December 19, 2024

Bhavana Tv

Its Your Channel

ಅರಣ್ಯ ಹಕ್ಕು ಕಾಯ್ದೆ ಅರಣ್ಯ ವಾಸಿಗಳ ಪರವಾಗಿದೆ ಆದರೆ ಹೊಸ ಅರಣ್ಯ ಅತಿಕ್ರಮಣಕ್ಕೆ ಅವಕಾಶವಿಲ್ಲ -ರವೀಂದ್ರ ನಾಯ್ಕ

ಸಿದ್ದಾಪುರ-ಅರಣ್ಯ ಹಕ್ಕು ಕಾಯ್ದೆ ಅರಣ್ಯ ವಾಸಿಗಳ ಪರವಾಗಿದೆ. ಆದರೆ ಹೊಸ ಅರಣ್ಯ ಅತಿಕ್ರಮಣಕ್ಕೆ ಅವಕಾಶವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಇಂದು ಅರಣ್ಯ ಸಿಬ್ಬಂದಿಗಳಿAದ ಅರಣ್ಯ ವಾಸಿಗಳಿಗೆ ಉಂಟಾದ ದೌರ್ಜನ್ಯ, ಕಿರುಕುಳ ಹಾಗೂ ಸಾಗುವಳಿ ಆತಂಕವಾಗಿರುವ ಪ್ರದೇಶಗಳಿಗೆ ಭೇಟಿ ಕೊಟ್ಟು ಹೋರಾಟಗಾರರ ಪದಾಧಿಕಾರಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಮೇಲಿನಂತೆ ಹೇಳಿದರು.

ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಆರ್ಜಿ ಸಲ್ಲಿಸಿದ ನಂತರ ಅತಿಕ್ರಮಣದಾರರಿಗೆ ಆತಂಕ ಕಿರುಕುಳ ಹಾಗೂ ದೌರ್ಜನ್ಯ ಎಸಗಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದಾಗ್ಯೂ, ಪದೇ ಪದೇ ಅರಣ್ಯ ಸಿಬ್ಬಂದಿಗಳಿAದ ಜಿಲ್ಲೆಯಲ್ಲಿ ಕಾನೂನು ಬಾಹೀರ ಕೃತ್ಯ ಜರುಗುತ್ತಿರುವುದು ವಿಷಾದಕರ. ಅರಣ್ಯ ಭೂಮಿ ಮಂಜೂರಿಯಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಹಿನ್ನೆಲೆಯಲ್ಲಿ ಮಂಜೂರು ಪ್ರಕ್ರಿಯೆಯಲ್ಲಿ ತೊಡಕು ಉಂಟಾಗಿದ್ದು ಈ
ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಗಳು ಅರಣ್ಯ ವಾಸಿಗಳಿಗೆ ಕಿರುಕುಳ ನೀಡುವುದು ಸಮಂಜಸವಲ್ಲ ಎಂದು ಅವರು ಹೇಳಿದರು.

ಜಿ.ಪಿ.ಎಸ್.ಗೆ ಆಕ್ಷೇಪ :
ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಶೆ 7 ರಷ್ಟು ಅರ್ಜಿಗಳಿಗೆ ಜಿ.ಪಿ.ಎಸ್ ಆಗಿಲ್ಲ ಶೇ. 73 ರಷ್ಟು ಅರ್ಜಿಗಳಿಗೆ ಆಗಿರುವ ಜಿ.ಪಿ.ಎಸ್. ಅಸಮರ್ಪಕವಾಗಿದೆ. ಹಾಗಾಗಿ ಜಿ.ಪಿ.ಎಸ್ ಮರು ಪರಿಶೀಲನೆ ಅರ್ಜಿ ಅತಿಕ್ರಮಣ ದಾರರು ಸಲ್ಲಿಸುವದು ಅನಿವಾರ್ಯವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷರಾದ ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಹೇಳಿದರು.

ಹೋರಾಟಗಾರರಾದ ವಿನಾಯಕ ನಾಯ್ಕ ಬಿ.ಡಿ.ನಾಯ್ಕ ಕುರ್ಗೆತೋಟ, ಕೆ.ಟಿ. ನಾಯ್ಕ ಕ್ಯಾದಗಿ, ಸುಬ್ಬು ಗೌಡ, ರಾಜು ನಾಯ್ಕ, ಮುಂತಾದವರು ಉಪಸ್ಥಿತರಿದ್ದರು. .

error: