May 20, 2024

Bhavana Tv

Its Your Channel

ಕುಮಟಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಯವರಿಂದ ಸುದ್ದಿಗೋಷ್ಠಿ

ಕುಮಟಾ: ಶಾಸಕ ದಿನಕರ ಶೆಟ್ಟಿ 58000 ಸಾವಿರ ಮತಗಳು ಬಿದ್ದಿದೆ ಜನರು ನನ್ನನ್ನು ನೋಡಿ ಮತಹಾಕಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ. ಇಂದು ನಮಗೆ ಅರ್ಥವಾಗುತ್ತಿದೆ ಪರೇಶ ಮೇಸ್ತಾ ಸಾವು ಸಂಭವಿಸಿದಾಗ, ಅದನ್ನೆ ಬಿಜೆಪಿಯವರು ಚುನಾವಣೆಯ ಅಸ್ತೃವನ್ನಾಗಿ ಮಾಡಿಕೊಂಡು, ಆಯ್ಕೆಯಾಗಿದ್ದಾರೆ. ಅವರಿಗೆ ಮಾನ, ಮರ್ಯಾದೆ ಇದ್ರೆ ತಕ್ಷಣ ರಾಜೀನಾಮೆ ನೀಡಿ ಮುಂದಿನ ಚುನಾವಣೆಯನ್ನು ಎದುರಿಸಲಿ, ಆ ಅರ್ಹತೆ ಅವರಿಗೆ ಇದೆಯಾ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಪ್ರಶ್ನಿಸಿದರು. ಅವರು ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

2018ರ ಚುನಾವಣೆಯಲ್ಲಿ ಬಿಜೆಪಿಯವರು ಕಾಂಗ್ರೆಸ್‌ಗೆ ಓಟು ಹಾಕಿದರೆ, ಹಿಂದೂಗಳ ಹತ್ಯೆ ಜಾಸ್ತಿಯಾಗುತ್ತದೆ, ಬಿಜೆಪಿ ಆಡಳಿತಕ್ಕೆ ಬಂದರೆ ಹಿಂದೂಗಳಿಗೆ ರಕ್ಷಣೆ ಸಿಗುತ್ತದೆ ಎಂದು ಪ್ರಚಾರ ಮಾಡಿ ಆ ಸನ್ನಿವೇಶದಲ್ಲಿ ಜನರಿಗೆ ನಿಜವಾದ ಪರಿಸ್ಥಿತಿ ಅರ್ಥವಾಗಿಲ್ಲ. ಇದರಿಂದ ಬಿಜೆಪಿಯು ಅಧಿಕಾರಕ್ಕೆ ಬಂದಿದೆ. ಪರೇಶ ಮೆಸ್ತಾ ಅನುಮಾನಾಸ್ಪದ ಸಾವಿಗೆ ಸಂಭAಧಿಸಿದAತೆ, ಸಿಬಿಐ ವರದಿಯಲ್ಲಿ ಆಕಸ್ಮಿಕ ಸಾವು ಎಂದು ಬಂದಿದೆ. ಇದು ಕಾಂಗ್ರೆಸ್ ಪಕ್ಷವು ಆರೋಪದಿಂದ ಮುಕ್ತವಾಗಿದೆ. ಇದರಿಂದ ನಮ್ಮೆಲ್ಲರಿಗೂ ನೆಮ್ಮದಿ ಇದೆ. ಸಿಬಿಐ ಬಿ ರಿರ್ಪೋಟ್ ನೀಡಲು 5 ವರ್ಷದ ಅವಶ್ಯಕತೆ ಇದೆಯಾ ಇದರ ಹಿಂದೆ ಕೇಂದ್ರ ಸರಕಾರದ ನಾಯಕರ ರಾಜಕೀಯ ಒತ್ತಡ ಇತ್ತಾ ಎಂದು ಪ್ರಶ್ನಿಸಿದ ಅವರು, ಪರೇಶ ಮೇಸ್ತಾನ ಶವವು ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪತ್ತೆಯಾದಾಗ, ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ, ಬಿಜೆಪಿಯ ಕೆಲವು ನಾಯಕರು, ಹಾಗೂ ಸಂಸದ ಅನಂತ ಕುಮಾರ ಹೆಗಡೆ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಆಗಮಿಸಿದ ಅವರು ಆ ವೇಳೆ ಅನಂತ ಕುಮಾರ ಹೆಗಡೆ ಹನಿ ಹನಿ ರಕ್ತಕ್ಕೂ ನ್ಯಾಯ ದೊರಕಿಸದೆ ಸುಮ್ಮನಿರುವುದಿಲ್ಲ ಎಂದು ಪ್ರಚೋದನಾತ್ಮಕವಾಗಿ ಯುವಕರನ್ನು ಕೆರಳಿಸಿದರು. ಇದರಿಂದ ಯುವಕರನ್ನು ಜಿಲ್ಲೆಯಲ್ಲಿ ಬೆಂಕಿ ಹಚ್ಚುವಂತಹ ಕೆಲಸವಾಯಿತು. ಇದರಿಂದ ಜಿಲ್ಲೆಯ 4 ಸಾವಿರ ಅಮಾಯಕ ಯುವಕರು ಅವರ ಮೇಲೆ ಕೇಸ್ ಬಿದ್ದು ಜೈಲು ಸೇರಿ ಅವರ ಭವಿಷ್ಯ ಹಾಳಾಗಿ ಹೊಯಿತು ಎಂದು ಹೇಳಿದರು.

ಬಿಜೆಪಿಯು ಪರೇಶ ಮೇಸ್ತಾ ಸಾವಿನಲ್ಲಿ ಕರಾವಳಿಯುದ್ದಕ್ಕೂ ಚುನಾವಣೆಯ ಲಾಭ ಪಡೆದು, ಅವರ ಕುಟುಂಬಕ್ಕೆ ನ್ಯಾಯ ಒದಗಿಸಿದ್ರಾ, ಚುನಾವಣೆಯ ಪ್ರಚಾರ ವೇದಿಕೆಯಲ್ಲಿ ಮಗನನ್ನು ಕಳೆದುಕೊಂಡ ಪರೇಶ ಮೆಸ್ತಾ ತಂದೆ ತಾಯಿಯನ್ನು ಕರೆದು ತಂದು ರಾಜಕೀಯ ಮಾಡುತ್ತಾರೆ ಅಂದ್ರೆ ಅದು ಸರಿಯಾದ ಕ್ರಮನಾ, ಬಿಜೆಪಿಯು ಶಿಸ್ತಿನ ಪಕ್ಷವೆಂದು ಹಣೆ ಪಟ್ಟಿಯನ್ನು ಕಟ್ಟಿಕೊಂಡಿದೆ ಇದು, ಆಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ವಿ ದೇಶಪಾಂಡೆಯವರು ಇದ್ದರು, ಅವರು ಪರೇಶ ಮೇಸ್ತಾನ ಕುಟುಂಬಕ್ಕೆ ನೆರವು ನೀಡಲು ಮುಂದಾದ್ರೂ ಆದ್ರೂ ಅದನ್ನು ಪಡೆಯಲು ಬಿಡದೆ, ಪರೇಶನ ಸಹೋದರನಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ರು ಅದನ್ನು ಪಡೆಯಲು ಬಿಜೆಪಿಯವರು ಬಿಡದೆ ಅವರ ಕುಟುಂಬಕ್ಕೆ ಅನ್ಯಾಯ ವೇಸಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೊನ್ನಪ್ಪ ನಾಯಕ ಹೇಳಿದರು.

ಬಿಜೆಪಿಯವರು ಭ್ರಷ್ಟಾಚಾರ, ಹಾಗೂ ಬೆಲೆ ಏರಿಕೆಯನ್ನು ಮರೆ ಮಾಚಲು ಯಾವ ನಿಟ್ಟಿನಲ್ಲಿ ಬೇಕಾದ್ರೂ ಅವರು ಕ್ರಮಕೈಗೋಳ್ಳುತ್ತಾರೆ, ಪರೇಶ ಮೇಸ್ತಾನ ಆಕಸ್ಮಿಕ ಸಾವು ಎಂದು ವರದಿ ಬಂದ ಮೇಲೆ ಮುಂದಿನ ಆರು ತಿಂಗಳು ಓಟು ಪಡೆಯಲು ಅಧಿಕಾರ ಏನು ಮಾಡಬೇಕು, ಅವರು ಹಿಂದೂಗಳ ಸಾವುಗಳನ್ನು ತೆಗೆದುಕೊಳ್ಳುತ್ತಾರೆ ನಾವು ಬಿಜೆಪಿಯ ಸರ್ಕಾರದಿಂದ ಬಯ ಬೀತರಾಗಿ ಬದುಕುತ್ತಿದ್ದೇವೆ ಎಂದು ಹೇಳಿದರು.

ಈ ಸಂಧರ್ಭಧಲ್ಲಿ ಕಾಂಗ್ರೆಸ್ ತಾಲೂಕಾಧ್ಯಕ್ಷ ವಿ.ಎಲ್.ನಾಯ್ಕ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷರಾದ ಆರ್.ಎಚ್.ನಾಯ್ಕ, ಮುಖಂಡರಾದ ರವಿ ಕುಮಾರ ಶೆಟ್ಟಿ, ನಾಗೇಶ ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುರೇಖಾ ವಾರೆಕರ್, ಮಾಜಿ ಪುರಸಭಾ ಅಧ್ಯಕ್ಷರಾದ ಮಧುಸೂಧನ ಶೇಟ್ ಇತರಿದ್ದರು.

ವರದಿ: ವಿಶ್ವನಾಥ ನಾಯ್ಕ ಕುಮಟಾ

error: