March 26, 2025

Bhavana Tv

Its Your Channel

ಅಪರೂಪದ ದೇವಾಲಯ. ಬಲಮುರಿ, ತ್ರಿನೇತ್ರ, ಆರುಕೈಗಳುಳ್ಳ ಮಹಾ ಗಣಪತಿ

ಸಿದ್ದಾಪುರ : ಇದೊಂದು ಅಪರೂಪದ ದೇವಾಲಯ. ಬಲಮುರಿ, ತ್ರಿನೇತ್ರ, ಆರುಕೈಗಳುಳ್ಳ ಮಹಾ ಗಣಪತಿ ನಾಟ್ಯ ವಿನಾಯಕನಾಗಿ, ಯಕ್ಷಗಾನ ವೇಷ ಭೂಷಣ ಧರಿಸಿ ಕಲಗದ್ದೆಯಲ್ಲಿ ನೆಲಸಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಟಗಿಯ ಕಲಗದ್ದೆಯಲ್ಲಿ ನೆಲೆಸಿರುವ ಈ ಗಣಪ ಭಕ್ತರ ಸಂಕಷ್ಟ ದೂರ ಮಾಡುವ ವಿಘ್ನನಿವಾರಕನೂ ಆಗಿದ್ದಾನೆ….ನೀನೇ ಎಂದರೆ ಕೈ ಹಿಡಿದು ನಡೆಸುವ ಶಕ್ತಿ ದೇವಾಲಯ ಇದು. ಈ ದೇವರ ವರದಾಯಕನಾಗಿ ಪ್ರಸಾದ ನೀಡುವ ಪರಿಯೇ ಅಚ್ಚರಿ! ಸ್ವತಃ ಯಕ್ಷಗಾನ ಕಲಾವಿದರೂ, ಮಹಾಗಣಪತಿ ಆರಾಧಕರೂ ಆದ ವಿನಾಯಕ ಹೆಗಡೆ ಅವರು ಸ್ಥಾಪಕರು ಹಾಗೂ ಪ್ರಧಾನ ಅರ್ಚಕರು(೯೪೪೮೭೫೬೨೬೩).
ಪ್ರತೀ ಸಂಕಷ್ಟಿಗೂ ಸಂಕಷ್ಟ ಹರ ರಥೋತ್ಸವ ನಡೆಯುತ್ತದೆ. ಅನಾರೋಗ್ಯ, ವಿವಾಹ, ಉದ್ಯೋಗ, ಸಂತಾನದAತಹ ಸಮಸ್ಯೆಗಳಿಗೂ ಶೀಘ್ರ ಪರಿಹಾರ ಸೂಚಿಸುವ ದೇವನಾಗಿದ್ದಾನೆ.

error: