December 21, 2024

Bhavana Tv

Its Your Channel

ಅರಣ್ಯ ಭೂಮಿ ಹಕ್ಕು ದಾನ ಅಥವಾ ಭಿಕ್ಷೆಯಲ್ಲ ; ಸಂವಿಧಾನ ಬದ್ಧಹಕ್ಕು- ರವೀಂದ್ರನಾಯ್ಕ.

ಸಿದ್ಧಾಪುರ: ವಾಸ್ತವ್ಯ ಮತ್ತು ಜೀವನಕ್ಕಾಗಿ ಅರಣ್ಯ ಭೂಮಿಯನ್ನ ಅವಲಂಭಿತವಾಗಿರುವ ಅರಣ್ಯವಾಸಿಗಳಿಗೆ ನೀಡುವ ಅರಣ್ಯ ಭೂಮಿ ಹಕ್ಕು ದಾನ ಅಥವಾ ಭಿಕ್ಷೆಯಲ್ಲ. ಸಂವಿಧಾನ ಬದ್ಧ ಹಕ್ಕು. ಸರಕಾರ ಗಂಭೀರವಾಗಿ ಚಿಂತನೆ ಮಾಡಬೇಕೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಯ್ಕ ಹೇಳಿದರು.

ಅವರು ದಿ. 5 ರಂದು ಸಿದ್ಧಾಪುರ ತಾಲೂಕಿನ ನಿಲ್ಕುಂದ, ಹೆಗ್ಗರಣಿ, ತಂಡಾಗುAಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ವಾಸ್ತವ್ಯ ಮತ್ತು ಭೂಮಿ ಹಕ್ಕು ನೀಡುವಂತದ್ದು ಸರಕಾರದ ಮೂಲಭೂತ ಕರ್ತವ್ಯವಾಗಿದ್ದು, ಈ ದಿಶೆಯಲ್ಲಿ ಸರಕಾರ ಕಾನೂನು ಬದ್ಧವಾಗಿ ಚಿಂತಿಸದೇ ಇರುವುದು ಖೇದಕರ ಎಂದು ಅವರು ಹೇಳುತ್ತಾ ಭೂಮಿ ಹಕ್ಕು ನೀಡುವಲ್ಲಿ ಸುಫ್ರೀಂ ಕೋರ್ಟಿಗೆ ಅರಣ್ಯವಾಸಿಗಳ ಪರವಾಗಿ ಸರಕಾರ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಅವರು ತಿಳಿಸಿದರು.
ಸಭೆಯಲ್ಲಿ ಹರಿಹರ ನಾಯ್ಕ ಸ್ವಾಗತಿಸಿದರು. ಸೀತಾರಾಮ ಹುಲಿಯ ಗೌಡ, ಮಾಬ್ಲೇಶ್ವರ ಕೃಷ್ಣಪ್ಪನಾಯ್ಕ, ದ್ಯಾವ ಗೌಡ, ಲಿಂಗು ಗೌಡ, ಮಂಜುನಾಥ ನಾಯ್ಕ, ಭದ್ರಗೌಡ, ಎಮ್ ಪಿ ಗೌಡ, ಮಧುಕೇಶ್ವರ ನಾಯ್ಕ, ಈಶ್ವರ ಮರ‍್ಯಾ ನಾಯ್ಕ, ಅಬ್ಬಾಸ್, ತಮ್ಮಾಣಿ ಗೌಡ ಹುಕ್ಕಳಿ, ವಿನೋಧ ಗೌಡ, ಕೃಷ್ಣ ನಾಯ್ಕ ಗೋರೆಬೈಲ್, ರಾಮಚಂದ್ರನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ತೀವ್ರಹೋರಾಟಕ್ಕೆ ಚಾಲನೆ:
ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟಗಾರರ ವೇದಿಕೆಯು ವ್ಯಾಪಕವಾದ ಹೋರಾಟಕ್ಕೆ ಚಾಲನೆ ನೀಡಿದ್ದು, ಭೂಮಿ ಹಕ್ಕಿಗಾಗಿ ಕಾನೂನಾತ್ಮಕ ಹೋರಾಟವನ್ನು ಸಹಿತ ತೀವ್ರಗೊಳಿಸುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ
ಹೇಳಿದರು.

error: