May 8, 2024

Bhavana Tv

Its Your Channel

ಮೀನುಗಾರ ಸಮುದಾಯದ ಪರೇಶ ಮೇಸ್ತಾ, ಕುಟುಂಬಕ್ಕೆ ಬಿಜೆಪಿಯಿಂದ ದೊಡ್ಡ ಅನ್ಯಾಯ ವಾಗಿದೆ : ಸೂರಜ್ ನಾಯ್ಕ ಸೋನಿ

ಕುಮಟಾ: ಮೀನುಗಾರ ಸಮುದಾಯದ ಪರೇಶ ಮೇಸ್ತಾ ಕುಟುಂಬಕ್ಕೆ ಬಿಜೆಪಿಯಿಂದ ದೊಡ್ಡ ಅನ್ಯಾಯ ವಾಗಿದೆ ಎಂದು ಸೂರಜ್ ನಾಯ್ಕ ಸೋನಿ ಹೇಳಿಕೆ ನೀಡಿಖಂಡಿಸಿದ್ದಾರೆ.

ಪರೇಶ ಮೇಸ್ತಾನ ಸಾವು ಪ್ರಕರಣದಲ್ಲಿ ಆಕಸ್ಮಿಕ ಸಾವು ಎಂದು ವರದಿ ನೀಡಿರುವುದರಿಂದ ಜನರು ದಿಗ್ಬಂಮೆಗೆ ಒಳಗಾಗುವ ರಿರ್ಪೋಟ್ ನೀಡಿದೆ. ಇದು ಮೀನುಗಾರರ ಸಮಾಜದ ಪರೇಶ ಮೆಸ್ತಾನ ಕುಟುಂಬಕ್ಕೆ ದೊಡ್ಡ ಅನ್ಯಾಯವಾಗಿದೆ ಹಾಗೂ ಪರೇಶ ಮೇಸ್ತಾ ಸಾವಿನ ಪ್ರಕರಣದಲ್ಲಿ ಕೆಲವು ಬಿಜೆಪಿಯ ಹಿರಿಯ ಮುಖಂಡರು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಲಾಭ ಪಡೆದು ನನ್ನಂತಹ ಸಾವಿರಾರು ಯುವಕರನ್ನು ಬಲಿಪಶು ಮಾಡಿದ್ದಾರೆ ಎಂದು ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಖಂಡಿಸಿದರು.
2017ರ ಡಿಸೆಂಬರ್ ತಿಂಗಳಲ್ಲಿ ಪರೇಶ ಮೇಸ್ತಾನ ಅನುಮಾನಾಸ್ಪದ ಸಾವು ಸಂಭAವಿಸಿದಾಗ ಅದರಲ್ಲೂ ಪ್ರಮುಖವಾಗಿ ಕೆಲವು ಬಿಜೆಪಿಯ ಮುಂಖಡರು ಹೇಳಿದ್ದು, ಮೃತದೇಹ ಕರಕಲು ಆಗಿದೆ, ದೇಹಕ್ಕೆ ಪೆಟ್ಟು ಬಿದ್ದಿದೆ ಸರಿಯಾಗಿ ಪೋಸ್ಟಮಾರ್ಟಮ್ ಮಾಡಿಲ್ಲ ಎಂದು ಬಿಜೆಪಿಯ ಪಕ್ಷದವರು ಯುವಕರನ್ನು ಭಾವನಾತ್ಮಕವಾಗಿ ಕೆರಳಿಸಿ ಈ ಸಾವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡರು. ಆದರೆ ಸಿಬಿಐ ನೀಡಿರುವ ವರದಿ ವಿಭಿನ್ನವಾಗಿದೆ. ಆಕಸ್ಮಿಕ ಸಾವು ಅಂದಾರೆ, ಸಿಬಿಐ ವರದಿ ನೀಡಲು 4 ವರ್ಷ ಬೇಕಾಗಿತ್ತಾ. ಬಿಜೆಪಿಯ ಕುತಂತ್ರ ರಾಜಕೀಯ ಅಜೆಂಡಾದಿAದ ಪರೇಶ ಮೇಸ್ತಾ ಸಾವು ಸಂಭವಿಸಿದಾಗ ಹೋರಾಟ ಮಾಡಿದ್ದ ವ್ಯಕ್ತಿಗಳ ಮೇಲೆ ಕೇಸ್ ಬಿದ್ದು, ಜೈಲಿಗೆ ಹೋಗಿದ್ದು, ನನ್ನಂತಹ ಯುವಕರ ಭವಿಷ್ಯವನ್ನು ಹಾಳು ಮಾಡಿದ್ದಾರೆ.
. ಈ ಹಿಂದೆ ಭಟ್ಕಳದ ಮಾಜಿ ಶಾಸಕ ಡಾ. ಚಿತ್ತರಂಜನ ಹಾಗೂ ತಿಮ್ಮಪ್ಪ ನಾಯ್ಕ ಅವರ ಸಾವಿನ ಪ್ರಕರಣದಲ್ಲಿ ಯಾವುದೇ ರೀತಿಯ ಬಹಿರಂಗವಾಗಿಲ್ಲ, ಈ ಪರೇಶ ಮೇಸ್ತಾ ಪ್ರಕರಣವು ಕೂಡಾ ಅದೆ ದಿಕ್ಕಿನಲ್ಲಿ ಸಾಗಿದೆ
ಇದು ಮೀನುಗಾರ ಸುಮುದಾಯದ ಪರೇಶ ಮೇಸ್ತಾ ಕುಟುಂಬಕ್ಕೆ, ಹಾಗೂ ನನ್ನಂತಹ ಸಾವಿರಾರರು ಯುವಕರಿಗೆ ಅನ್ಯಾಯವಾಗಿದೆ ಎಂದು ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಹೇಳಿದರು.
ವರದಿ: ವಿಶ್ವನಾಥ ನಾಯ್ಕ, ಕುಮಟಾ

error: