September 14, 2024

Bhavana Tv

Its Your Channel

ಮುರುಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಬಿಳ್ಕೊಡುಗೆ ಸಮಾರಂಭ:

ದಿನಾ0ಕ: 08.02.2024 ಗುರುವಾರದಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭವನ್ನು ಆಚರಿಸಲಾಯಿತು. ಈ ಸಮಯದಲ್ಲಿ 2023-2024 ನೇ ಸಾಲಿನ 10ನೇ ತರಗತಿಯ ಸ್ಟೇಟ್ ಮತ್ತು ಐ.ಸಿ.ಎಸ್.ಇ. ಹಾಗೂ ದ್ವಿತೀಯ ಪಿ.ಯು.ಸಿ ಯ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮವು ದೀಪ ಬೆಳಗಿಸುವುದರ ಮೂಲಕ ಆರಂಭಿಸಲಾಯಿತು ಮುಖ್ಯ ಅಥಿತಿಯಾಗಿ ಶ್ರೀಯುತ ನಾರಾಯಣ ದೈಮನೆ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಕಲಿಕೆಯ ಗುರಿ ಸಾಧನೆ ಕುರಿತಾಗಿ ಹೀತ ನುಡಿಗಳನ್ನಾಡಿದರು. ಈಕರ‍್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರು, ಬೋಧಕ – ಬೋಧಕೆತರ ಸಿಬ್ಬಂದಿ ರ‍್ಗದವರು ವಿದ್ಯರ‍್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಂಕಾಳ್ ಎಸ್. ವೈದ್ಯ ಮಾನ್ಯ ಸಚಿವರು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಉ.ಕ.ಜಿಲ್ಲಾಉಸ್ತುವಾರಿ ಸಚಿವರು, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿಯವರಾದ ಶ್ರೀಮತಿ ಪುಷ್ಪಲತಾ ಎಂ ವೈದ್ಯರವರು ಶುಭ ಹಾರೈಸಿದರು

error: