December 6, 2022

Bhavana Tv

Its Your Channel

ಕುಮಟಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೈಕ್ ರ‍್ಯಾಲಿ

ಕುಮಟಾ:- ದೇಶದ ಐಕ್ಯತೆಗಾಗಿ ಕಾಂಗ್ರೆಸ್ ಪ್ರಮುಖರಾದ ಮಾನ್ಯ ರಾಹುಲ್ ಗಾಂಧಿಯವರ ಮುಖಂಡತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಪಾದಯಾತ್ರೆ ಇಂದು ಕರ್ನಾಟಕ ಪ್ರವೇಶಿಸಿದ ಪ್ರಯುಕ್ತ ಅವರನ್ನು ಸ್ವಾಗತಿಸುವ ಉದ್ದೇಶದಿಂದ ಕುಮಟಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಬೈಕ್ ರ್ಯಾಲಿ ನಡೆಸಲಾಯಿತು..

  ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಹಾಗೆಯೇ ಮಾತನಾಡಿ, " ಮಾನ್ಯ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ನಮ್ಮ ದೇಶವು ಸರ್ವ ಧರ್ಮಗಳ ಶಾಂತಿಯ ತೋಟವಾಗಿದ್ದು, ದೇಶದ ಐಕ್ಯತೆಗಾಗಿ ಈ ಪಾದಯಾತ್ರೆಯ ನ್ನು ನಡೆಸುತ್ತಿದ್ದಾರೆ. ಈ ಹಿಂದೆ ನಮ್ಮನ್ನಾಳಿದ ಕಾಂಗ್ರೆಸ್ ಪ್ರಧಾನಿಗಳು ದೇಶದ ಅಭಿವೃದ್ಧಿಗಾಗಿ ಮಹಾನ್ ಯೋಜನೆಗಳನ್ನು ನೀಡಿದ್ದಾರೆ. ಎಂದು ತಿಳಿಸಿದರು...
   ಪಕ್ಷದ ಮುಖಂಡರ ಉಪಸ್ಥಿತಿಯಲ್ಲಿ ನಡೆದ ಬೈಕ್ ರ್ಯಾಲಿ ಹೆಗಡೆ ಕ್ರಾಸ್ ನಿಂದ ಪ್ರಾರಂಭಗೊAಡು ಗಿಬ್ ಸರ್ಕಲ್, ಸುಭಾಷ್ ರಸ್ತೆ, ರಥಬೀದಿ, ಬಸ್ತಿಪೇಟೆ ಮಾರ್ಗವಾಗಿ ಬ್ಲಾಕ್ ಕಾಂಗ್ರೆಸ್ ಕಛೇರಿಯ ಹತ್ತಿರ ಕೊನೆಗೊಂಡಿತು....ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ದೇಶದ, ಪಕ್ಷದ ಹಾಗೂ ಪಕ್ಷದ ಮುಖಂಡರ  ಪರವಾಗಿ ಘೋಷಣೆ ಕೂಗುತ್ತಾ ಸಂಭ್ರಮಿಸಿದರು.
   ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿ ಎಲ್ ನಾಯ್ಕ ಅವರು ಅಕ್ಟೋಬರ್ 12 ರಂದು ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಕರರೆ ನೀಡಿದರು... 
  ಕಾರ್ಯಕ್ರಮದಲ್ಲಿ  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾಗೇಶ್ ನಾಯ್ಕ, ಮುಖಂಡರಾದ  ಶ್ರೀ ರವಿಕುಮಾರ್ ಎಂ.ಶೆಟ್ಟಿ, ಶ್ರೀ ರತ್ನಾಕರ ನಾಯ್ಕ, ಶ್ರೀಮತಿ ಸುರೇಖಾ ವಾರೇಕರ್, ಶ್ರೀ ಮುಜಾಫರ್ ಶೇಕ್, ಶ್ರೀಮತಿ ಗಾಯತ್ರಿ ಗೌಡ, ಶ್ರೀ ಶಂಕರ ಅಡಿಗುಂಡಿ, ಶ್ರೀ ಮಂಜುನಾಥ ನಾಯ್ಕ, ಶ್ರೀ ಭಾಸ್ಕರ್ ಪಟಗಾರ, ಶ್ರೀ ಗಜಾನನ ನಾಯ್ಕ, ಶ್ರೀ ಎಂ.ಟಿ.ನಾಯ್ಕ, ಮಾಜಿ ಜಿಲ್ಲಾ ಪಂಚಾಯತ್-ತಾಲೂಕು ಪಂಚಾಯತ್ , ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯತ್/ಪುರಸಭೆ ಅಧ್ಯಕ್ಷರು-ಉಪಾಧ್ಯಕ್ಷರು-ಸದಸ್ಯರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಸೆಲ್ ಅಧ್ಯಕ್ಷರುಗಳು, ಘಟಕಾಧ್ಯಕ್ಷರುಗಳು, ಹಿರಿಯ ಕಿರಿಯ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.....

About Post Author

error: