ಹಿರೇಗುತ್ತಿಯ ಶ್ರೀ ಹುಲಿ ದೇವರ ಮೂರ್ತಿ ಪ್ರತಿಷ್ಠಾಪನೆ ದಿನಾಂಕ 24-02- 2023 ರಂದು ಶುಕ್ರವಾರ ನಡೆಯಿತು. ಶ್ಯಾಮ್ ಭಟ್ಟರ ಉಪಸ್ಥಿತಿಯಲ್ಲಿ ಗಣ ಹವನ, ಗಣ ಹೋಮ, ಮಂಗಳಾರತಿ ಮಹಾಪೂಜೆ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೆರವೇರಿದವು. ಊರಿನ ಬೊಮ್ಮಯ್ಯ ದೇವರು ಹಿರೇ ಹೊಸಬ. ಸಣ್ಣ ಹೊಸಬ ದೇವರು ಗಳ ಅರ್ಚಕರಾದ ಬೀರಣ್ಣ ಗುನಗಾ. ಗೋಪಾಲಕೃಷ್ಣ ಗುನಗಾ. ಉದ್ದಂಡ ಗುನಗಾ. ಹಾಗೂ ಕಟಗಿದಾರರಾದ ಉಮೇಶ ಗಾಂವಕರ ದಂಪತಿಗಳು. ಆನಂದು ನಾಯಕ ದಂಪತಿಗಳು ಮತ್ತು ಬೊಮ್ಮಯ್ಯ ನಾಯ್ಕ ದೇವತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಊರಿನ ಮೊಕ್ತೇಸರ್ ಉದ್ದಂಡ ನಾರಾಯಣ ನಾಯಕ ಕೆಂಚನ್. ವಾಸುದೇವ ನಾರಾಯಣ ನಾಯಕ ಕೆಂಚನ್ ,ನಾಗೇಶ ತಿಮ್ಮಣ್ಣ ನಾಯಕ ಅಡ್ಲೂರು ಮನೆ, ವಿನಾಯಕ ಗಾಂವಕರ ಕುಟುಂಬದವರು ಧಾರವಾಡ, ಗಂಗಾಧರ ಕವರಿ ದಂಪತಿಗಳು. ಸದಾನಂದ ಕವರಿ. ವಿವೇಕ ಕವರಿ ದಂಪತಿಗಳು, ರಾಮು ಕೆಂಚನ್ , ಚಂದ್ರಹಾಸ ನಾಯಕ, ಚಂದ್ರಕಾoತ ದೇವಣ್ಣ ನಾಯಕ,ಕಾಂತಾ ಗಾಂವಕರ, ಹರೀಶ ನಾಯಕ,ಅರವಿಂದ ಸುರೇಶ ನಾಯಕ, ಮೋಹನ ಬಿ ಕೆರೆಮನೆ, ನೀಲಕಂಠ ನಾಯಕ, ಜಗದೀಶ ರಾಮಚಂದ್ರ ನಾಯಕ, ಪ್ರಮೋದ ನಾಯಕ, ಪ್ರೇಮಾನಂದ ಗಾಂವಕರ, ಉದ್ದಂಡ ಗಾಂವಕರ ಮನೆಯವರು, ವಿಠೋಬ ನಾಯಕ,ರಾಜೀವ ಗಾಂವಕರ,ಪೊಪ್ಪಯ್ಯ ಗಾಂವಕರ. ಶ್ರೀ ಬ್ರಹ್ಮ ಜಟಗ ಯುವಕ ಸಂಘದ ಸರ್ವ ಸದಸ್ಯರು ಊರ ನಾಗರಿಕರು ದೇವತಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ