April 27, 2024

Bhavana Tv

Its Your Channel

ಹೊಳೆಗದ್ದೆ ಶ್ರೀ ಮಹಾಸತಿ ಸೇವಾ ಸಮಿತಿಯಿಂದ ನಾಡಹಬ್ಬ ದಸರಾದಲ್ಲಿ ಪ್ರತಿಭಾ ಪುರಸ್ಕಾರ

ಕುಮಟಾ: ಪ್ರತಿಭೆ ಎಂಬುದು ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ನಿರಂತರ ಪ್ರಯತ್ನದ ಮೂಲಕ ಸಾಧನೆಯ ಶಿಖರ ಏರಬಹುದು ಎಂದು ಸಮಾಜ ಸೇವಕ ರಾಜು ನಾಯ್ಕ ಹೇಳಿದರು.

ಇತ್ತೀಚೆಗೆ ಹೊಳೆಗದ್ದೆ ಶ್ರೀ ಮಹಾಸತಿ ಸೇವಾ ಸಮಿತಿಯವರು ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ.ಅದನ್ನು ಸಾರ್ಥಕ ಪಡಿಸಿಕೊಂಡು ಸಾಧಕರಾಗಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದೇವಗಿರಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಎಸ್. ಟಿ.ನಾಯ್ಕ ಮಾತನಾಡಿ, ಸಮಿತಿಯ ಕಾರ್ಯ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿ ಜೀವನದಲ್ಲಿ ಮಾಡಿದ ಸಾಧನೆ ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯಕ್ಕೆ ದಾರಿದೀಪವಾಗಲಿದೆ ಎಂದರು. ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸದಾ ನನ್ನ ನೆರವು ಇದೆ ಎಂದರು.

ನಿವೃತ್ತ ಅಂಚೆ ಅಧಿಕಾರಿ ಅನಿಲ ಬೆರಂಕಿ ಮಾತನಾಡಿ, ಅಂಕಗಳಿಸುವುದೊAದೆ ವಿದ್ಯಾರ್ಥಿ ಜೀವನದ ಕನಸಾಗಬಾರದು. ಮಾದರಿ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಹಿರಿಯರನ್ನು ಗೌರವಿಸುವ ಸಜ್ಜನಿಕೆ ನಿಮ್ಮದಾಗಲಿ. ಸಮಾಜಕ್ಕೆ ಮಾದರಿಯಾದ ವ್ಯಕ್ತಿಗಳಾಗಿ ಊರಿಗೆ ಕೀರ್ತಿ ತನ್ನಿ ಎಂದರು.

ಜಿಲ್ಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುದೀಶ ನಾಯ್ಕ ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಮಹತ್ವದ ಮೈಲಿಗಲ್ಲನ್ನಾಗಿ ಪರಿವರ್ತಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ನಮ್ಮೂರಿನಲ್ಲಿರುವ ಪ್ರತಿಯೊಬ್ಬ ಸಾಧಕನ ಜೀವನ ಚರಿತ್ರೆ ನಿಮ್ಮೆಲ್ಲರಿಗೂ ಪ್ರೇರಣೆಯಾಗಲಿ. ಆ ದಿಶೆಯಲ್ಲಿ ಮುಂದಡಿ ಇಡಲು ನಿರಂತರ ಶ್ರಮ ಹಾಗೂ ಸತತ ಅಧ್ಯಯನ ಅಗತ್ಯ ಎಂದರು.

ಇನ್ನೊವ9 ಮುಖ್ಯ ಅತಿಥಿ, ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ ನಾಯ್ಕ ಮಾತನಾಡಿ, ಪ್ರತಿಭೆ ಎಲ್ಲರಲ್ಲಿಯೂ ಇದೆ. ಅದು ಬೆಳಕಿಗೆ ಬರಲು ಇಂತಹ ಪುರಸ್ಕಾರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲು ಸಾಧ್ಯ. ಮಾನವೀಯ ಮೌಲ್ಯಗಳ ಜೊತೆಗೆ ಹೆಜ್ಜೆ ಹಾಕಿ ಹೊಸ ಇತಿಹಾಸ ನಿಮ್ಮಿಂದ ನಿರ್ಮಾಣವಾಗಲಿ ಎಂದರು. ಹಲವು ದೃಷ್ಟಾಂತಗಳನ್ನು ವಿದ್ಯಾರ್ಥಿಗಳ ಎದುರಿಗೆ ತೆರೆದಿಟ್ಟು ಭವಿಷ್ಯತ್ತಿನ ರೂವಾರಿಗಳಾಗಿ ಬದುಕನ್ನು ಕಟ್ಟಿಕೊಳ್ಳಿ ಎಂದರು.

ವೇದಿಕೆಯಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಮೋಹನ ಕಾಮತ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲ ಮಡಿವಾಳ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಪಿ.ಆರ್.ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಸಭೆಗೆ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶಿಕ್ಷಕ ಬಾಬಣಿ ದೇಶ ಭಂಡಾರಿ ವಂದಿಸಿದರು. ಶಿಕ್ಷಕ ಸುಬ್ರಾಯ ಶಾನಭಾಗ ನಿರೂಪಿಸಿದರು. ಎಸ್. ಎಸ್. ಎಲ್. ಸಿ.ಯಲ್ಲಿ ಶೇಕಡ 85 ಕ್ಕೂ ಹೆಚ್ಚು ಅಂಕಗಳಿಸಿದ ಎಂಟು ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಪಡೆದರು.

error: