December 22, 2024

Bhavana Tv

Its Your Channel

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯ,ವಿಶ್ವಾಸ ಹೆಚ್ಚಾದಾಗ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ – ರಾಘವೇಂದ್ರ ಭಟ್ಟ.

ಕುಮಟಾ:- ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ಪ್ರತಿವರ್ಷದಂತೆ 2023 ನೇ ಸಾಲಿನ ಎಸ್ ಎಸ್ ಎಲ್ ಸಿ. ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವ ಉದ್ದೇಶದಿಂದ ಅಭಿಪ್ರೇರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳು ಹಾಗೂ ಮೂರುರೂ ಪ್ರಗತಿ ವಿದ್ಯಾಲಯದ ಕನ್ನಡ ವಿಷಯ ಶಿಕ್ಷಕರಾದ ರಾಘವೇಂದ್ರ ಭಟ್ಟ ಮಾತನಾಡಿ ಆತ್ಮಸ್ಥೆರ್ಯ, ವಿಶ್ವಾಸ ಹೆಚ್ಚಾದಾಗ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿದೆ. ಅಭ್ಯಾಸ ಮಾಡುವುದೆಂದರೆ ವಿದ್ಯಾರ್ಥಿ ನನಗೆ ಗೊತ್ತಿಲ್ಲ ಎಂಬ ಒತ್ತಡಕ್ಕೆ ಒಳಗಾಗದೇ ತಾನು ತಿಳಿದುಕೊಳ್ಳುತ್ತೇನೆಂಬ ಧನಾತ್ಮಕ ಚಿಂತೆಯಿAದ ಪ್ರಯತ್ನಿಸಿದಾಗ ಎಲ್ಲವು ಸಾಧ್ಯವಾಗುತ್ತದೆ ಎಂಬುದೇ ಅಭಿಪ್ರೇರಣೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯನ್ನು ಚೆನ್ನಾಗಿ ಮಾಡಿ ಶಾಲೆಗೆ ಪಾಲಕರಿಗೆ ಊರಿಗೆ ಕೀರ್ತಿ ತನ್ನಿ ಎಂದರು.
ರಾಘವೇoದ್ರ ಭಟ್ಟರನ್ನು ಪರಿಚಯಿಸಿ ಮಾತನಾಡಿದ ಎನ್ ರಾಮು ಹಿರೇಗುತ್ತಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಕ್ಕೆ ಸಂಬoಧಿಸಿದoತೆ ಪರೀಕ್ಷೆಯ ಭಯ ಇಲ್ಲದಂತೆ ಪೂರ್ವ ತಯಾರಿಯ ಬಗ್ಗೆ ಅನೇಕ ಉಪಯುಕ್ತ ಮಾಹಿತಿಯನ್ನು ತಿಳಿಸಿ ಅಭಿಪ್ರೇರಣಾ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಟ್ಟ ರಾಘವೆಂದ್ರ ಭಟ್‌ರವರಿಗೆ ಧನ್ಯವಾದ ಅರ್ಪಿಸಿದರು.
ಹತ್ತನೇ ವರ್ಗದ ಎಲ್ಲ ವಿದ್ಯಾರ್ಥಿಗಳು ಅಭಿಪ್ರೇರಣೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.


error: