May 3, 2024

Bhavana Tv

Its Your Channel

ಬೇಸಿಗೆ ಶಿಬಿರದ ಉತ್ತಮ ಆಯ್ಕೆ ಬೀನಾ ವೈದ್ಯ

ಭಟ್ಕಳ :- ಎಪ್ರಿಲ್ 04 ರಿಂದ ಎಪ್ರಿಲ್ 15ರ ತನಕ ನಡೆಯುವ ನಲಿಯೋಣ ಬಾ ಮಕ್ಕಳ ಬೇಸಿಗೆ ಶಿಬಿರವು 5 ರಿಂದ 14 ನೇ ವಯಸ್ಸಿನ ಮಕ್ಕಳಿಗಾಗಿ ಬೀನಾ ವೈದ್ಯ ಶಾಲೆಯಲ್ಲಿ ನಡೆಯುತ್ತಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ ತಿಂಗಳ ಪರೀಕ್ಷೆಗಳು ಮುಗಿದು ಎಪ್ರೀಲ್‌ನ ಬೇಸಿಗೆ ಶಿಬಿರಗಳ ಹುಡುಕಾಟವನ್ನು ಪಾಲಕರು ಆರಂಭಿಸಿದ್ದಾರೆ. ಎಪ್ರೀಲ್‌ನಲ್ಲಿ ನಡೆಯುವ ಶಿಬಿರಗಳ ಬಗ್ಗೆ ಪಾಲಕರು, ಎಲ್ಲಿ ಶಿಬಿರಗಳು ನಡೆಯುತ್ತವೆ, ಯಾವ ತರಬೇತಿಗಳನ್ನು ಶಿಬಿರದಲ್ಲಿ ನೀಡಲಾಗುತ್ತದೆ ಎಂಬ ಕುತೂಹಲ ಮತ್ತು ಆಯ್ಕೆಯಲ್ಲಿರುವ ಪಾಲಕರಿಗೊಂದು ಉತ್ತಮ ಆಯ್ಕೆ ಮುರ್ಡೇಶ್ವರದ “ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಬೇಸಿಗೆ ಶಿಬಿರ”.
ದಿನಾಂಕ: 04/04/2022 ರಿಂದ 15/04/2022 ತನಕ ನಡೆಯುವ ನಲಿಯೋಣ ಬಾ ಮಕ್ಕಳ ಬೇಸಿಗೆ ಶಿಬಿರವು 5 ರಿಂದ 14 ನೇ ವಯಸ್ಸಿನ ಮಕ್ಕಳಿಗಾಗಿ ಶಿಬಿರವು ಬೀನಾ ವೈದ್ಯ ಶಾಲೆಯಲ್ಲಿ ನಡೆಯುತ್ತಿದೆ. ಮಕ್ಕಳು ಶಿಬಿರದಲ್ಲಿ ಎಲ್ಲರೊಂದಿಗೆ ಬೆರೆಯುತ್ತಾ, ನಲಿಯುತ್ತಾ ಕಲಿಯುವ ಕಲಿಕೆಯು ನವ ಉತ್ಸಾಹವನ್ನು, ಆತ್ಮಸ್ಥೆöÊರ್ಯವನ್ನು ಚಿಣ್ಣರಲ್ಲಿ ತುಂಬುತ್ತದೆ.
ತರಗತಿಯ ಕೋಣೆಯಲ್ಲಿ ಕಲಿತ ಶಿಕ್ಷಣ ಪರೀಕ್ಷೆಗೆ ಸೀಮಿತವಾಗಿರುತ್ತದೆ. ಆದರೆ ಇಂತಹ ಶಿಬಿರದಲ್ಲಿ ದೊರೆಯುವ ಶಿಕ್ಷಣ ಜೀವನಕ್ಕೆ ಅನುಕೂಲವಾಗಿರುತ್ತದೆ. ಶಿಕ್ಷಣದ ಜೊತೆ ಜೀವನ ಕೌಶಲ್ಯಗಳನ್ನು ಮತ್ತು ಮೌಲ್ಯಗಳನ್ನು ಬೆಳೆಸುತ್ತದೆ….
ಶಿಬಿರದಲ್ಲಿ, ಭಾಷಾಕೌಶಲ್ಯ, ನೃತ್ಯ, ಸಂಗೀತಾ, ಕರಾಟೆ, ಚಿತ್ರಕಲೆ, ಯಕ್ಷಗಾನ, ಯೋಗ, ಆರ್ಟ್ & ಕ್ರಾಫ್ಟ್, ಮೆಂಟಲ್ ಅರ್ಥಮೆಟಿಕ್, ಪಬ್ಲಿಕ್ ಸ್ಪೀಕಿಂಗ್, ಸ್ಪೋಕನ್ ಇಂಗ್ಲೀಷ್, ಸ್ಪೆಲ್ ಬೀ, ಸ್ಟೋರಿ ಟೆಲ್ಲಿಂಗ್, ರಂಗೋಲಿ, ಫ್ರೆöÊರ್‌ಲೆಸ್ ಕುಕ್ಕಿಂಗ್, ವೆಜಿಟೇಬಲ್ ಕಾರ್ವಿಂಗ್, ಕ್ರೀಡೆ ಹೀಗೆ ವಿವಿಧ ರೀತಿಯ ಆಟಗಳ ಜೊತೆಗೆ ಇನ್ನೂ ಅನೇಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯು ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ : 8317472854, 9164433134, 9449107704, 08385-260600

error: