December 21, 2024

Bhavana Tv

Its Your Channel

ರಜತ ಕಿರೀಟಧಾರಿ ಶಂಕರ ಹೆಗಡೆ ನೀಲ್ಕೋಡು ಅವರಿಗೆ ಅವರ 25 ವರ್ಷದ ಯಕ್ಷಪಯಣದ ಸುಸಂದರ್ಭದಲ್ಲಿ ಗೌರವ

ಸಿದ್ದಾಪುರ: ಶ್ರೀ ಎನ್ ಬಿ ಹೆಗಡೆ ಮತ್ತೀನಹಳ್ಳಿ ಸನ್ಮಾನ ಸಮಿತಿ ನಾಣಿಕಟ್ಟಾ ಮತ್ತು ಎನ್ ಬಿ ಹಡಗಡೆ ಅಭಿಮಾನಿ ಬಳಗ ಇವರ ಸಂಯೋಜನೆಯಲ್ಲಿ ತ್ಯಾಗಲಿ ಸೇವಾ ಸಹಕಾರಿ ಸಂಘದ ಆವಾರದಲ್ಲಿ ದಿನಾಂಕ 13ರಂದು ಸೇವಾಭಿನಂದನ ಕಾರ್ಯಕ್ರಮದಲ್ಲಿ ರಜತ ಕಿರೀಟಧಾರಿ ಶಂಕರ ಹೆಗಡೆ ನೀಲ್ಕೋಡು ಅವರಿಗೆ ,ಅವರ 25 ವರ್ಷದ ಯಕ್ಷಪಯಣದ ಸುಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಎನ್ ಬಿ ಹೆಗಡೆ ಮತ್ತೀಹಳ್ಳಿ ಅವರು ಸಹಕಾರಿ ಸಂಘದಲ್ಲಿ ಕಳೆದ 39 ವರ್ಷದಿಂದ ಸುದೀರ್ಘವಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಅವರು ಕಳೆದ 27 ವರ್ಷಗಳಿಂದ ತ್ಯಾಗಲಿ ಸೇವಾ ಸಹಕಾರಿ ಸಂಘದ ದಕ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಅವರ ಪಾರದರ್ಶಕತೆ, ಪ್ರಾಮಾಣಿಕ ಹೋರಾಟ,ತತ್ವ, ಅಭಿವೃದ್ಧಿಪರ ಚಿಂತನೆ,ಆದರ್ಶ,ಕೊಡುಗೆ, ಅವಿರತ ಪ್ರಯತ್ನ, ಅರ್ಪಣಾ ಮನೋಭಾವ ಎಲ್ಲವನ್ನೂ ಗಮನಿಸಿದ ತ್ಯಾಗಲಿ ಭಾಗದ ಸಾರ್ವಜನಿಕರೇಲ್ಲಾ ಸೇರಿ ಎನ್ ಬಿ ಹೆಗಡೆ ಅವರನ್ನು ಸೇವಾಭಿನಂದನ ಪೂರ್ವಕವಾಗಿ ಸನ್ಮಾನಿಸಿದ್ದಾರೆ

ವೇದಿಕೆಯಯಲ್ಲಿ ಜಿಲ್ಲೆಯ ಹಿರಿಯ ಸಹಕಾರಿಗಳಾದ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್ ಬಿ ಹೆಗಡೆ ಮತ್ತೀಹಳ್ಳಿ, ಎಮ್ ಆರ್ ಹೆಗಡೆ ಮತ್ತೀಹಳ್ಳಿ, ಎ ಜಿ ನಾಯ್ಕ ಹಂಗಾರಖAಡ,ತ್ಯಾಗಲಿ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕರಾದ ಸುಧಾಕರ ಜಿ ಹೆಗಡೆ ಮಾದ್ನಕಳ್ , ಹಾಗೇ ತ್ಯಾಗಲಿ ಸೇವಾ ಸಹಕಾರಿ ಸಂಘದ ಸದಸ್ಯರಾದ ಆರ್ ಟಿ ನಾಯ್ಕ ಹಂಗಾರಖAಡ, ರಮೇಶ್ ಎನ್ ನಾಯ್ಕ ಬಾಳೇಕೈ, ನಟರಾಜ ಎಮ್ ಹೆಗಡೆ ಇದ್ದರು.

ಕಾರ್ಯಕ್ರಮದ ಪ್ರಯುಕ್ತ ಯಕ್ಷಗಾನದ ಗಜಗಟ್ಟಿ ಮೇಳ ಎನಿಸಿಕೊಂಡ ಸಾಲಿಗ್ರಾಮ ಮೇಳದ ಪ್ರಧಾನ ಭಾಗವತರಾದ ರಾಮಕೃಷ್ಣ ಹೆಗಡೆ “ಹಿಲ್ಲೂರು ಯಕ್ಷಮಿತ್ರ ಬಳಗ” ಇವರಿಂದ ಅದ್ದೂರಿ ಯಕ್ಷಗಾನದ “ಗಾನ -ನೃತ್ಯ ವೈಭವ ” ಕಾರ್ಯಕ್ರಮ ನಡೆಯಿತು.

ಸಾವಿರಾರು ಕಲಾಪ್ರೇಕ್ಷಕರು ಗಾನ-ನೃತ್ಯ ವೈಭವದ ರಸದೌತಣವನ್ನು ಆಸ್ವಾದಿಸಿ,ಆನಂದಿಸಿದರು.

error: