May 2, 2024

Bhavana Tv

Its Your Channel

ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು; ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ವಕೀಲೆ ಅರ್ಚನ ವಿನಾಯಕ ಪಟಗಾರ ಅಭಿಮತ

ಕುಮಟಾ: ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ನಮ್ಮ ದೇಶದಲ್ಲಿ ವಾಸವಾಗಿರುವ ಪ್ರತಿಯೊಬ್ಬರೂ ನಮ್ಮ ಸಂವಿಧಾನದ ಆಶಯ ಗಳನ್ನು ತಿಳಿದುಕೊಂಡು ಹಕ್ಕು ಕರ್ತವ್ಯಗಳ ಜೊತೆಗೆ ಸಂವಿಧಾನವನ್ನು ಗೌರವಿಸುವ ಕೆಲಸ ಪ್ರತಿಯೊಬ್ಬ ಪ್ರಜೆಯೂ ಮಾಡಬೇಕು ಅಂದಾಗ ಮಾತ್ರ ಪ್ರಜಾಪ್ರಭುತ್ವ ಪ್ರಜೆಗಳಿಂತ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಆಶಯದಂತೆ ನಡೆಯುತ್ತದೆ ಎಂದು ವಕೀಲೆ ಅರ್ಚನಾ ವಿನಾಯಕ ಪಟಗಾರ ಅಭಿಪ್ರಾಯಪಟ್ಟರು.
ಅವರು ಹೆಗಡೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂವಿಧಾನದ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತಾ ಮಕ್ಕಳು ಶಾಲೆಯಲ್ಲಿ ಶಿಕ್ಷಕರಿಗೆ ಮನೆಯಲ್ಲಿ ಹಿರಿಯರಿಗೆ ಗೌರವ ಕೊಡುವುದರ ಮೂಲಕ ಸಂವಿಧಾನದ ಆಶಯವನ್ನು ಅನುಪಾಲಿಸಬೇಕು ಎಂದರು. ಸಂವಿಧಾನ ರಚನೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪರಿಶ್ರಮವನ್ನು ಅವರ ಬಾಲ್ಯ ಜೀವನ ದ ಘಟನೆಗಳೊಂದಿಗೆ ವಿವರಿಸಿದರು.
ಸಂವಿಧಾನದ ಮೂಲಭೂತ ಹಕ್ಕುಗಳಾದ ಶಿಕ್ಷಣ, ವಾಕ್ ಸ್ವಾತಂತ್ರ‍್ಯ, ಧಾರ್ಮಿಕ ಸ್ವಾತಂತ್ರ‍್ಯ, ಸಮಾನತೆಯ ಹಕ್ಕುಗಳನ್ನು ತಿಳಿಸುತ್ತಾ ನಮ್ಮ ದೇಶದಲ್ಲಿ ಮೇಲು-ಕೀಳು- ಲಿಂಗ ಭೇದ ಭಾವ ಇಲ್ಲ. ಎಲ್ಲರೂ ಸಮಾನರು ಎಂದು ಸಂವಿಧಾನ ತಿಳಿಸಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸ ಬೇಕಾಗಿರುವುದರಿಂದ ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದದ್ದು ಆದ್ಯ ಕರ್ತವ್ಯ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಕಾಶ್ ನಾಯ್ಕ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನದ ಪರಿಚ್ಛೇದಗಳನ್ನು ದಿನನಿತ್ಯ ಕೋರ್ಟ್ ನ ಕಾರ್ಯ ಕಲಾಪಗಳಲ್ಲಿ ಅನು ಪಾಲನೆ ಮಾಡುತ್ತಿರುವ ವಕೀಲರೇ ಆಗಮಿಸಿ ಸಂವಿಧಾನದ ಆಶಯಗಳನ್ನು ತಿಳಿಸಿರುವುದು
ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಗಳಿಗೆ. ವಿದ್ಯಾರ್ಥಿಗಳು ಈ ಸಮಯವನ್ನು ಸದುಪಯೋಗ ಪಡಿಸಿಕೊಂಡು ಭವಿಷ್ಯದಲ್ಲಿ ಸತ್ಪ್ರಜೆಯಾಗುವತ್ತ ದಾಪುಗಾಲು ಇಡಬೇಕು ಅಂದಾಗ ಮಾತ್ರ ಸಮಾಜದಲ್ಲಿ ಒಂದು ಒಳ್ಳೆಯ ನಾಗರಿಕನಾಗಿ ಬದುಕಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮುಖ್ಯಾಧ್ಯಾಪಕಿ ಮಂಗಲಾ ಹೆಬ್ಬಾರ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ನೀಡಲಾಗಿದೆ. ನಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮಾತ್ರ ನಾವು ಅದನ್ನು ಪ್ರಶ್ನಿಸುತ್ತೇವೆ. ಆದರೆ ಅಷ್ಟೇ ಜವಾಬ್ದಾರಿ ಹೊಂದಿರುವ ಕರ್ತವ್ಯಗಳನ್ನು ನಾವು ಮರೆತು ಬಿಡುತ್ತೇವೆ. ಇದರಿಂದ ಸಂವಿಧಾನದ ಆಶಯದಲ್ಲಿ ಅಸಮತೋಲನ ಉಂಟಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂವಿಧಾನದ ಹಕ್ಕು ಮತ್ತು ಕರ್ತವ್ಯ ಎರಡನ್ನೂ ಸರಿಯಾಗಿ ತಿಳಿದುಕೊಂಡು ಭವಿಷ್ಯವನ್ನು ಎದುರಿಸಿದರೆ ಬದುಕು ಸುಂದರ ಕ್ಷಣವಾಗಲು ಸಾಧ್ಯವಾಗುತ್ತದೆ ಎಂದರು. ಶಿಕ್ಷಕ ಶ್ರೀಧರ ಗೌಡ ಪ್ರಾಸ್ತಾವಿಕ ನುಡಿ ಆಡಿದರು. ದೈಹಿಕ ಶಿಕ್ಷಕಿ ಶ್ಯಾಮಲ ಪಟಗಾರ ಸಂವಿಧಾನದ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ ರಸಪ್ರಶ್ನೆ ಸ್ಪರ್ಧೆ , ಸಂವಿಧಾನ ಕುರಿತು ಭಾಷಣ, ಹಾಡು ಹಾಡುವ ಕಾರ್ಯಕ್ರಮವನ್ನು ಅತಿಥಿ ಶಿಕ್ಷಕಿ ಲಕ್ಷ್ಮಿ ನಾಯ್ಕ ನಿರ್ವಹಿಸಿದರು. ಇದೆ ವೇಳೆಯಲ್ಲಿ ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಯೋಗಿತಾ ನಾಯ್ಕ ಉಪಸ್ಥಿತರಿದ್ದು ಶುಭ ಕೋರಿದರು. ಶಿಕ್ಷಕಿಯರಾದ ನಯನ ಪಟಗಾರ ಭಾಗ್ಯಲಕ್ಷ್ಮಿ ನಾಯಕ, ಸಹಕರಿಸಿದರು.
ಶಾಲಾ ಮಂತ್ರಿ ನಮೃತ ಪಟಗಾರ ಸ್ವಾಗತಿಸಿದರು. ಸಂಜನಾ ನಾಯ್ಕ ವಂದಿಸಿದರು. ರಕ್ಷಾ ನಾಯ್ಕ, ಧನ್ಯಶ್ರೀ ಪಟಗಾರ ನಿರೂಪಿಸಿದರು.

error: