟ್, ಎಸ್.ಪಿ. ನಾಯ್ಕ, ಯೋಗೇಶ ಪಟಗಾರ, ಸಂಧ್ಯಾ ಭಟ್, ವಿಜಯ ಗುನಗ, ನೇತ್ರಾವತಿ ನಾಯಕ,ಅರವಿಂದ ನಾಯ್ಕ, ಗಣಪತಿ ಅಡಿಗುಂಡಿ, ಸುರೇಶ ಭಟ್, ಎಂ.ಎA. ಚಂದಾವರ ಮುಂತಾದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಪ್ರಾರAಭದಲ್ಲಿ ಮಹಾತ್ಮ ಗಾಂಧಿ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ವನ್ನಳ್ಳಿ ಗಿರೀಶ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಪಿ.ಎಂ. ಮುಕ್ರಿ ವಂದಿಸಿದರು. ಶಿಕ್ಷಕರಾದ ನಾಗರಾಜ್ ಶೆಟ್ಟಿ, ಮಾಲಾ ನಾಯ್ಕ ನಿರೂಪಿಸಿದರು.
ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯಕ್ಕೆ ನೂರಕ್ಕೆ ನೂರರಷ್ಟು ಅಂಕಗಳಿಸಿದ 125 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕನ್ನಡದ ಶಾಲು ಹಾಕಿ,ಅಭಿನಂದನಾ ಪತ್ರ ಮತ್ತು ಪುಸ್ತಕ ನೀಡಿ ಗೌರವಿಸಲಾಯಿತು

error: