December 22, 2024

Bhavana Tv

Its Your Channel

ಗಿಬ್ ಪ್ರೌಢ ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ

ಕುಮಟಾ:ಭಾರತದ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಪ್ರಮುಖ ಪಾತ್ರ ವಹಿಸಿ ಇಡೀ ಜಗತ್ತಿಗೆ ಮಾದರಿಯಾಗುವಂತೆ ಭಾರತದ ಸಂವಿಧಾನ ರಚಿಸಿದ್ದು ಭಾರತಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಪ್ರಧಾನ್ ಸಿವಿಲ್ ನ್ಯಾಯದೀಶರು ಹಾಗೂ ಪ್ರ.ದ.ನ್ಯಾ ದಂಡಧಿಕಾರಿ ನರೇಂದ್ರ ಬಿ ಆರ್ ಅವರು ಹೇಳಿದರು.
ಕುಮಟಾ ತಾಲೂಕು ಕಾನೂನು ಸೇವಾ ಸಮಿತಿ ನ್ಯಾಯವಾದಿಗಳ ಸಂಘ ಅಭಿಯೋಚನೆ ಸಮಿತಿ ಇಲಾಖೆ ಹಾಗೂ ಗಿಬ್ ಪ್ರೌಢ ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢ ಸಂಕಲ್ಪ ಮಾಡಿ ಎಂದು ಕರೆ ನೀಡಿದರು.
ಇನ್ನೂ ಉಪನ್ಯಾಸ ಆಗಿ ಆಗಮಿಸಿದ ಗಿಬ್ ಹೈಸ್ಕೂಲಿನ ಶಿಕ್ಷಕರಾದ ವಿಜಯಕುಮಾರ್ ನಾಯ್ಕ ಮಾತನಾಡಿ ಡಾ.ಅಂಬೇಡ್ಕರವರು ತಮ್ಮ ಜೀವನದಲ್ಲಿ ಅನುಭವಿಸಿದ ಘಟನೆಗಳ ಆಧಾರದ ಮೇಲೆ ಸಂವಿಧಾನದ ಪೀಠಿಕೆ, ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಂವಿಧಾನ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಮ್ಮ ಕರ್ತವ್ಯ ಏನು ಎಂಬುದನ್ನು ಎಲ್ಲರೂ ಮೊದಲು ಅರಿಯಬೇಕು. ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮತ್ತೊಬ್ಬರ ಹಕ್ಕಿಗೆ ದಕ್ಕೆ ಬರದಂತೆ ನಡೆದರೆ ನಾವು ಕಾನೂನಿಗೆ ಗೌರವ ಕೊಟ್ಟಂತೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧಿಸರು ಜೊಯ್ಲಿನ ಮೆಂಡೊನ್ಸ,ಕೆನರಾ ಸೊಸೈಟಿಯ ಕಾರ್ಯದರ್ಶಿ ಎಸ್.ಎನ.ಪ್ರಭು, ಸಹಾಯಕ ಸರ್ಕಾರಿ ಅಭಿಯೊಜಕರಾದ ಮಂಜುನಾಥ್ ಬೊರಕರ್, ಮಾರುತಿ ನಾಯ್ಕ್ ಸ್ವಾಗತಿಸಿದರು

ವರದಿ:ವಿಶ್ವನಾಥ ಜಿ ನಾಯ್ಕ ಕುಮಟಾ

error: