May 3, 2024

Bhavana Tv

Its Your Channel

ಹತ್ತು ದಿನಗಳ ಕಾಲ Offline K_CET ತರಗತಿಯ ಸಮಾರೋಪ

ಕುಮಟಾ ; ಡಾ ಎ ವಿ ಬಾಳಿಗಾ ಪಿಯು ಕಾಮರ್ಸ ಕಾಲೇಜಿನಲ್ಲಿ ವಿಕಸನ ಫೌಂಡೆಶನ್ ವತಿಯಿಂದ ರಾಮಕೃಷ್ಣ ಮಿಷನ್ ,BNM Institute Of Technology, TCHR, ವಿವೇಕ ಶಿಕ್ಷಣ ವಾಹಿನಿ, ಸ್ವಾಮಿವಿವೇಕಾನಂದ ಶ್ರೇಷ್ಠ ಭಾರತ ಸಂಸ್ಥಾನ ಹಾಗೂ ಯುವಾ ಬ್ರಿಗೇಡ್ ಇವರ ಸಹಕಾರದೊಂದಿಗೆ ಹತ್ತು ದಿನಗಳ ಕಾಲ Offline K_CET ತರಗತಿಯ ಸಮಾರೋಪ ಕಾರ್ಯಕ್ರಮ ನಡೆಯಿತು.
ಈ ತರಗತಿಗೆ ಕುಮಟಾ ಹೊನ್ನಾವರ ಭಟ್ಕಳ ಅಂಕೋಲಾ ಹಾಗೂ ಶಿರಸಿ ಭಾಗದಿಂದ ಸುಮಾರು 162 ವಿಧ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.

ಮೈಸೂರಿನಿಂದ ಆಗಮಿಸಿದ ಸಿ.ಇ.ಟಿ ತರಗತಿಯಲ್ಲಿ ಪರಿಣಿತರಾದಂತ ಶಿಕ್ಷಕರು ಎಂಟು ದಿನ ಇಲ್ಲಿಯೇ ಉಳಿದು ತರಗತಿಯನ್ನು ನಡೆಸಿಕೊಟ್ಟರು ಹಾಗೂ ಪ್ರತಿ ವಿದ್ಯಾರ್ಥಿಗಳಿಗು ಓದುವ ಸಲಕರಣಿ ನಾಲ್ಕು ಪುಸ್ತಕ (ಸ್ಟಡಿ ಮೆಟರಿಯಲ್ಸ್) ನೀಡಲಾಗಿದ್ದು ಕೊನೆಯ ಎರಡು ದಿನ ಸಿ ಇ ಟಿ ಪರೀಕ್ಷಾ ಮಾದರಿಯಲ್ಲಿ ಪರೀಕ್ಷೆಯನ್ನು ಮಾಡಲಾಯಿತು ಎಂದು TCHR ಸಂಸ್ಥೆಯ ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ಆದ ಅಣ್ಣಪ್ಪ ನಾಯ್ಕ ಹೇಳಿದರು, ಈ ಸಮಯದಲ್ಲಿ ಉಪಸ್ಥಿತಿ ಇದ್ದು ಮಾತನಾಡಿದ ಬಾಳಿಗಾ ಕಾಲೇಜಿನ ಚೇರ್ಮನ್ ಶ್ರೀ ಹನಮಂತ ಶಾನಭಾಗ ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಮಾಜದ ಕೆಲಸವನ್ನು ಮಾಡುವ ಕುರಿತು ಸಲಹೆ ನೀಡಿದರು ಹಾಗೂ ಈ KCET ತರಗತಿಯ ಕುರಿತು ಶ್ಲಾಘಿಸಿದರು. ಹಾಗೆ ಕಾಲೇಜಿನ ಪ್ರಾನ್ಸುಪಾಲರಾದ ಶ್ರೀ ಎನ್ ಜಿ ಹೆಗಡೆಯವರು ಮಾತನಾಡಿ ಕೆನರಾ ಕಾಲೇಜಿನಲ್ಲಿ ಶಿಕ್ಷಣಕ್ಕೆ ವಿಪುಲವಾದ ಅವಕಾಶ ಇದ್ದು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕೆಂದು ಹಾಗೂ ಈ ತರಗತಿಯಿಂದ ಉತ್ತಮ ತೇರ್ಗಡೆ ಸಿಗಲಿ ಎಂದು ಹಾರೈಸಿದರು, ಇನ್ನೊರ್ವ ಅಥಿತಿ ಶ್ರೀ ಮಂಜುನಾಥ ಗೌಡರ್ PSI Kumta ಅವರು ಮಕ್ಕಳಿಗೆ ಮೊಬೈಲ್ ಬಳಕೆ ಆಗು ಹೋಗುಗಳ ಜೊತೆಗೆ ಈ ರೀತಿಯ ತರಗತಿಗಳು ನಡೆಯುವದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಪಯೋಗ ಆಗುವದು ಹಾಗೂ ವ್ಯಕ್ತಿತ್ವ ವಿಕಸನ ಆಗುವದು ಎಂದು ತಿಳಿಸಿದರು.ಸಾವಿರಾರು ರೂಪಾಯಿ ನೀಡಬೇಕಾದ ಇಂತಹ ಕೋರ್ಸಗಳನ್ನು ಕೇವಲ 950 ರೂಪಾಯಿಗೆ ಇಷ್ಟು ಉತ್ತಮ ತರಬೇತಿ ನೀಡಿದಲ್ಲದೆ ಮಾದರಿ ಪರೀಕ್ಷೆ ಮಾಡಿ ವಿದ್ಯಾರ್ಥಿಗಳಿಗೆ ಧೈರ್ಯತುಂಬಿದಕ್ಕೆ ಹಾಗೂ ಇಂದಿನಿ0ದ ಆನಲೈನ್ ತರಬೇತಿ ಆರಂಭ ಮಾಡುವದು ಖುಷಿಯ ವಿಚಾರವಾಗಿದು ಎಲ್ಲರಿಗೂ ಸಹಕಾರಿ ಆಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊ0ಡರು.

ಈ ಸಂದರ್ಭದಲ್ಲಿ TCHR ಸಂಸ್ಥೆಯ ಸದಸ್ಯರಾದ ಸುಬ್ರಹ್ಮಣ್ಯ ಹೆಗಡೆ ಹಾಗೂ ಯುವಾ ಬ್ರಿಗೇಡ್ ಸದಸ್ಯರಾದ ರವೀಶ ನಾಯ್ಕ ಸಂದೀಪ ಮಡಿವಾಳ ಗೌರೀಶ ನಾಯ್ಕ, ಜ್ಯೋತಿ ನಾಯ್ಕ ವಿದ್ಯಾರ್ಥಿಗಳು ಹಾಗೂ ಇತರರು ಹಾಜರಿದ್ದರು.

error: